ಬೆಳ್ಳುಳ್ಳಿ ಸಿಪ್ಪೆಯಿಂದ ಇಷ್ಟೇಲ್ಲಾ ಪ್ರಯೋಜನಗಳಿವೆಯಾ? ಎಸೆಯುವ ಮುನ್ನ ಯೋಚಿಸಿ!! : ಬೆಳ್ಳುಳ್ಳಿ ಎಸಳು ಮಾತ್ರವಲ್ಲ, ಅದರ ಮೇಲಿನ ಸಿಪ್ಪೆಯೂ ಆರೋಗ್ಯಕ್ಕೆ ಒಳ್ಳೆಯದು. ಇದು ವಿಟಮಿನ್ ಎ, ಸಿ, ಇ, ಆಂಟಿಆಕ್ಸಿಡೆಂಟ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. : ಸಾಮಾನ್ಯವಾಗಿ ನಾವು ಬೆಳ್ಳುಳ್ಳಿಯನ್ನು ವಿವಿಧ ರೀತಿಯ ಖಾದ್ಯಗಳಲ್ಲಿ ಬಳಸುತ್ತೇವೆ. ಇದು ಪಾಕವಿಧಾನಕ್ಕೆ ವಿಶೇಷ ರುಚಿ ಮತ್ತು ಸುವಾಸನೆಯನ್ನು ನೀಡುತ್ತದೆ. ಆಯುರ್ವೇದ ಔಷಧದಲ್ಲಿಯೂ ಇದಕ್ಕೆ ತುಂಬಾ ಪ್ರಾಮುಖ್ಯತೆ ಇದೆ.. ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಅಜೀರ್ಣ, ಸೋಂಕು, ಹಾವು ಕಡಿತ ಮುಂತಾದ ಹಲವು ಸಮಸ್ಯೆಗಳಿಗೆ ಬೆಳ್ಳುಳ್ಳಿಯನ್ನು ಔಷಧವಾಗಿ ಬಳಸುತ್ತಾರೆ. ಆದರೆ ಬೆಳ್ಳುಳ್ಳಿ ಎಸಳು ಮಾತ್ರವಲ್ಲ, ಬೆಳ್ಳುಳ್ಳಿ ಸಿಪ್ಪೆಗಳೂ ಆರೋಗ್ಯಕ್ಕೆ ಒಳ್ಳೆಯದು. ಇದು ವಿಟಮಿನ್ ಎ, ಸಿ, ಇ, ಆಂಟಿಆಕ್ಸಿಡೆಂಟ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಹಾಗಾದ್ರೆ ಈ ಬೆಳ್ಳುಳ್ಳಿ ಸಿಪ್ಪಿಯಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ಇದೀಗ ತಿಳಿಯೋಣ.. ಇದನ್ನೂ ಓದಿ- ಹೃದಯಕ್ಕೆ ಒಳ್ಳೆಯದು: ಬೆಳ್ಳುಳ್ಳಿ ಸಿಪ್ಪೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಕೆಟ್ಟ ಕೊಲೆಸ್ಟ್ರಾಲ್ () ಮಟ್ಟವನ್ನು ಕಡಿಮೆ ಮಾಡಿ.. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.. ಇದನ್ನೂ ಓದಿ- ಹೊಳೆಯುವ ತ್ವಚೆ: ಬೆಳ್ಳುಳ್ಳಿ ಸಿಪ್ಪೆಯಲ್ಲಿರುವ ಪ್ರೋಟೀನ್‌ಗಳು ಚರ್ಮವು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತವೆ.. ಬೆಳ್ಳುಳ್ಳಿಯ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಮೊಸರಿನೊಂದಿಗೆ ಫೇಸ್ ಪ್ಯಾಕ್ ಆಗಿ ಹಚ್ಚಿದರೆ ತ್ವಚೆಯು ಮೃದು ಮತ್ತು ಹೊಳೆಯುತ್ತದೆ. ಆರೋಗ್ಯಕರ ಕೂದಲು: ಬೆಳ್ಳುಳ್ಳಿಯ ಸಿಪ್ಪೆಯು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದ್ದು, ಕೂದಲು ಮತ್ತು ನೆತ್ತಿಯ ಹಾನಿಗೆ ಕಾರಣವಾಗುವ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.. ವಿಟಮಿನ್ ಸಿ ಸಮೃದ್ಧವಾಗಿರುವ ಬೆಳ್ಳುಳ್ಳಿ ಸಿಪ್ಪೆಯ ಪುಡಿಯು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...