ಗರ್ಭಿಣಿಯರು ಕೇಸರಿ ಏಕೆ ತಿನ್ನಬೇಕು? ಅದರಿಂದಾಗುವ ಲಾಭಗಳು!! :ಗರ್ಭವಾಸ್ಥೆಯಲ್ಲಿರುವಹೆಣ್ಣಿಗೆ ಯಾವಾಗಲೂ ಪೋಷಕಾಂಶ ಸಹಿತ ಅಡುಗೆಗಳನ್ನು ತಿನ್ನಲು ಹೇಳಿಕೊಡುತ್ತಾರೆ. ಅದರ ಜೊತೆಗೆ ಕೇಸರಿ ತಿನ್ನುವಂತೆ ಯಾವಾಗಲೂ ಹೇಳಿರುವುದನ್ನು ಕೇಳಿರುತ್ತೇವೆ ಅದು ಯಾಕೆ ಗೊತ್ತಾ, ಅದರಿಂದ ಏನೆಲ್ಲಾ ಲಾಭಗಳು ಇದೆ ಇಲ್ಲಿ ತಿಳಿದುಕೊಳ್ಳಿ. ಹೊಟ್ಟೆಯಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಉಪಯುಕ್ತವಾದ ಅನೇಕ ಪೋಷಕಾಂಶಗಳು ಬೇಕಾಗುತ್ತವೆ. ಗರ್ಭಧರಿಸಿದ ದಿನದಿಂದಲೇ ತಮ್ಮ ಹೊಟ್ಟೆಯಲ್ಲಿರುವ ಹೀಗಿರಬೇಕು ಹಾಗಿರಬೇಕು ಕನಸು ಕಾಣುವುದು ಸಾಮಾನ್ಯ . ತಮ್ಮ ಮಗು ಆರೋಗ್ಯವಾಗಿರಲು ಮಾತ್ರವಲ್ಲದೆ ಸುಂದರವಾಗಿಯೂ ಇರಬೇಕೆಂದು ಬಯಸುತ್ತಾರೆ.ಇಂತಹ ಕಾರಣಗಳಿಗೆ ಕೇಸರಿ ಸೇವಿಸುವುದು ಸಾಮಾನ್ಯ, ಕೇಸರಿ ಹೂವನ್ನು ಹಾಲಿನಲ್ಲಿ ಬೆರೆಸಿ ಕುಡಿಯಬೇಕು ಎಂದು ದೊಡ್ಡವರು ಹೇಳುತ್ತಲೇ ಇರುತ್ತಾರೆ. ಕೇಸರಿಯನ್ನು ಕುಂಕುಮ ಹೂವು ಎನ್ನುತ್ತಾರೆ. ಈ ಕುಂಕುಮ ಹೂವನ್ನು ಸೇವಿಸುವುದರಿಂದ ಮಗುವಿನ ಆರೋಗ್ಯ ಸುಧಾರಿಸುತ್ತದೆ.ಹೊಟ್ಟೆಯಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಉಪಯುಕ್ತವಾದ ಅನೇಕ ಪೋಷಕಾಂಶಗಳ ಅವಶ್ಯಕತ ಇದೆ ಹೀಗಾಗಿ ಕೇಸರಿಯು ಸೇವನೆಯಿಂದ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ. ಇದನ್ನು ಓದಿ : ಕೇಸರಿಯು ಮ್ಯಾಂಗನೀಸ್, ವಿಟಮಿನ್ ಬಿ 6, ಪೊಟ್ಯಾಸಿಯಮ್, ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇವು ತಾಯಿ ಮತ್ತು ಮಗುವಿಗೆ ತುಂಬಾ ಒಳ್ಳೆಯದು.ಗರ್ಭಾವಸ್ಥೆಯಲ್ಲಿ ಅನೇಕ ಮಹಿಳೆಯರು ಮೂಡ್ ಸ್ವಿಂಗ್ ಮತ್ತು ಒತ್ತಡವನ್ನು ಅನುಭವಿಸುತ್ತಾರೆ. ಇದನ್ನು ಸುಧಾರಿಸುವ ಕೆಲಸ ಇದು ಮಾಡುತ್ತದೆ. , ಕೇಸರಿ ತೆಗೆದುಕೊಳ್ಳುವಿಕೆಯು ಸಫ್ರಾನಾಲ್ ಮತ್ತು ಕ್ರೋಸಿನ್ ನಂತಹ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಅಷ್ಟೇಅಲ್ಲದೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಸಾಮಾನ್ಯವಾಗಿ, ಗರ್ಭಿಣಿಯರು ವಾಯು ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಸರಿ ಸಹಾಯ ಮಾಡುತ್ತದೆ. ಅಲ್ಲದೆ, ಇದು ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ರಕ್ತಹೀನತೆ, ಗರ್ಭಾವಸ್ಥೆಯಲ್ಲಿ ಮಹಿಳೆಯರು ಹೆಚ್ಚಾಗಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ, ಕೇಸರಿ ಸೇವನೆಯು ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ರಕ್ತಹೀನತೆ ಗುಣವಾಗುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ಪ್ರತಿ ರಾತ್ರಿ ಒಂದು ಕಪ್ ಬೆಚ್ಚಗಿನ ಕೇಸರಿ ಹಾಲನ್ನು ಕುಡಿಯುವುದು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...