: ನಿತ್ಯ 20 ನಿಮಿಷ ಈ ಒಂದು ಕೆಲಸ ಮಾಡಿದರೆ ಕೆಲವೇ ದಿನಗಳಲ್ಲಿ ತೂಕ ಇಳಿಕೆ ಗ್ಯಾರಂಟಿ : ನೀವು ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿದ್ದೀರಾ? ಈ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ, ಪ್ರತಿದಿನ ಕೇವಲ 20 ನಿಮಿಷಗಳ ಕಾಲ ಈ ಒಂದು ಕೆಲಸ ಮಾಡಿದರೆ ಸಾಕು ಸುಲಭವಾಗಿ ತೂಕ ಇಳಿಸಬಹುದು. ನಿಮ್ಮ ಬೆಲ್ಲಿ ಫ್ಯಾಟ್ ಕೂಡ ಮಾಯವಾಗುತ್ತೆ. :ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳವು ಬಹುತೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ಬದಲಾದ ಜೀವನಶೈಲಿ, ಹೆಚ್ಚಿನ ದೈಹಿಕ ಚಟುವಟಿಕೆಗಳು ಇಲ್ಲದೇ ಇರುವುದು. ವರ್ಕ್ ಫ್ರಮ್ ಹೋಂ ಸಂಸ್ಕೃತಿ ಸೇರಿದಂತೆ ಇದಕ್ಕೆ ಹಲವು ಕಾರಣಗಳಿವೆ. ತೂಕ ಹೆಚ್ಚಳ ಒಂದು ರೋಗವಲ್ಲ. ಆದರೆ, ಅತಿಯಾದ ತೂಕದಿಂದಾಗಿ ಉಂಟಾಗುವ ಸ್ಥೂಲಕಾಯತೆಯು ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯಾಘಾತ, ಮಧುಮೇಹದಂತಹ ಕಾಯಿಲೆಗಳ ಉಗ್ರಾಣ ಎಂತಲೇ ಹೇಳಬಹುದು. ಆದರೆ, ಪ್ರತಿನಿತ್ಯ ಒಂದು ಸಣ್ಣ ಕೆಲಸ ಮಾಡುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಹೌದು, ಈ ಬಿಡುವಿಲ್ಲದ ಜೀವನಶೈಲಿಯಲ್ಲಿ ವಾಕ್,ಮಾಡಲು ಸಮಯವೇ ಇಲ್ಲ ಎಂದು ದೂರುವವರು ಪ್ರತಿನಿತ್ಯ ಕೇವಲ 20 ನಿಮಿಷಗಳ ಕಾಲ ಒಂದು ಸಣ್ಣ ಕೆಲಸ ಮಾಡುವ ಮೂಲಕ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ( ) ಕರಗಿಸಬಹುದು. ಅದಕ್ಕಾಗಿ ಹೆಚ್ಚೇನು ಮಾಡುವ ಅಗತ್ಯವಿಲ್ಲ ಜಸ್ಟ್ ಸ್ಕಿಪ್ಪಿಂಗ್ ಆಡಿದರೆ ಅಷ್ಟೇ ಸಾಕು. ಇದನ್ನೂ ಓದಿ- ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಕೇವಲ 20 ನಿಮಿಷಗಳ ಕಾಲ ಹಗ್ಗದಾಟ ಎಂದರೆ ಸ್ಕಿಪ್ಪಿಂಗ್ () ಆಡುವುದರಿಂದ ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಅದರಲ್ಲೂ, ನಿತ್ಯ ತಪ್ಪದೆ ಸ್ಕಿಪ್ಪಿಂಗ್ ಆಡುವುದರಿಂದ ಆರೋಗ್ಯಕರವಾಗಿ ಮತ್ತು( ) ಎಂದು ಹೇಳಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ನಿತ್ಯ 20 ನಿಮಿಷ ಸ್ಕಿಪ್ಪಿಂಗ್ ಆಡುವುದರಿಂದ ಸುಮಾರು 300 ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು ಎನ್ನಲಾಗುತ್ತದೆ. ಆದಾಗ್ಯೂ, ಇದಕ್ಕಾಗಿ ಸ್ಕಿಪ್ಪಿಂಗ್ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಅತ್ಯಗತ್ಯ. ಇದನ್ನೂ ಓದಿ- ಹಗ್ಗದಾಟ/ಸ್ಕಿಪ್ಪಿಂಗ್ ಆಡುವಾಗ ಈ ವಿಷಯಗಳ ಬಗ್ಗೆ ವಿಶೇಷ ಗಮನವಿರಲಿ:* ಖಾಲಿ ಹೊಟ್ಟೆಯಲ್ಲಿ ಹಗ್ಗದಾಟ:ಆರೋಗ್ಯ ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಹಗ್ಗದಾಟ/ಸ್ಕಿಪ್ಪಿಂಗ್ ಆಡಬಾರದು. ಇದರಿಂದ ಹೊಟ್ಟೆ ನೋವು ತಲೆತಿರುಗುವಿಕೆಯಂತಹ ಸಮಸ್ಯೆಗಳು ಬಾಧಿಸಬಹುದು. * ತಿಂದ ಕೂಡ ಸ್ಕಿಪ್ಪಿಂಗ್:ಊಟ/ತಿಂಡಿ ನಂತರ ತಕ್ಷಣ ಸ್ಕಿಪ್ಪಿಂಗ್ ಆಡುವ ತಪ್ಪನ್ನು ಎಂದಿಗೂ ಮಾಡಬಾರದು. ಈ ರೀತಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಯಾವಾಗಲೂ ನೀವು ಆಹಾರ ಸೇವಿಸಿದ 2-3 ಗಂಟೆಗಳ ಬಳಿಕವಷ್ಟೇ ಸ್ಕಿಪ್ಪಿಂಗ್ ಆಡುವುದನ್ನು ಪರಿಗಣಿಸಿ. * ಲಘು ವ್ಯಾಯಾಮ:ನೀವು ಸ್ಕಿಪ್ಪಿಂಗ್ ಆರಂಭಿಸುವ ಮೊದಲು ಲಘು ವ್ಯಾಯಾಮಕ್ಕೆ ಒಟ್ಟು ನೀಡಿ. ಇದರಿಂದ ದೇಹ ವಾರ್ಮ್ ಅಪ್ ಆಗುವುದರಿಂದ ಶೀಘ್ರದಲ್ಲೇ ನಿರೀಕ್ಷಿತ ಫಲಿತಾಂಶವನ್ನು ಕಾಣಬಹುದು. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...