ಸೌತೆಕಾಯಿ ಬಳಕೆಯಿಂದ ಸೌಂದರ್ಯ ವೃದ್ಧಿ : ಸೌತೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಅಷ್ಟೇ ಅಲ್ಲ, ಇದರ ಬಳಕೆಯು ನಿಮ್ಮ ಸೌಂದರ್ಯವನ್ನೂ ಇಮ್ಮಡಿಗೊಳಿಸುತ್ತದೆ. ಇದಕ್ಕಾಗಿ ಸೌತೆಕಾಯಿಯನ್ನು ಹೇಗೆ ಬಳಸಬೇಕು ಎಂದು ತಿಳಿಯಿರಿ. :ಚರ್ಮದ ಸಮಸ್ಯೆಗಳನ್ನು ( ) ನಿವಾರಿಸಿ, ನಿರ್ಜೀವ ಚರ್ಮವನ್ನು ಪುನರ್ಯೌವನ ಗೊಳಿಸಲು ಸೌತೆಕಾಯಿ ತುಂಬಾ ಲಾಭದಾಯಕವಾಗಿದೆ. ಸೌಂದರ್ಯ ವೃದ್ಧಿಗಾಗಿ ಸೌತೆಕಾಯಿಯನ್ನು ಹೇಗೆ ಬಳಸಬೇಕು: ಇದರಿಂದ ತ್ವಚೆಗೆ ಏನೆಲ್ಲಾ ಪ್ರಯೋಜನ ಎಂದು ತಿಳಿಯಿರಿ. ಸೌಂದರ್ಯ ವೃದ್ಧಿಗಾಗಿ ಸೌತೆಕಾಯಿ:ಸೌತೆಕಾಯಿಯಲ್ಲಿರುವ ಪೋಷಕಾಂಶಗಳು ತ್ವಚೆಯನ್ನು ನೈಸರ್ಗಿಕವಾಗಿ ( ) ಸುಂದರವಾಗಿರುತ್ತದೆ. ಸೌತೆಕಾಯಿ ತ್ವಚೆಯನ್ನು ಸದಾ ಕಾಂತಿಯುತವಾಗಿ, ಆರೋಗ್ಯಕರವಾಗಿ ಇರಿಸಲು ಪ್ರಯೋಜನಕಾರಿ ಆಗಿದೆ. ಇದಕ್ಕಾಗಿಯಿಂದ ತಯಾರಿಸಿದ ಫೇಸ್ ಪ್ಯಾಕ್‌ಗಳನ್ನು ಬಳಸಬೇಕಾಗುತ್ತದೆ. ಇದಲ್ಲದೆ, ಸೌತೆಕಾಯಿಯಿಂದ ತಯಾರಿಸಿದ ಸ್ಕ್ರಬ್ಬರ್ ಬಲ್ಸುವುದರಿಂದ ಇದು ಬ್ಲಾಕ್ ಹೆಡ್ಸ್, ಡೆಡ್ ಸ್ಕಿನ್, ಡಾರ್ಕ್ ಸರ್ಕಲ್ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಇದನ್ನೂ ಓದಿ- ಚರ್ಮ ಸಮಸ್ಯೆಗಳಿಗೆ ಸೌತೆಕಾಯಿ ಫೇಸ್ ಪ್ಯಾಕ್‌ಗಳು:ಚರ್ಮವನ್ನು ಹೈಡ್ರೇಟ್ ಆಗಿರಿಸಲು:ನೀವು ಚರ್ಮವನ್ನು () ಒಳಗಿನಿಂದ ಹೈಡ್ರೇಟ್ ಆಗಿರಿಸಲು ಜೇನುತುಪ್ಪ, ನಿಂಬೆ, ಪುದೀನದೊಂದಿಗೆ ಸೌತೆಕಾಯಿ ರಸವನ್ನು ಬೆರೆಸಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ಸಾಮಾನ್ಯ ಫೇಸ್ ವಾಶ್ ಮಾಡಿ. ಕಲೆ ನಿವಾರಣೆ:ನಿಮ್ಮಗಳನ್ನು ನಿವಾರಿಸಲು ಸೌತೆಕಾಯಿಯನ್ನು ಸಣ್ಣಗೆ ತುರಿದು ಇದರಲ್ಲಿ ಒಂದು ಚಮಚ ಓಟ್ಸ್, ಮೊಸರು ಮತ್ತು ಜೇನುತುಪ್ಪವನ್ನು ಬೆರೆಸಿ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ. 15-20 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದನ್ನೂ ಓದಿ- ಮೊಡವೆ ನಿವಾರಣೆ:ಮುಖದಲ್ಲಿ ಆಗಾಗ್ಗೆ ಮೂಡುವ ಮೊಡವೆಗಳಿಂದ ನೀವು ತೊಂದರೆಗೊಳಗಾಗಿದ್ದರೆ ಸೌತೆಕಾಯಿ ಪೇಸ್ಟ್‌ನಲ್ಲಿ ನಿಂಬೆ ರಸ ಮತ್ತು ಮೊಟ್ಟೆಯ ಬಿಳಿಭಾಗವನ್ನು ಬೆರೆಸಿ ಮುಖಕ್ಕೆ ಹಚ್ಚಿ. ಇದರಿಂದ ಮೊಡವೆ ನಿವಾರಣೆಯಾಗುವುದಲ್ಲದೆ, ತ್ವಚೆ ಮೃದುವಾಗುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...