ಮುಖೇಶ್ ಅಂಬಾನಿ ಪ್ರತಿ ತಿಂಗಳು ಪಾವತಿಸುವ ಮನೆಯ ವಿದ್ಯುತ್ ಬಿಲ್ ನಲ್ಲಿ ಒಂದು ಮನೆಯನ್ನೇ ಖರೀದಿಸಬಹುದು!ಎಷ್ಟು ಗೊತ್ತಾ ಆ ಮೊತ್ತ ? ದೇಶದ ಐಶಾರಾಮಿ ಮನೆಗಳಲ್ಲಿ ಮುಖೇಶ್ ಅಂಬಾನಿಯ ಆಂಟಿಲಿಯಾ ಕೂಡಾ ಒಂದು. ಈ ಮನೆಯ ವಿದ್ಯುತ್ ಬಿಲ್ ಪಂಡು ಬಾರಿ ಎಂಥವರನ್ನೂ ದಂಗಾಗಿಸಿ ಬಿಡುತ್ತದೆ. :ಮುಖೇಶ್ ಅಂಬಾನಿ ಎಂದ ಕೂಡಲೇ ತಕ್ಷಣ ಕಣ್ಣೆದುರು ಬರುವುದೇ ಅವರ ಐಶಾರಾಮಿ ಮನೆ.ಆ ಮನೆಯ ಹೆಸರು ಆಂಟಿಲಿಯಾ. ಆಂಟಿಲಿಯಾದ ವಿದ್ಯುತ್ ಬಳಕೆ ಎಷ್ಟು ಎಂದು ಗೊತ್ತಾದರೆ ಆಶ್ಚರ್ಯವಾಗಬಹುದು.ಹೌದು, ಪ್ರತಿ ತಿಂಗಳು ಈ ಮನೆಗೆ ಸುಮಾರು 6,37,240 ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ.ಈ ಭಾರೀ ವಿದ್ಯುತ್ ಬಳಕೆಯ ಹಿಂದಿನ ಮುಖ್ಯ ಕಾರಣ ಮನೆಯ ಗಾತ್ರ.ಆಂಟಿಲಿಯಾ ಹಲವಾರು ದೊಡ್ಡ ಎಲಿವೇಟರ್‌ಗಳನ್ನು ಹೊಂದಿದೆ.ಮಾತ್ರವಲ್ಲ 9 ಹೈ-ಸ್ಪೀಡ್ ಲಿಫ್ಟ್‌ಗಳು ಕೂಡಾ ಇಲ್ಲಿವೆ. ಇಲ್ಲಿ 3 ಹೆಲಿಪ್ಯಾಡ್‌ಗಳು ಮತ್ತು 168 ಕಾರುಗಳಿಗೆ ಪಾರ್ಕಿಂಗ್ ಸ್ಥಳ ಒದಗಿಸಲಾಗಿದೆ. ಇಷ್ಟು ಬೃಹತ್ ಕಟ್ಟಡದಲ್ಲಿ ಕೇವಲಮಾತ್ರ ವಿದ್ಯುತ್ ಬಳಸಿದರೂ ಅದರ ಬಿಲ್ ಲಕ್ಷಗಳಲ್ಲಿಯೇ ಬರುವುದರಲ್ಲಿ ಆಶ್ಚರ್ಯವಿಲ್ಲ. ಇದನ್ನೂ ಓದಿ : ಇಷ್ಟು ದೊಡ್ಡದಾಗಿ ನಿರ್ಮಿಸಿರುವ ಮನೆಯನ್ನು ಸುಸೂತ್ರವಾಗಿ ನಡೆಸಲು ಅಂಬಾನಿ 600 ಮಂದಿ ಕೆಲಸದವರನ್ನು ನೇಮಿಸಿಕೊಂಡಿದ್ದಾರೆ.ಈ ಮನೆಯಲ್ಲಿ ಕೆಲಸ ಮಾಡುವ ಕೆಲಸದವರು ಪ್ರತಿ ತಿಂಗಳು 1.5 ರಿಂದ 2 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ ಎನ್ನುತ್ತವೆ ಮೂಲಗಳು. ಮುಂಬೈನ ಕುಂಬಾಲಾ ಹಿಲ್‌ನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಈ ಐಶಾರಾಮಿ ಮನೆ ಭಾರತದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ.ಈ ಮನೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿದೆ. ಇದನ್ನೂ ಓದಿ : ಈ ಎಲ್ಲಾ ಕಾರಣಗಳಿಂದಈ ಮನೆಗೆ ಭಾರೀ ಪ್ರಮಾಣದ ವಿದ್ಯುತ್ ಪೂರೈಕೆಯ ಅಗತ್ಯವಿರುತ್ತದೆ. ಹಾಗಾಗಿ ಅವರು ತಿಂಗಳಿಗೆ ಕನಿಷ್ಠ 70 ಲಕ್ಷ ರೂಪಾಯಿಯಷ್ಟು ಮೊತ್ತವನ್ನು ವಿದ್ಯುತ್ ಬಿಲ್ ಆಗಿ ಪಾವತಿಸುತ್ತಾರೆ.ಕೆಲವೊಮ್ಮೆ ಇದು 70 ಲಕ್ಷವನ್ನು ಕೂಡಾ ಮೀರುತ್ತದೆ ಎನ್ನಲಾಗಿದೆ. ಅಂಬಾನಿ ಕುಟುಂಬಕ್ಕೆ ಇದು ಅಂಥ ದೊಡ್ಡ ಮೊತ್ತ ಏನಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...