: ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ನಿರ್ಬಂಧಿಸುವುದು ಹೇಗೆ? ಈ ಸುಲಭ ಟಿಪ್ಸ್ ಫಾಲೋ ಮಾಡಿ..! / : ನಿಮ್ಮ ಎಟಿಎಂ (ಡೆಬಿಟ್/ಕ್ರೆಡಿಟ್) ಕಾರ್ಡ್ ಕಳೆದು ಹೋಗಿದ್ದರೆ ಮೋಸ ಹೋಗುವುದನ್ನು ತಪ್ಪಿಸಲು ಆ ಕಾರ್ಡ್‌ಗಳನ್ನು ನಿರ್ಬಂಧಿಸುವುದು ಉತ್ತಮ ಆಯ್ಕೆಯಾಗಿದೆ. / : ಮೊದಲೆಲ್ಲಾ ಹಣಕಾಸಿನ ವ್ಯವಹಾರಗಳಿಗೆ ಬ್ಯಾಂಕ್‌ಗೆ ಹೋಗಬೇಕಿತ್ತು. ಎಟಿಎಂಗಳು ಬಂದ ಬಳಿಕ ಈ ಕೆಲಸ ಇನ್ನಷ್ಟು ಸುಲಭವಾಯಿತು. ಆದರೀಗ ತಂತ್ರಜ್ಞಾನ ಮುಂದುವರೆದಂತೆ ಬಹುತೇಕ ಕೆಲಸಗಳನ್ನು ಆನ್‌ಲೈನ್‌ನಲ್ಲಿಯೇ ಪೂರ್ಣಗೊಳಿಸಬಹುದು. ಆದಾಗ್ಯೂ, ಆನ್‌ಲೈನ್ ವಹಿವಾಟುಗಳನ್ನು ನಡೆಸಲು ಹಾಗೂ ಹಣವನ್ನು ಹಿಂಪಡೆಯಲು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳು ಬೇಕೇ ಬೇಕು. ಆದರೆ, ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು (/ ) ಯಾರಾದರೂ ಕದ್ದಿದ್ದರೆ, ಇಲ್ಲವೇ ಎಲ್ಲಾದರೂ ನೀವು ಅದನ್ನು ಮಿಸ್ ಮಾಡಿಕೊಂಡಿದ್ದರೆ ಮೊದಲು ಅದನ್ನು ನಿರ್ಬಂಧಿಸುವುದು ಬಹಳ ಮುಖ್ಯ. ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡುವುದು ಹೇಗೆ ( / )?ನಿಮ್ಮ( ) ಅದನ್ನು ತಕ್ಷಣವೇ ನಿರ್ಬಂಧಿಸುವುದು ಉತ್ತಮ. ಇಲ್ಲದಿದ್ದರೆ, ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ನೀವು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ನಿರ್ಬಂಧಿಸಬಹುದು. ಆಫ್‌ಲೈನ್‌ನಲ್ಲಿ ಕಾರ್ಡ್ ನಿರ್ಬಂಧಿಸಲು ಏನು ಮಾಡಬೇಕು? ( ):ನಿಮ್ಮ ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ನೀವು(/ ) ಅನ್ನು ಆಫ್‌ಲೈನ್‌ನಲ್ಲಿ ನಿರ್ಬಂಧಿಸಬಹುದು. ಇದನ್ನೂ ಓದಿ- ಆನ್‌ಲೈನ್‌ನಲ್ಲಿ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ? ( ?)ಆನ್‌ಲೈನ್‌ನಲ್ಲಿ ಮಾಡುವಾಗ ನಿಮ್ಮ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್ ಪೋರ್ಟಲ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಕಾರ್ಡ್‌ಗಳನ್ನು ನಿರ್ಬಂಧಿಸಬಹುದು. ಕೆಲವು ಬ್ಯಾಂಕ್‌ಗಳು ಗ್ರಾಹಕರಿಗೆ ಎಸ್‌ಎಂಎಸ್ ಮೂಲಕ ಅಥವಾ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಕಾರ್ಡ್‌ಗಳನ್ನು ನಿರ್ಬಂಧಿಸಲು ಸಹಾಯ ಮಾಡುತ್ತವೆ. ನೆಟ್ ಬ್ಯಾಂಕಿಂಗ್ ಮೂಲಕ ಡೆಬಿಟ್/ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡುವ ಪ್ರಕ್ರಿಯೆ (/ ) :->> ನೆಟ್ ಬ್ಯಾಂಕಿಂಗ್ ( ) ಮತ್ತು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ತೆರೆಯಿರಿ>> ಇದರಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ವಿವರಗಳ ವಿಭಾಗಕ್ಕೆ ಹೋಗಿ.>> ಇಲ್ಲಿ ಕಾರ್ಡ್ ಅನ್ನು ನಿರ್ಬಂಧಿಸುವ ಆಯ್ಕೆಯನ್ನು ಆರಿಸಿ.>> ನಿಗದಿತ ಬಾಕ್ಸ್ ನಲ್ಲಿ ಕಾರ್ಡ್ ಅನ್ನು ನಿರ್ಬಂಧಿಸುವ ಕಾರಣಗಳನ್ನು ನಮೂದಿಸಿ.>> ಅಂತಿಮವಾಗಿ ಸಲ್ಲಿಸು ಎಂಬ ಆಯ್ಕೆಯನ್ನು ಆರಿಸಿ. ಇದರಲ್ಲಿ ಮತ್ತೊಮ್ಮೆ ದೃಢೀಕರಣವನ್ನು ಕೇಳಲಾಗುತ್ತದೆ. ಆಗ ದೃಢೀಕರಿಸಿದರೆ ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗುತ್ತದೆ. ಇದನ್ನೂ ಓದಿ- ಎಸ್‌ಎಮ್‌ಎಸ್ ಮೂಲಕ ಕ್ರೆಡಿಟ್/ಡೆಬಿಟ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ?ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಎಸ್‌ಎಮ್‌ಎಸ್ ಮೂಲಕವೂ ನಿರ್ಬಂಧಿಸಬಹುದು. ಇದಕ್ಕಾಗಿ ನಿಮ್ಮ ಬ್ಯಾಂಕ್ ಒದಗಿಸಿದ ಸಂಖ್ಯೆಗೆ ನಿಗದಿತ ಸ್ವರೂಪದ ಪ್ರಕಾರ ಎಸ್‌ಎಮ್‌ಎಸ್ ಕಳುಹಿಸಬೇಕು. ಕಾರ್ಡ್ ಅನ್ನು ನಿರ್ಬಂಧಿಸಿದ ನಂತರ ಬ್ಯಾಂಕ್ ದೃಢೀಕರಣ ಸಂದೇಶವನ್ನು ಕಳುಹಿಸುತ್ತದೆ. ಕರೆ ಮಾಡಿ ಕ್ರೆಡಿಟ್/ಡೆಬಿಟ್ ಕಾರ್ಡ್ ನಿರ್ಬಂಧಿಸುವುದು ಹೇಗೆ?ಗ್ರಾಹಕರು ಬ್ಯಾಂಕ್‌ನ ಟೋಲ್ ಫ್ರೀ ಫೋನ್ ಬ್ಯಾಂಕಿಂಗ್ ಸಂಖ್ಯೆಗೆ ಕರೆ ಮಾಡುವ ಮೂಲಕವೂ ಕೂಡ ತಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಸುಲಭವಾಗಿ ಬ್ಲಾಕ್ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...