ಬಿಳಿ ಕೂದಲನ್ನು ಬುಡದಿಂದಲೇ ಶಾಶ್ವತವಾಗಿ ಮತ್ತು ನೈಸರ್ಗಿಕವಾಗಿ ಕಪ್ಪಾಗಿಸಬೇಕೆ? ಈ ಮೂರು ವಸ್ತುಗಳನ್ನು ಬಳಸಿದರೆ ಸಾಕು! :ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಕಪ್ಪಾಗಿಸಬಹುದು ಅದು ಕೂಡಾ ಶಾಶ್ವತವಾಗಿ. ಬೆಂಗಳೂರು :ವಯಸ್ಸು ಹೆಚ್ಚಾದಂತೆ ಕಪ್ಪು ಕೂದಲು ಬಿಳಿಯಾಗುವುದು ಸಾಮಾನ್ಯ. ಆದರೆ, ಈಗಿನ ಕಾಲದಲ್ಲಿ 20 ರಿಂದ 25 ವರ್ಷ ವಯಸ್ಸಿನ ಯುವಕರು ಕೂಡಾ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುವಂತಾಗಿದೆ.ಕಿರಿ ವಯಸ್ಸಿನಲ್ಲಿಯೇ ಬಿಳಿಯಾಗುವ ಕೂದಲು ಮುಜುಗರವನ್ನು ಉಂಟು ಮಾಡುತ್ತದೆ.ಇದು ನಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು ಅದು ಕೂಡಾ ಶಾಶ್ವತವಾಗಿ. ಬಿಳಿ ಕೂದಲನ್ನು ಕಪ್ಪಾಗಿಸುವ ವಸ್ತುಗಳು :ಬ್ಲಾಕ್ ಟೀ :ಬಿಳಿ ಕೂದಲಿಗೆ ಅತ್ಯುತ್ತಮ ಪರಿಹಾರವಾಗಿದೆ.ಇದು ಕೂದಲಿನ ಟೋನರಿನಂತೆ ಕೆಲಸ ಮಾಡುತ್ತದೆ.ಚಹಾ ಪುಡಿಯನ್ನು ನೀರಿನಲ್ಲಿ ಬಿಸಿ ಮಾಡಬೇಕು. ಹೀಗೆ ಬಿಸಿ ಮಾಡಿದಾಗ ನೀರು ಗಾಢವಾದ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗೆ ಕಪ್ಪಾದ ನೀರನ್ನು ಸ್ನಾನ ಮಾಡುವಾಗ,ಕೂದಲಿನ ತುದಿಯಿಂದ ಬುಡದವರೆಗೂ ಹಚ್ಚಬೇಕು.ಕೂದಲು ಸಂಪೂರ್ಣವಾಗಿ ಒಣಗಿದಾಗ,ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದನ್ನೂ ಓದಿ : ಹರ್ಬಲ್ ಹೇರ್ ಮಾಸ್ಕ್:ಅನೇಕ ಆಯುರ್ವೇದ ವಸ್ತುಗಳ ಸಹಾಯದಿಂದ ಮನೆಯಲ್ಲಿ ಹೇರ್ ಮಾಸ್ಕ್ ತಯಾರಿಸಬಹುದು.ಒಂದು ಚಮಚ ಇಂಡಿಗೊ, ಒಂದು ಚಮಚ ತ್ರಿಫಲ ಪುಡಿ, ಒಂದು ಚಮಚ ಬ್ರಾಹ್ಮಿ ಪುಡಿ,, ಒಂದು ಚಮಚ ಆಮ್ಲಾ ಪುಡಿ ಮತ್ತು ಒಂದು ಚಮಚ ಕಾಫಿಯನ್ನು ಒಂದು ಬೌಲ್‌ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.ಈಗ ಅದಕ್ಕೆ ನೀರು ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ.ನಂತರ ಈ ಪೇಸ್ಟ್ ತಣ್ಣಗಾದ ಮೇಲೆ ಕೂದಲಿಗೆ ಹಚ್ಚಿ ಮತ್ತು 30 ರಿಂದ 45 ನಿಮಿಷಗಳ ಬಿಡಿ. ನಂತರ ಕೂದಲನ್ನು ತೊಳೆಯಿರಿ. ನಿಯಮಿತವಾಗಿ ಈ ಪೇಸ್ಟ್ ಅನ್ನು ಬಳಸುವದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಮೆಂತ್ಯೆ ಬೀಜಗಳು:ಮೆಂತ್ಯೆ ಬೀಜಗಳ ಸಹಾಯದಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.ಮೆಂತ್ಯೆ ಕಾಳುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಎದ್ದ ನಂತರ ಈ ಕಾಳುಗಳನ್ನು ರುಬ್ಬಿ ಹೇರ್ ಮಾಸ್ಕ್ ನಂತೆ ಹಚ್ಚಿ. ಕೆಲವು ಗಂಟೆಗಳವರೆಗೆ ಒಣಗಲು ಬಿಡಿ.ಕೆಲವು ದಿನಗಳವರೆಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿದರೆ,ಒಂದೂ ಬಿಳಿ ಕೂದಲು ಕಾಣಿಸುವುದಿಲ್ಲ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...