ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತಿದೆಯೇ? ಈ ಸಲಹೆಗಳಿಂದ ದೀರ್ಘ ದಿನಗಳವರೆಗೆ ಬಳಸಿ..! : ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಸಾಮಾನ್ಯ ವಿಷಯ. ಮತ್ತು ಸಿಲಿಂಡರ್ ಗಳ ಬೆಲೆ ಏರಿಕೆ ಒಂದು ರೀತಿಯ ತಲೆನೋವು ಹೌದು. ಯಾವಾಗಲೂ ಬೆಲೆ ಹೆಚ್ಚು ಕಡಿಮೆ ಆಗುತ್ತದೆ ಆದರೆ ಇದಕ್ಕೆ ಒಂದು ಉಪಾಯ ಎಂದರೆ ಸಿಲಿಂಡರ್ ಹೆಚ್ಚಿನ ದಿನ ಬಳಕೆಗೆ ಬರುವಂತೆ ಇಲ್ಲಿದೆ ಕೆಲವು ಸಲಹೆಗಳು. ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಸಾಮಾನ್ಯ ವಿಷಯ. ಮತ್ತು ಸಿಲಿಂಡರ್ ಗಳ ಬೆಲೆ ಏರಿಕೆ ಒಂದು ರೀತಿಯ ತಲೆನೋವು ಹೌದು. ಯಾವಾಗಲೂ ಬೆಲೆ ಹೆಚ್ಚು ಕಡಿಮೆ ಆಗುತ್ತದೆ ಆದರೆ ಇದಕ್ಕೆ ಒಂದು ಉಪಾಯ ಎಂದರೆ ಸಿಲಿಂಡರ್ ಹೆಚ್ಚಿನ ದಿನ ಬಳಕೆಗೆ ಬರುವಂತೆ ಇಲ್ಲಿದೆ ಕೆಲವು ಸಲಹೆಗಳು. ಇದನ್ನು ಓದಿ : ಅಡುಗೆ ಮಾಡುವಾಗ ಒದ್ದೆಯಾದ ಪಾತ್ರೆಗಳನ್ನು ಗ್ಯಾಸ್ ಮೇಲೆ ಇಡುತ್ತೇವೆ ಇಂಥ ಸಂದರ್ಭದಲ್ಲಿ ಒದ್ದೆಯಾದ ಪಾತ್ರೆ ಒಣಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಈ ಕಾರಣದಿಂದ ಅನಿಲದ ವ್ಯರ್ಥ ಹೆಚ್ಚಾಗುತ್ತದೆ ಈ ಕಾರಣದಿಂದ ಒಣಗಿದ ಪಾತ್ರೆಯನ್ನು ಅಥವಾ ಬಟ್ಟೆಯಿಂದ ಒರೆಸಿದ ನಂತರ ಪಾತ್ರೆಯನ್ನು ಗ್ಯಾಸ್ ಮೇಲೆ ಇರಿಸುವುದು ಒಳ್ಳೆಯದು. ಅಡುಗೆ ಮಾಡಲು ಪ್ರೆಶರ್ ಕುಕ್ಕರ್ಗಳನ್ನ ಬಳಸುವುದು ಉತ್ತಮ ಮತ್ತು ಅಡುಗೆ ಬೇಗ ಬೇಯಲು ಪಾತ್ರೆಗಳ ಮೇಲೆ ಮುಚ್ಚಳವನ್ನು ಬಳಸುವುದು ಒಳ್ಳೆಯದು ಈ ಕಾರಣದಿಂದ ಆಹಾರ ಬೇಗ ಬೇಯುತ್ತದೆ ಮತ್ತು ಗ್ಯಾಸ್ ಉಳಿತಾಯವಾಗುತ್ತದೆ. ಗ್ಯಾಸ್ ಬರ್ನರ್ ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಒಳ್ಳೆಯದು ಮತ್ತು ಸ್ವಚ್ಛಗೊಳಿಸದ ಕಾರಣ ಧೂಳಿನಿಂದ ತುಂಬಿರುತ್ತದೆ ಈ ಕಾರಣದಿಂದ ಗ್ಯಾಸ್ ಸರಿಯಾಗಿ ಉರಿಯುವುದಿಲ್ಲ ಮತ್ತು ಗ್ಯಾಸ್ ವ್ಯರ್ಥವಾಗುತ್ತದೆ. ಇದನ್ನು ಓದಿ : ಫ್ರಿಡ್ಜ್ ತೆಗೆದ ಪಾತ್ರೆಗಳನ್ನು ನೇರವಾಗಿ ಗ್ಯಾಸ್ ಸಿನ ಮೇಲೆ ಇಡುವುದು ತಪ್ಪು ಏಕೆಂದರೆ ತಂಪಾದ ವಸ್ತುಗಳು ಮತ್ತೆ ಬಿಸಿಯಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಈ ಕಾರಣದಿಂದ ಗ್ಯಾಸ್ ಹೆಚ್ಚು ಖರ್ಚಾಗುತ್ತದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...