: ಜೂನ್ ತಿಂಗಳ 'ಗೃಹಲಕ್ಷ್ಮಿ' ಹಣ ಬರದಿದ್ರೆ ಇಂದೇ ಈ ಕೆಲಸ ಮಾಡಿ : ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಹಣ ಬಾರದಿದ್ದರೆ ತಕ್ಷಣವೇ ನಿಮ್ಮ ದಾಖಲೆಗಳಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಬೇಕು. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ʼಗೃಹಲಕ್ಷ್ಮಿʼ ಯೋಜನೆಯು ಒಂದು. ಈಗಾಗಲೇ ಜೂನ್‌ ತಿಂಗಳ ಹಣವನ್ನು ಸರ್ಕಾರ ಬ್ಯಾಂಕಿನಲ್ಲಿ ಜಮಾ ಮಾಡಿದೆ. ಆದರೆ ಹಂತ ಹಂತವಾಗಿ ಮಹಿಳೆಯರ ಖಾತೆಗೆ ಆ ಹಣ ಜಮಾ ಆಗಲಿದೆ. ಈ ಬಗ್ಗೆ ಈಗಾಗಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಹ ಸ್ಪಷ್ಟನೆ ನೀಡಿದ್ದಾರೆ. ಜೂನ್ ತಿಂಗಳ ಕಂತಿನ 2,000 ರೂ. ಹಣ ಖಾತೆಗೆ ಜಮಾ ಆಗದ ಯಜಮಾನಿಯರಿಗೆವು ಸಿಹಿಸುದ್ದಿ ನೀಡಿದೆ. ಮುಖ್ಯ ದಾಖಲೆಗಳನ್ನು ಸರಿಪಡಿಸಿದರೆ ನಿಮ್ಮ ಖಾತೆಗೂ ಹಣ ಬರಲಿದೆ. ಹೌದು, ಸಾಕಷ್ಟು ಜನರು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೂ ಸಹ ಆಧಾರ್‌ ಸೀಡಿಂಗ್ ಮಾಡಿಕೊಂಡಿಲ್ಲ. ಹೀಗಾಗಿ ಅವರಿಗೆ ಹಣ ಬರುತ್ತಿಲ್ಲ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡರೂ ಸಹಾಯಧನ ಪಾವತಿಯಾಗದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್‌ಗಳಲ್ಲಿ ಪರಿಹರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಹಣ ಬಾರದಿದ್ದರೆ ತಕ್ಷಣವೇ ನಿಮ್ಮ ದಾಖಲೆಗಳಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಬೇಕು. ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌, ಆಧಾರ್‌ ಕಾರ್ಡ್‌ ಜೊತೆಗೆ ರೇಷನ್‌ ಕಾರ್ಡ್‌ ಲಿಂಕ್‌ ಆಗದಿದ್ರೆ, ಇಲ್ಲಾ ಆಧಾರ್‌ ಸೀಡಿಂಗ್‌ ಮಾಡಿಸದಿದ್ರೆ ಕೂಡಲೇ ಈ ಕೆಲಸ ಮಾಡಿಸಿಕೊಳ್ಳಬೇಕು. ಇದನ್ನೂ ಓದಿ: ನಿಮ್ಮಯಲ್ಲಿ ಯಾವುದೇ ರೀತಿಯ ದೋಷಗಳಿದ್ದಲ್ಲಿ, ಕೂಡಲೇ ಬ್ಯಾಂಕ್‌ನಲ್ಲಿ ಹೊಸದಾಗಿ ಖಾತೆ ತೆರೆಯಬೇಕು. ಈ ಮೂಲಕ ಆ ಬ್ಯಾಂಕ್‌ ಖಾತೆಯನ್ನು ಗೃಹಲಕ್ಷ್ಮಿ ಯೋಜನೆಗೆ ಲಿಂಕ್‌ ಮಾಡಿದ್ರೆ ಬಾಕಿ ಉಳಿದಿರುವ ಎಲ್ಲಾ ಹಣವು ನಿಮ್ಮ ಹೊಸ ಖಾತೆಗೆ ಜಮಾ ಅಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...