ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿದರೆ ಹಲ್ಲಿಗಳು ಹತ್ತಿರವೂ ಸುಳಿವುದಿಲ್ಲ!! : ಬೇಸಿಗೆ ಆರಂಭದಿಂದ ಮಳೆಗಾಲ ಮುಗಿಯುವವರೆಗೂ ಮನೆಗಳಲ್ಲಿ ಹಲ್ಲಿಗಳ ಭೀತಿ. ಅದರಲ್ಲೂ ಮಳೆಗಾಲದಲ್ಲಿ ಗೋಡೆಯಿಂದ ಕೆಳಗಿಳಿದು ನೆಲದ ಮೇಲೆ ಚಲಿಸುತ್ತವೆ. ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ..ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿ ಇದರಿಂದ ಬಹುಪಾಲು ಹಲ್ಲಿಗಳನ್ನು ದೂರವಿಡಬಹುದು... : ಮನೆ ಆವರಣದಲ್ಲಿ ಬೇವಿನ ಗಿಡ ನೆಟ್ಟರೆ ಮನೆಗೆ ಹಲ್ಲಿಗಳ ಪ್ರವೇಶ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಏಕೆಂದರೆ ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಇದರ ಬಲವಾದ ವಾಸನೆಯು ಹಲ್ಲಿಯನ್ನು ಮನೆಯೊಳಕ್ಕೆ ಬರದಂತೆ ತಡೆಯುತ್ತದೆ.. ಎರಡನೇ ಸಸ್ಯ ತುಳಸಿ. ಜನರು ತಮ್ಮ ಮನೆಯ ಆವರಣದ ಮಧ್ಯದಲ್ಲಿ ಈ ಗಿಡವನ್ನು ನೆಡಬಹುದು. ಇದರ ಪ್ರಯೋಜನವೇನೆಂದರೆ.. ಈ ಸಸ್ಯವು ಮೀಥೈಲ್ ಸಿನಮೇಟ್, ಲಿನೂಲ್ ಮತ್ತು ಕರ್ಪೂರದ ಗುಣಲಕ್ಷಣಗಳನ್ನು ಹೊಂದಿದೆ, ಇದರ ವಾಸನೆಯಿಂದ ಹಲ್ಲಿಗಳು ಓಡಿಹೋಗುತ್ತವೆ. ಇದನ್ನೂ ಓದಿ- ಹಲ್ಲಿಗಳನ್ನು ಓಡಿಸುವ ಮೂರನೇ ಸಸ್ಯವೆಂದರೆ ಲ್ಯಾವೆಂಡರ್, ಇದು ಬಲವಾದ ವಾಸನೆಯನ್ನು ಹೊಂದಿರುವುದರಿಂದ ಸಾಮಾನ್ಯವಾಗಿ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ವಾಸನೆಯು ಹಲ್ಲಿಯನ್ನು ಮನೆಯ ಒಳಕ್ಕೆ ಬರಲು ಬಿಡುವುದಿಲ್ಲ.. ಹಲ್ಲಿಗಳನ್ನು ಮನೆಯಿಂದ ಓಡಿಸಲು ಪುದೀನಾ ಸಸ್ಯವು ಪರಿಣಾಮಕಾರಿಯಾಗಿದೆ. ಏಕೆಂದರೆ ಪುದೀನಾದಲ್ಲಿ ಮೆಂಥಾಲ್ ಎಂಬ ರಾಸಾಯನಿಕವಿದೆ. ಇದರ ವಾಸನೆಯು ಹಲ್ಲಿಗಳನ್ನು ಸುಲಭವಾಗಿ ಮನೆಯೊಳಗೆ ಬರದಂತೆ ತಡೆಯುತ್ತದೆ.. ಇದನ್ನೂ ಓದಿ- ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...