ಊಟವಾದ ನಂತರ ಮಾಡುವ ಈ ಚಿಕ್ಕ ಕೆಲಸದಿಂದ ಮಧುಮೇಹ ನಿಯಂತ್ರಣಕ್ಕೆ ಬರುವುದು ! ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ.ಆಹಾರದ ಮೂಲಕವೇ ಸಕ್ಕರೆಯನ್ನು ನಿಯಂತ್ರಿಸಬಹುದು. ಅಲ್ಲದೆ, ಊಟದ ನಂತರ ಮಾಡುವ ಈ ಒಂದು ಕೆಲಸದಿಂದ ಹೆಚ್ಚುತ್ತಿರುವ ಬ್ಲಡ್ ಶುಗರ್ ಅನ್ನು ನಿಯಂತ್ರಣಕ್ಕೆ ತರಬಹುದು. ಬೆಂಗಳೂರು :ದೇಶ ಮತ್ತು ವಿಶ್ವದಲ್ಲಿ ಮಧುಮೇಹದ ಕಾಯಿಲೆ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ.ಮಧುಮೇಹವನ್ನು ಸ್ಲೋ ಪಾಯಿಸನ್ ಎಂದೂ ಕರೆಯಲಾಗುತ್ತದೆ. ಏಕೆಂದರೆ ಇದು ಕ್ರಮೇಣ ರೋಗಿಗಳ ದೇಹದ ಮೇಲೆ ಪರಿಣಾಮ ಬೀರುತ್ತದೆ.ಇದು ನಿಧಾನವಾಗಿ ದೇಹದ ಇತರ ಭಾಗಗಳ ಮೇಲೆ ಕೂಡಾ ಪರಿಣಾಮ ಬೀರಲು ಆರಂಭಿಸುತ್ತದೆ.ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ.ಆಹಾರದ ಮೂಲಕವೇ ಸಕ್ಕರೆಯನ್ನು ನಿಯಂತ್ರಿಸಬಹುದು. ಅಲ್ಲದೆ, ಊಟದ ನಂತರ ಮಾಡುವ ಈ ಒಂದು ಕೆಲಸದಿಂದ ಹೆಚ್ಚುತ್ತಿರುವ ಬ್ಲಡ್ ಶುಗರ್ ಅನ್ನು ನಿಯಂತ್ರಣಕ್ಕೆ ತರಬಹುದು. ಊಟದ ನಂತರ ವಾಕಿಂಗ್ :ಹೊಸ ಅಧ್ಯಯನದ ಪ್ರಕಾರ, ಊಟದ ನಂತರ ಕೇವಲ 10 ರಿಂದ 15 ನಿಮಿಷಗಳ ಕಾಲ ನಡೆಯುವುದರಿಂದನಿಯಂತ್ರಣದಲ್ಲಿಡಬಹುದು.ವಿಶೇಷವಾಗಿ ಪ್ರಿ ಡಯಾಬಿಟಿಕ್ ರೋಗಿಗಳು ಊಟದ ನಂತರ ವಾಕಿಂಗ್ ಮಾಡುವ ಮೂಲಕ ಮಧುಮೇಹದ ಅಪಾಯವನ್ನು ತಪ್ಪಿಸಬಹುದು.ಐರ್ಲೆಂಡ್ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಕಾರ,ಮಧುಮೇಹ ಅಥವಾ ಪ್ರಿ ಡಯಾಬಿಟಿಕ್ ರೋಗಿಗಳು ಊಟದ ಮೊದಲು ಒಂದು ಗಂಟೆ ಮತ್ತು ಊಟದ ನಂತರ ಒಂದೂವರೆ ಗಂಟೆಗಳ ಕಾಲ್ ವಾಕ್ ಮಾಡಬೇಕು. ಏಕೆಂದರೆ ನಾವು ಏನನ್ನಾದರೂ ತಿಂದ ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಊಟದ ನಂತರ ವಾಕ್ ಮಾಡಿದರೆ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ. ಇದನ್ನೂ ಓದಿ: ಉತ್ತಮ ಆಹಾರ ಮತ್ತು ವ್ಯಾಯಾಮದ ಮೂಲಕ ಮಧುಮೇಹ ನಿಯಂತ್ರಣ :ಮಧುಮೇಹವನ್ನು ನಿಯಂತ್ರಿಸಲು ಮತ್ತು ತೊಡೆದುಹಾಕಲು ವೈದ್ಯರು ಹೊಸ ಮಾರ್ಗವನ್ನು ಕಂಡುಹಿಡಿದಿದ್ದಾರೆ.ಆರೋಗ್ಯ ತಜ್ಞರ ಪ್ರಕಾರ,ಮಧುಮೇಹ ರೋಗಿಗಳ ಆಹಾರದಲ್ಲಿ 20% ಪ್ರೋಟೀನ್, 50-56% ಕಾರ್ಬೋಹೈಡ್ರೇಟ್ ಮತ್ತು 30% ಕ್ಕಿಂತ ಕಡಿಮೆ ಕೊಬ್ಬು ಇದ್ದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು. ಜೀವನಶೈಲಿಯ ಬದಲಾವಣೆಯ ಹೊರತಾಗಿ,ಪ್ರಮಾಣವನ್ನು ಕಡಿಮೆ ಮಾಡಿ ಪ್ರೋಟೀನ್‌ನ ಪ್ರಮಾಣವನ್ನು ಹೆಚ್ಚಿಸುವುದರಿಂದಲೂ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು. ಡಯಾಬಿಟಿಸ್ ರೋಗಿಗಳು ಆಹಾರದ ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಯೋಗವನ್ನು ಮಾಡಬೇಕು.ಯೋಗ ಅಥವಾ ವ್ಯಾಯಾಮವು ಮಧುಮೇಹವನ್ನು ನಿಯಂತ್ರಿಸುವುದು ಮಾತ್ರವಲ್ಲದೆ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ. ವ್ಯಾಯಾಮವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಿ ಇನ್ಸುಲಿನ್ ಅನ್ನು ಹೆಚ್ಚಿಸುತ್ತದೆ. ನಿಮ್ಮ ವ್ಯಾಯಾಮದ ದಿನಚರಿಯಲ್ಲಿ ಬ್ರಿಸ್ಕ್ ವಾಕ್, ಈಜು, ಮೆಟ್ಟಿಲು ಹತ್ತುವುದು ಮತ್ತು ನೃತ್ಯದಂತಹ ಅನೇಕ ಚಟುವಟಿಕೆಗಳನ್ನು ಸೇರಿಸಿಕೊಳ್ಳಬಹುದು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...