ಆನೆ ಮರಿಗೆ ಚಿಕಿತ್ಸೆ ಕೊಟ್ಟು ತಾಯಿ ಮಡಿಲಿಗೆ ಒಪ್ಪಿಸಿದ ಅರಣ್ಯ ಇಲಾಖೆ : ಬೇತಾಳಕಟ್ಟೆ ಗಸ್ತಿನ ಗಂಜಿಗಟ್ಟಿ ಅರಣ್ಯ ಪ್ರದೇಶದಲ್ಲಿ ಜೂ.10 ರಂದು ಇಲಾಖಾ ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದ ವೇಳೆ ಜಯಣ್ಣ ಎಂಬುವವರ ಜಮೀನಿನಲ್ಲಿ ಆನೆಮರಿ ಅಸ್ವಸ್ಥಗೊಂಡಿರುವುದು ಕಂಡುಬಂದಿದೆ. ಚಾಮರಾಜನಗರ: ತಾಯಿಯಿಂದ ಬೇರ್ಪಟ್ಟು ಆರೈಕೆ ಸಿಗದೇ ಅಸ್ವಸ್ಥಗೊಂಡಿದ್ದ ಆನೆಮರಿಗೆ ಅರಣ್ಯ ಇಲಾಖೆ ಚಿಕಿತ್ಸೆ ಕೊಟ್ಟು ಮತ್ತೇ ಅಮ್ಮನ ಮಡಿಲು ಸೇರಿಸಿದ ವಿಶೇಷ ಘಟನೆ ಬಿ‌ಆರ್‌ಟಿ ಹುಲಿ ಸಂರಕ್ಷಿತ ( ) ಪ್ರದೇಶ ವ್ಯಾಪ್ತಿಯ ಯಳಂದೂರು ವನ್ಯಜೀವಿ ವಲಯದಲ್ಲಿ ನಡೆದಿದೆ. ಅಂದಾಜು 2-3 ವರ್ಷದ ಗಂಡಾನೆ ಮರಿ ಮತ್ತೇ ಅಮ್ಮನ ಮಡಿಲು ಸೇರಿದ್ದು ಸದ್ಯ( ) ಮರಿ ಮೇಲೆ ನಿರಂತರ ನಿಗಾ ಇಟ್ಟಿದೆ. ಬೇತಾಳಕಟ್ಟೆ ಗಸ್ತಿನ ಗಂಜಿಗಟ್ಟಿ ಅರಣ್ಯ ಪ್ರದೇಶದಲ್ಲಿ ಜೂ.10 ರಂದು ಇಲಾಖಾ ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದ ವೇಳೆ ಜಯಣ್ಣ ಎಂಬುವವರ ಜಮೀನಿನಲ್ಲಿ ಆನೆಮರಿ ಅಸ್ವಸ್ಥಗೊಂಡಿರುವುದು ಕಂಡುಬಂದಿದೆ. ಇದನ್ನೂ ಓದಿ- ಕೂಡಲೇ ಕಾರ್ಯಪ್ರವೃತ್ತರಾದ ಬಂಡೀಪುರದಿಂದ ಅರಣ್ಯಾಧಿಕಾರಿಗಳು ( ) ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮರಿ ಅರಸುತ್ತಾ ಬಂದ ತಾಯಿಕೊಡಲು ಬಂದಿದ್ದ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾದ ವೇಳೆ ಹರಸಾಹಸದಿಂದ ಆ್ಯಂಟಿಬಯೋಟಿಕ್, ಕಬ್ಬಿನ ಜಲ್ಲೆಗಳು, ಹಸಿ ಹುಲ್ಲುಗಳನ್ನು ಕೊಟ್ಟು ಆರೈಕೆ ಮಾಡಿದ್ದರು. ಇದನ್ನೂ ಓದಿ- ಮಂಗಳವಾರ (ಜೂನ್ 11) ಸಂಜೆ ತನಕವೂ ಆರೈಕೆ ಮುಂದುವರೆಸಿ ಮರಿ ಚೇತರಿಸಿಕೊಳ್ಳುತ್ತಿದ್ದಂತೆ ಅಮ್ಮನ ಮಡಿಲಿಗೆ ಮರಿಯನ್ನು ಒಪ್ಪಿಸಿದ್ದಾರೆ. ಜೊತೆಗೆ, 24 ತಾಸು ಕೂಡ ಮರಿ ಮೇಲೆ ನಿಗಾ ಇಡಲು ಬಿಆರ್ ಟಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...