ಕೇವಲ ಒಂದು ಹೂ ಬಳಸಿ ನಿಮ್ಮ ಕೂದಲನ್ನು ಉದ್ದ ಹಾಗೂ ದಟ್ಟವಾಗಿಸಹುದು..! : ಅನೇಕರು ತಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಉದ್ದವಾಗಿ ಬೆಳೆಸಲು ಬಯಸುತ್ತಾರೆ. ಅದಕ್ಕಾಗಿ ಮನೆಯಲ್ಲಿಯೇ ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಕೇವಲ ದಾಸವಾಳ ಹೂ ಬಳಸಿ ಕೂದಲಿನ ರಕ್ಷಣೆ ಹೇಗೆ ಮಾಡುವುದು? ಗೊತ್ತಾಗಬೇಕಾ... ? ಹಾಗಾದರೆ ಮುಂದೆ ಓದಿ... :ಅನೇಕರು ತಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಉದ್ದವಾಗಿ ಬೆಳೆಸಲು ಬಯಸುತ್ತಾರೆ. ಅದಕ್ಕಾಗಿ ಮನೆಯಲ್ಲಿಯೇ ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಕೇವಲ ದಾಸವಾಳ ಹೂ ಬಳಸಿ ಕೂದಲಿನ ರಕ್ಷಣೆ ಹೇಗೆ ಮಾಡುವುದು? ಗೊತ್ತಾಗಬೇಕಾ... ? ಹಾಗಾದರೆ ಮುಂದೆ ಓದಿ... ಆಮ್ಲಾ, ದಾಸವಾಳ ಮಾಸ್ಕ್‌:ಆಮ್ಲಾ, ದಾಸವಾಳ ಹೂ ಹಾಗೂ ಎಲೆಗಳನ್ನು ಬೆರಸಿ ಸ್ವಲ್ಪ ನೀರು ಬೆರೆಸಿ ಮೃದುವಾದ ಪೇಸ್ಟ್‌ ಮಾಡಿಕೊಳ್ಳಿ. ನಂತರ ಈ ಮಾಸ್ಕ್‌ ಅನ್ನು ನಿಮ್ಮ ಕೂದಲು ಹಾಗೂ ನೆತ್ತಿಯ ಮೇಲೆ ಹಚ್ಚಿ. 45 ನಿಮಿಷಗಳ ಕಾಲ ಇರಿಸಿ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಭಾರಿ ಇದನ್ನು ಉಪಯೋಗಸುವುದರಿಂದ ನಿಮ್ಮ ಕೂದಲನ್ನು ಇದು ದೃಢಗೊಳಿಸುತ್ತದೆ. ಇದ್ನನೂ ಓದಿ: ದಾಸವಾಳದ, ಮೊಸರು ಮಾಸ್ಕ್:ದಾಸವಾಳದ ಜೊತೆಗೆ ಮೊಸರು ಮಿಕ್ಸ್‌ ಮಾಡಿ ತಯಾರಿಸಲಾಗುವ ಈ ಪ್ಯಾಕ್‌ ನಿಮ್ಮ ಕೂದಲನ್ನು ಬಲಪಡಿಸುವುದು ಮಾತ್ರವಲ್ಲದೆ ಅದನ್ನು ಪೋಷಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ. ದಾಸವಾಳದ ಹೂ ಹಾಗೂ ಎಲೆಗಳನ್ನು ಮೃದುವಾಗಿ ಪೇಸ್ಟ್‌ ಮಾಡಿ. ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. 45 ನಿಮಿಷದಿಂದ 1 ಗಂಡೆಯ ಕಾಲ ಇದನ್ನು ಒಣಗಲು ಬಿಡಿ. ನಂತರ ತಕೆ ಸ್ನಾನ ಮಾಡಿ. ದಾಸವಾಳ ಹಾಗೂ ಶುಂಠಿ:ಎರಡೂ ಸಾಮಾಗ್ರಿಗಳನ್ನು ಒಂದು ಬೌಲ್ ಗೆ ಹಾಕಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ಕೂದಲು ಮತ್ತು ನೆತ್ತಿಗೆ ಅನ್ವಯಿಸಿ. ಈ ಹೇರ್ ಮಾಸ್ಕ್ ಅನ್ನು 25 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ವಾರಕ್ಕೆ ಎರಡು ಬಾರಿ ಇದನ್ನು ಅನ್ವಯಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...