: ಕೂದಲಿನ ಹಲವು ಸಮಸ್ಯೆಗಳಿಗೆ ಈ ಎಣ್ಣೆಯೊಂದೇ ಪರಿಹಾರ : ಡ್ಯಾಂಡ್ರಫ್, ಕೂದಲು ಉದರುವಿಕೆ, ಹೇನಿನ ಸಮಸ್ಯೆ ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಗೆ ಕೇವಲ ಒಂದೇ ಒಂದು ಎಣ್ಣೆ ಪರಿಹಾರ ನೀಡಬಲ್ಲದು ಎಂದರೆ ನಿಮಗೆ ಆಶ್ಚರ್ಯವಾಗಬಹುದು. :ಬದಲಾದ ಕಳಪೆ ಜೀವನಶೈಲಿಯಿಂದಾಗಿ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಬಾಧಿಸುತ್ತಿರಬಹುದು. ಇದರಲ್ಲಿ ತಲೆಹೊಟ್ಟು, ಜಡ ಕೂದಲು, ಕೂದಲು ಉದುರುವಿಕೆಯಂತಹ ಹಲವು ಸಮಸ್ಯೆಗಳಿರಬಹುದು. ಆದರೆ, ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಒಂದೇ ಒಂದು ಎಣ್ಣೆ ಅತ್ಯುತ್ತಮ ಮದ್ದು ಎಂದು ಸಾಬೀತುಪಡಿಸಬಹುದು. ಅದುವೇ ಟೀ ಟ್ರೀ ಆಯಿಲ್. ಟೀ ಟ್ರೀ ಆಯಿಲ್ ಪ್ರಯೋಜನ ( ):ಟೀ ಟ್ರೀ ಆಯಿಲ್ ನಲ್ಲಿ ಆಂಟಿ-ಸೆಪ್ಟಿಕ್, ಆಂಟಿಫಂಗಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇವುಗಳುಗಳನ್ನು ನಿವಾರಿಸಿ ಕೂದಲ ಬೆಳವಣಿಗೆಗೆ ಸಹಕಾರಿ ಆಗಿದೆ ಎಂದು ಹೇಳಲಾಗುತ್ತದೆ. ಕೂದಲಿನ ಯಾವ ಸಮಸ್ಯೆಗಳಿಗೆ ಟೀ ಟ್ರೀ ಆಯಿಲ್ ಅನ್ನು ಹೇಗೆ ಬಳಸಬೇಕು ಬಳಸಬೇಕು ಎಂದು ತಿಳಿಯೋಣ... ತಲೆಹೊಟ್ಟಿನ ಸಮಸ್ಯೆ ( ):ಟೀ ಟ್ರೀ ಆಯಿಲ್ ( ) ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಬಳಸುವುದರಿಂದ ಇದರಲ್ಲಿರುವ ಆ್ಯಂಟಿ ಫಂಗಲ್ ಗುಣಗಳು ತಲೆಹೊಟ್ಟಿನ ಸಮಸ್ಯೆ ನಿವಾರಿಸಲು ಸಹಾಯಕವಾಗಿದೆ. ಇದನ್ನೂ ಓದಿ- ಕೂದಲಿನ ಜಿಗುಟುತನ ( ):ಟೀ ಟ್ರೀ ಆಯಿಲ್ ಅನ್ನು ಬಳಸುವುದರಿಂದ ಇದರಲ್ಲಿರುವ ಆಂಟಿ-ಡ್ಯಾಂಡ್ರಫ್ ಗುಣಗಳು ನೆತ್ತಿಯನ್ನು ತೇವಗೊಳಿಸುವ ಮೂಲಕ ಕೂದಲಿನ ಜಿಗುಟುತನವನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಕೂದಲುದುರುವ ಸಮಸ್ಯೆ ( ):ಟೀ ಟ್ರೀ ಆಯಿಲ್‌ನಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಿಸಹಕಾರಿ ಆಗಿದೆ. ನೆತ್ತಿಯ ತುರಿಕೆಗೆ ಪರಿಹಾರ ( ):ಟೀ ಟ್ರೀ ಆಯಿಲ್ ಅನ್ನು ನಿಯಮಿತವಾಗಿ ಬಳಸುವುದರಿಂದ, ಈ ಎಣ್ಣೆಯಿಂದ ತಯಾರಿಸಿದ ಹೇರ್ ಮಾಸ್ಕ್ ಬಳಸುವುದರಿಂದ ನೆತ್ತಿಯಲ್ಲಿ ತುರಿಕೆ ಮತ್ತು ಶುಷ್ಕತೆಯ ಸಮಸ್ಯೆಯನ್ನು ನಿವಾರಿಸಬಹುದು. ಇದನ್ನೂ ಓದಿ- ಕೂದಲಿನ ಬೆಳವಣಿಗೆ ( ):ಟೀ ಟ್ರೀ ಆಯಿಲ್ ಬಳಕೆಯು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಲ್ಲಿರುವ ನಂಜುನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ಕೂದಲಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಹೇನಿನ ಸಮಸ್ಯೆಯಿಂದ ಮುಕ್ತಿ ( ):ಟೀ ಟ್ರೀ ಆಯಿಲ್ ಅನ್ನು ಕೂದಲಿಗೆ ಹಚ್ಚುವುದರಿಂದ ಇದರ ಕೀಟ ನಾಶಕ ಪರಿಣಾಮವು ಹೇನಿನ ಮೊಟ್ಟೆಗಳನ್ನು ನಾಶಪಡಿಸುತ್ತದೆ. ಹಾಗಾಗಿ, ಟೀ ಟ್ರೀ ಆಯಿಲ್ ಕೂದಲಿನಿಂದ ಪರೋಪಜೀವಿಗಳನ್ನು (ಹೇನು) ತೆಗೆದುಹಾಕಲು ತುಂಬಾ ಸಹಾಯಕವಾಗಿದೆ ಎಂದು ಹೇಳಲಾಗುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...