: ಮೊಡವೆ ಮುಕ್ತ, ಕಲೆರಹಿತ ತ್ವಚೆಗಾಗಿ ಒಂದೆರಡು ಹನಿ ರಸ ಸಾಕು! : ನೀವು ಕಲೆಮುಕ್ತ, ದೋಷರಹಿತ ತ್ವಚೆಯನ್ನು ಬಯಸಿದರೆ ಸುಲಭವಾಗಿ ಲಭ್ಯವಿರುವ ಕೆಲವು ರಸಗಳ ಸಹಾಯದಿಂದ ಇದು ಸಾಧ್ಯವಾಗುತ್ತದೆ. : ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳ ಅಗತ್ಯವೇ ಇಲ್ಲ. ಬದಲಿಗೆ ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಪದಾರ್ಥಗಳ ರಸಗಳನ್ನು ಬಳಸಿಯೂ ನೀವು ತ್ವಚೆ ಸಂಬಂಧಿತ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವು ಹಣ್ಣು-ತರಕಾರಿಗಳಲ್ಲಿ, ಗಿಡಮೂಲಿಕೆಗಳಲ್ಲಿ ವಿಟಮಿನ್ ಸಿ ( ) ಹೆಚ್ಚಾಗಿ ಕಂಡುಬರುತ್ತದೆ. ಅಷ್ಟೇ ಅಲ್ಲ, ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು, ಉರಿಯೂತದ ಗುಣಲಕ್ಷಣಗಳು ಕೂಡ ಹೇರಳವಾಗಿ ಕಂಡು ಬರುತ್ತದೆ. ಇವುಗಳನ್ನು ಸ್ಕ್ವೀಝ್ ಮಾಡಿ ಅದರ ಒಂದೆರಡು ಹನಿ ರಸದಿಂದ ಮೊಡವೆ, ತ್ವಚೆಯಲ್ಲಿ ಮೂಡಿರುವ ಕಲೆಗಳನ್ನು ಹೇಳ ಹೆಸರಿಲ್ಲದಂತೆ ನಿವಾರಿಸಬಹುದು. ಸುಂದರ, ಕೋಮಲ ತ್ವಚೆಗಾಗಿ ತುಂಬಾ ಪ್ರಯೋಜನಕಾರಿ ಈ ರಸಗಳು:ಅಲೋವೆರಾ ರಸ:ನಿತ್ಯ ಕೊಂಚವನ್ನು ಮುಖಕ್ಕೆ ಲೇಪಿಸುವುದರಿಂದ ಚರ್ಮ ಸಂಬಂಧಿತ ಸಮಸ್ಯೆಗಳಿಂದ ( ) ದೂರ ಉಳಿಯಬಹುದು. ಬೇಕೆಂದರೆ ಅಲೋವೆರಾ ರಸದಲ್ಲಿ ಚಿಟಿಕೆ ಅರಿಶಿನವನ್ನು ಕೂಡ ಬೆರೆಸಬಹುದು. ಇದನ್ನೂ ಓದಿ- ಕಲ್ಲಂಗಡಿ ರಸ:ಬೇಸಿಗೆಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನಲಾಗುವ ಕಲ್ಲಂಗಡಿಯು( ) ಪ್ರಯೋಜನಕಾರಿಯಾದ ಕೆಲವು ಜೀವಸತ್ವಗಳನ್ನು ಹೊಂದಿರುತ್ತದೆ. ಇದರ ರಸವನ್ನು ಮುಖಕ್ಕೆ ಲೇಪಿಸಿ, 10-15 ನಿಮಿಷಗಳ ಬಳಿಕ ಮುಖ ತೊಳೆಯುವುದರಿಂದ ಮೃದುವಾದ ಚರ್ಮವನ್ನು ಹೊಂದಲು ಸಹಾಯಕವಾಗಿದೆ. ಟೊಮಾಟೊ ರಸ:ನಿತ್ಯ ಅಡುಗೆಯಲ್ಲಿ ಬಳಸುವ ಟೊಮಾಟೊ ಹಣ್ಣಿನ ರಸವನ್ನು ಮುಖಕ್ಕೆ ಲೇಪಿಸುವುದರಿಂದ ಮೊಡವೆ, ಕಲೆ, ಡೆಡ್ ಸ್ಕಿನ್ ನಂತಹ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಇದನ್ನೂ ಓದಿ- ನಿಂಬೆ ರಸ:ವಿಟಮಿನ್ ಸಿಯಲ್ಲಿ ಸಮೃದ್ಧವಾಗಿರುವ ನಿಂಬೆ ರಸ ನೈಸರ್ಗಿಕವಾಗಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದು ಮುಖದಲ್ಲಿ ಕಪ್ಪು ಕಲೆಗಳನ್ನು ನಿವಾರಿಸಲು ಹೆಚ್ಚು ಪ್ರಯೋಜನಕಾರಿ ಆಗಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...