ಮಳೆಗಾಲದಲ್ಲಿ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸಿಂಪಲ್ ಟಿಪ್ಸ್ ಮಾನ್ಸೂನ್‌ನಲ್ಲಿ ಮಳೆಯ ಆನಂದ ಒಂದೆಡೆಯಾದರೆ, ಸೋಂಕಿನ ಅಪಾಯ ಮತ್ತೊಂದೆಡೆ. ಅದರಲ್ಲೂ, ಮಳೆಗಾಲದಲ್ಲಿ ಚರ್ಮ ಮಾತ್ರವಲ್ಲದೆ, ಕಣ್ಣಿನ ಸೋಂಕಿನ ಅಪಾಯವೂ ಅಧಿಕವಾಗಿರುತ್ತದೆ. :ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ಮಾನ್ಸೂನ್‌ () ಆರಂಭವಾಗಿದೆ. ಮುಂಗಾರು ಮಳೆಯೊಂದಿಗೆ ಕೃಷಿ ಚಟುವಟಿಕೆಗಳು ಹೆಚ್ಚಾಗುತ್ತವೆ. ಮಾನ್ಸೂನ್‌ನಲ್ಲಿ ಮನೆಯ ಆನಂದದೊಂದಿಗೆ ಸೋಂಕಿನ ಅಪಾಯವೂ ಇದ್ದೇ ಇರುತ್ತದೆ. ಹಾಗಾಗಿ ಕೆಲವು ವಿಷಯಗಳ ಬಗ್ಗೆ ವಿಶೇಷವಾಗಿ ಗಮನ ವಹಿಸುವುದು ಅವಶ್ಯಕವಾಗಿದೆ. ಮಾನ್ಸೂನ್‌ನಲ್ಲಿ ಯಾವುದೇ( ) ಅಥವಾ ಸೋಂಕನ್ನು ತಪ್ಪಿಸಲು ಕೆಲವು ಸಲಹೆಗಳು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅಂತಹ ಕೆಲವು ಸರಳ ಸಲಹೆಗಳೆಂದರೆ... ಆಗಾಗ್ಗೆ ಕಣ್ಣುಗಳನ್ನು ಸ್ಪರ್ಶಿಸುವುದು:ಪದೇ ಪದೇ ಕೊಳಕು ಕೈಗಳಿಂದಇದ್ದರೆ ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ. ಇದನ್ನೂ ಓದಿ- ಕಣ್ಣುಗಳನ್ನು ಉಜ್ಜುವುದು:ಕಣ್ಣಿನ ಬಳಿ ತುರಿಕೆಯಾಗುತ್ತಿದ್ದರೆ ಕಣ್ಣುಗಳನ್ನು ಉಜ್ಜುವ ಬದಲಿಗೆ ಶುದ್ಧವಾದ ಕಾಟನ್ ಬಟ್ಟೆಯಿಂದ ಕಣ್ಣುಗಳನ್ನು ಒರೆಸಿ. ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸಬೇಡಿ:ಮಳೆಗಾಲದಲ್ಲಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುವುದನ್ನು ತಪ್ಪಿಸಿ. ಜೊತೆಗೆ ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಲು ರೈನ್ ಕೋಟ್ ಧರಿಸಿ ಅಥವಾ ಛತ್ರಿಯನ್ನು ಬಳಸಿ. ಇದನ್ನೂ ಓದಿ- ಇವುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ:ಮಳೆಗಾಲದಲ್ಲಿ ಬೆವರು, ಒದ್ದೆಯ ಕಾರಣದಿಂದಾಗಿ ಸೋಂಕಿನ ಅಪಾಯ ಹೆಚ್ಚಿರುವುದರಿಂದ ಕರವಸ್ತ್ರಗಳು, ಸನ್‌ಗ್ಲಾಸ್‌ಗಳು ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳಂತಹ ನಿಮ್ಮ ವೈಯಕ್ತಿಕ ಉತ್ಪನ್ನಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...