ಬಾಳೆ ಎಲೆಯಲ್ಲಿ ಇಷ್ಟು ಶಕ್ತಿ ಇದೆಯಾ? ಇದರಲ್ಲಿ ಊಟ ಮಾಡಿದ್ರೆ ಈ ಸಮಸ್ಯೆಗಳು ದೂರವಾಗುತ್ತೆ! : ಪ್ರತಿದಿನ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಅನೇಕರಿಗೆ ತಿಳಿದಿದೆ. ಆದರೆ ಬಾಳೆ ಹಣ್ಣಿನ ಹೊರತಾಗಿ ಬಾಳೆ ಮರದ ಪ್ರತಿಯೊಂದು ಭಾಗಕ್ಕೂ ಔಷಧೀಯ ಗುಣಗಳಿವೆ ಎಂಬುದು ನಿಮಗೆ ತಿಳಿದಿದೆಯೇ? : ನಮ್ಮ ಸುತ್ತಮುತ್ತಲಿನ ಅನೇಕ ಮರಗಳು ಮತ್ತು ಸಸ್ಯಗಳು ಔಷಧೀಯ ಗುಣಗಳಿಂದ ತುಂಬಿವೆ. ಇವುಗಳನ್ನು ಸೇವಿಸುವುದರಿಂದ ದೇಹದಿಂದ ಅನೇಕ ರೋಗಗಳನ್ನು ದೂರ ಮಾಡಬಹುದು. ಅದೇ ರೀತಿ ಬಾಳೆ ಮರದಲ್ಲಿ ಹಲವು ಔಷಧೀಯ ಗುಣಗಳಿವೆ. ಇವುಗಳ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಆಯುರ್ವೇದದ ದೃಷ್ಟಿಯಿಂದ ಬಾಳೆಗಿಡಕ್ಕೆ ಬಹಳ ಮಹತ್ವವಿದೆ. ಬಾಳೆಹಣ್ಣು ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ದೇಹಕ್ಕೆ ಶಕ್ತಿಯನ್ನು ನೀಡುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮೂಳೆಗಳ ದೌರ್ಬಲ್ಯವನ್ನು ಹೋಗಲಾಡಿಸುತ್ತದೆ. ಇದನ್ನೂ ಓದಿ- ಪ್ರಸ್ತುತ, ಹೆಚ್ಚಿನ ಸ್ಥಳಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುತ್ತಾರೆ. ಬಾಳೆ ಎಲೆಗಳು ನೈಸರ್ಗಿಕ ಕಬ್ಬಿಣದ ಅಂಶಗಳನ್ನು ಹೊಂದಿದ್ದು,ಅದರ ಮೇಲೆ ಆಹಾರವನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾಳೆ ಎಲೆಯಲ್ಲಿ ಆಹಾರ ಸೇವಿಸುವುದರಿಂದ ಇದರಲ್ಲಿರುವ ಔಷಧೀಯ ಗುಣಗಳು ದೇಹಕ್ಕೆ ಪ್ರಯೋಜನವನ್ನು ನೀಡುತ್ತವೆ.. ಬಾಳೆ ಎಲೆಗಳ ರಸ ತೆಗೆದು ಬಳಸಿದರೆ ಕೆಮ್ಮು, ನೆಗಡಿ ದೂರವಾಗುತ್ತದೆ. ಇವುಗಳನ್ನು ಸೇವಿಸುವುದರಿಂದ ಸಾಮಾನ್ಯ ಸೋಂಕುಗಳಿಂದ ತ್ವರಿತ ಪರಿಹಾರ ದೊರೆಯುತ್ತದೆ. ಬಾಳೆ ಎಲೆಗಳನ್ನು ಆಯುರ್ವೇದದಲ್ಲಿಯೂ ಬಳಸಲಾಗುತ್ತದೆ. ಯಾವುದೇ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಬಾಳೆ ಎಲೆಗಳ ಪೇಸ್ಟ್ ಹಚ್ಚಿದರೇ ತಕ್ಷಣವೇ ಕಡಿಮೆಯಾಗುತ್ತದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...