ಕೆಲವರು ಎಷ್ಟೇ ತಿಂದರೂ ದಪ್ಪ ಆಗಲ್ಲ ಯಾಕೆ ಗೊತ್ತಾ? : ಕೆಲವರು ಎಷ್ಟೇ ತಿಂದರೂ ದಪ್ಪ ಆಗುವುದೇ ಇಲ್ಲ ಮತ್ತು ತೂಕದಲ್ಲಿ ಯಾವುದೇ ಏರು ಪೆರು ಕಾಣುವುದಿಲ್ಲ. ಆದರೆ ಕೆಲವರು ಏನೇ ತಿಂದರೂ ಬೇಗ ದಪ್ಪವಾದಂತೆ ಕಾಣುತ್ತಾರೆ ಮತ್ತು ಇತರರು ಕ್ಯಾಲೊರಿ ಕಡಿಮೆ ಮಾಡಲು ಮತ್ತು ವ್ಯಾಯಾಮ ಮಾಡಲು ಸಾಕಷ್ಟು ಪ್ರಯತ್ನ ಮಾಡಿದರೂ ಅದರಲ್ಲಿ ಯಾವುದೇ ಬದಲಾವಣೆಯನ್ನು ಅವರು ಕಾಣುವುದೇ ಇಲ್ಲ. :ಹೆಚ್ಚಿನ ಚಯಾಪಚಯ ಕ್ರಿಯೆಯೊಂದಿಗೆ ಮತ್ತು ಪೌಷ್ಟಿಕಾಂಶದಿಂದಾಗಿ ದೇಹದಲ್ಲಿ ಇವು ಹೆಚ್ಚಿನ ಪಾತ್ರ ವಹಿಸುತ್ತದೆ. ದೇಹದ ತೂಕವನ್ನು ಹೆಚ್ಚಿಸುವ ಮತ್ತು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಂದು ಪ್ರಮುಖ ಅಂಶವಾಗಿದೆ. ಪೌಷ್ಟಿಕಾಂಶ, ನಾವು ತಿನ್ನುವ ಆಹಾರ ಪ್ರತಿಯೊಂದು ನಮ್ಮ ತೂಕದ ಮೇಲೆ ಪರಿಣಾಮ ಬೀರುತ್ತದೆ, ಈ ಪ್ರಕಾರ ನಮ್ಮಲ್ಲಿ ಬದಲಾವಣೆ ಕಂಡು ಬರುತ್ತದೆ ನೂರಾರು ಜೀನ್‌ಗಳು ವ್ಯಕ್ತಿಯ ತೂಕದಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ ಮತ್ತು ಹೆಚ್ಚಿನ ಬೊಜ್ಜು ಹೊಂದಿರುವವರು ಸಾಮಾನ್ಯ ತೂಕದ ಹೊಂದಿರುವವರಿಗಿಂತ ಆನುವಂಶಿಕವಾಗಿ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ತೆಳ್ಳಗಿನ ಜನರು ಕಡಿಮೆ ಆನುವಂಶಿಕ ರೂಪಾಂತರಗಳನ್ನು ಹೊಂದಿರುತ್ತಾರೆ. ಕೆಲವು ಜನರು ತೂಕ ಹೆಚ್ಚಿಸಲು ಕೆಲವು ಮೂಲಭೂತ ನಿಯಮಗಳನ್ನು ಪಾಲಿಸಬೇಕು ಮತ್ತು ಪೋಷಕಾಂಶ ಮತ್ತು ಹಾರ್ಮೋನುಗಳ ಕಡೆ ಹೆಚ್ಚಿನ ಗಮನ ಹರಿಸಬೇಕು. ನಿಮಗೆ ಹಸಿವಾದಾಗ ಮಾತ್ರ ತಿನ್ನಿಕೆಲವರು ಅತಿಯಾದ ಹಸಿವನ್ನು ಹೊಂದಿರುತ್ತಾರೆ, ಅವರು ತಮ್ಮ ಹಸಿವಿಗಿಂತ ಹೆಚ್ಚು ಸೇವಿಸುತ್ತಾರೆ ಆಗ ಅವರು ಹೆಚ್ಚಿನ ತೂಕವನ್ನು ಪಡೆಯುತ್ತಾರೆ ಇದನ್ನು ಓದಿ : ಹಾರ್ಮೋನ್ ಅಂಶಗಳುಹಸಿವು ಎರಡು ಹಾರ್ಮೋನುಗಳಿಂದ ನಿಯಂತ್ರಿಸಲ್ಪಡುತ್ತದೆ - ಗ್ರೆಲಿನ್ ಮತ್ತು ಲೆಪ್ಟಿನ್. ಕೊಬ್ಬಿನ ಕೋಶಗಳಿಂದ ಉತ್ಪತ್ತಿಯಾಗುವ ಲೆಪ್ಟಿನ್ ಹಸಿವನ್ನು ನಿಗ್ರಹಿಸುತ್ತದೆ ಆದರೆ ಗ್ರೆಲಿನ್ ನಿಮ್ಮ ಹಸಿವನ್ನು ಉತ್ತೇಜಿಸಲು ವಿರುದ್ಧವಾಗಿರುತ್ತದೆ. ಹೆಚ್ಚಿನ ಲೆಪ್ಟಿನ್ ಸಂವೇದನೆ ಅಥವಾ ಉತ್ಪಾದನೆಯನ್ನು ಹೊಂದಿರುವ ಜನರು ಕಡುಬಯಕೆಯನ್ನು ನಿಯಂತ್ರಿಸಲು ಅಥವಾ ತೂಕವನ್ನು ಕಳೆದುಕೊಳ್ಳಲು ಸುಲಭವಾಗುತ್ತದೆ. ಸರಿಯಾದ ನಿದ್ರೆನೀವು ರಾತ್ರಿಯಲ್ಲಿ ಕನಿಷ್ಠ ಏಳು ಗಂಟೆಗಳ ನಿದ್ದೆ ಮಾಡುವ ಮೂಲಕ ನಿಮ್ಮ ಹಾರ್ಮೋನುಗಳನ್ನು ನಿಯಂತ್ರಿಸಬಹುದು. ನಿದ್ರಾಹೀನತೆಯು ನಿಮ್ಮ ಗ್ರೆಲಿನ್ ಮಟ್ಟವನ್ನು ಹೆಚ್ಚಿಸಬಹುದು ಮತ್ತು ದೇಹವು ಹಸಿವನ್ನು ಪ್ರಚೋದಿಸುವ ಕಾರ್ಟಿಸೋಲ್ ಅನ್ನು ಅಧಿಕವಾಗಿ ಉತ್ಪಾದಿಸುತ್ತದೆ. ಹೆಚ್ಚು ನಿದ್ರಿಸುವುದು ವ್ಯಕ್ತಿಯ ತೂಕವನ್ನು ಕಡಿಮೆ ಗೊಳಿಸಲು ಕಾರಣವಾಗಬಹುದು. ಇದನ್ನು ಓದಿ : ಆರೋಗ್ಯಕರ ಆಹಾರ ಪದ್ಧತಿನೀವು ಹೇಗೆ ತಿನ್ನುತ್ತೀರಿ ಎಂಬುದು ನೀವು ಸೇವಿಸುವ ಪ್ರಮಾಣವನ್ನು ನಿರ್ಧರಿಸುತ್ತದೆ. ನೀವು ನಿಧಾನಗತಿಯಲ್ಲಿ ತಿನ್ನುತ್ತಿದ್ದರೆ ಮತ್ತು ಹೆಚ್ಚು ಅಗಿಯುತ್ತಿದ್ದರೆ ನೀವು ಹೆಚ್ಚು ತೂಕವನ್ನು ಪಡೆಯುವ ಸಾಧ್ಯತೆ ಕಡಿಮೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...