ದಟ್ಟ,ಉದ್ದ, ಕಪ್ಪು ಕೂದಲು ನಿಮ್ಮದಾಗಬೇಕಿದ್ದರೆ ಈ ಕಾಳು ನೆನೆಸಿದ ನೀರನ್ನು ಬಳಸಿ ನೋಡಿ ! : ಮೆಂತ್ಯೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೆ ಇದು ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ. :ನಾವು ನಿತ್ಯ ಮಾಡುವ ಅಡುಗೆಯಲ್ಲಿ ಅನೇಕ ರೀತಿಯ ಕಾಳುಗಳನ್ನೂ ಬಳಸುತ್ತೇವೆ. ಪ್ರತಿ ಕಾಳು ಬಳಸುವುದರ ಹಿಂದೆಯೂ ಒಂದು ಆರೋಗ್ಯ ಕಾರಣವಿರುತ್ತದೆ. ಹೀಗೆ ರುಚಿ ಮತ್ತು ಆರೋಗ್ಯ ದೃಷ್ಟಿಯಿಂದ ಬಳಸುವ ಒಂದು ಕಾಳು ಮೆಂತ್ಯೆ. ಮೆಂತ್ಯೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೆ ಇದು ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ. ಕೂದಲ ಆರೋಗ್ಯಕ್ಕೆ ಮೆಂತ್ಯೆ ಕಾಳು :ಮೆಂತ್ಯೆ ಕಾಳಿನ ನೀರು :ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಉತ್ಕರ್ಷಣ ನಿರೋಧಕಗಳ ಜೊತೆಗೆ,ಕಬ್ಬಿಣ,ಪ್ರೋಟೀನ್ ಫ್ಲೇವನಾಯ್ಡ್ ಗಳು ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಮೆಂತ್ಯೆ ಬೀಜಗಳು ಹೊಂದಿರುತ್ತವೆ.ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ : ಕೂದಲನ್ನು ದಪ್ಪವಾಗಿಸುತ್ತದೆ:ತಮ್ಮ ಆಹಾರದಲ್ಲಿ ಮೆಂತ್ಯೆಯನ್ನು ಸೇವಿಸುತ್ತಾ ಕೂದಲಿನ ಸಾಂದ್ರತೆಯಲ್ಲಿ ಸುಧಾರಣೆಯನ್ನು ಕಂಡುಕೊಳ್ಳಬಹುದು. ನೆತ್ತಿಗೆ ಉತ್ತಮ ಚಿಕಿತ್ಸೆ:ಮೆಂತ್ಯೆ ಬೀಜಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಣ ಚರ್ಮ,ಅಲರ್ಜಿ ಮುಂತಾದವುಗಳಿಗೆ ಚಿಕಿತ್ಸೆ ನೀಡುವ ಗುಣಲಕ್ಷಣಗಳನ್ನು ಈ ಮೆಂತ್ಯೆ ಹೊಂದಿದೆ. ಮೆಂತ್ಯೆ ನೀರನ್ನು ತಯಾರಿಸುವುದು ಹೇಗೆ ?:ಮೆಂತ್ಯೆ ನೀರನ್ನು ಎರಡು ರೀತಿಯಲ್ಲಿ ತಯಾರಿಸಬಹುದು. ಒಂದು ಚಮಚರಾತ್ರಿ ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಕುಡಿಯಬಹುದು.ಎರಡನೆಯದಾಗಿ, ಒಂದು ಚಮಚ ಮೆಂತ್ಯೆ ಬೀಜಗಳನ್ನು ನೀರಿನಲ್ಲಿ ಕುದಿಸಿ. ಚಹಾದಂತೆ ಕುಡಿಯಬಹುದು. ಇದನ್ನೂ ಓದಿ : ಮೆಂತ್ಯೆ ಚಹಾವನ್ನು ಕುಡಿಯಲು ಸರಿಯಾದ ಸಮಯ ? :ನಿರ್ವಿಶೀಕರಣ ಮತ್ತು ಇತರ ದೈಹಿಕ ಚಟುವಟಿಕೆಗಳಿಗಾಗಿ ಮೆಂತ್ಯೆ ನೀರನ್ನು ಕುಡಿಯುವ ಮೂಲಕ ದಿನವನ್ನು ಪ್ರಾರಂಭಿಸುವುದು ಉತ್ತಮ ಅಭ್ಯಾಸವಾಗಿದೆ. ನಿಮ್ಮ ವಯಸ್ಸು, ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸಿ ಮೆಂತ್ಯೆ ಚಹಾವನ್ನು ಎಷ್ಟು ಸೇವಿಸಬಹುದು ಎನ್ನುವುದನ್ನು ಅರ್ಥಮಾಡಿಕೊಳ್ಳಲು ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ. (ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...