: ಸುಲಭವಾಗಿ ಈರುಳ್ಳಿ ದೋಸೆ ಮಾಡುವುದು ಹೇಗೆ? ಇಲ್ಲಿದೆ ವಿಧಾನ : ಈರುಳ್ಳಿ ದೋಸೆ ದಕ್ಷಿಣ ಭಾರತದ ಜನಪ್ರಿಯ ಖಾದ್ಯ. ಇದನ್ನು ಅಕ್ಕಿ ಮತ್ತು ಉದ್ದಿನ ಬೇಳೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. :ಈರುಳ್ಳಿ ದೋಸೆ ದಕ್ಷಿಣ ಭಾರತದ ಜನಪ್ರಿಯ ಖಾದ್ಯ. ಇದನ್ನು ಅಕ್ಕಿ ಮತ್ತು ಉದ್ದಿನ ಬೇಳೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದಕ್ಕೆ ಕತ್ತರಿಸಿದ ಈರುಳ್ಳಿ, ಮಸಾಲೆಗಳು ಮತ್ತು ಕೆಲವು ಇತರ ತರಕಾರಿಗಳನ್ನು ಬಳಸಿ ಮಾಡಲಾಗುತ್ತದೆ. ಈರುಳ್ಳಿ ದೋಸೆಯನ್ನು ಸಾಮಾನ್ಯವಾಗಿ ಸಾಂಬಾರಿನೊಂದಿಗೆ ಸವಿಯುತ್ತಾರೆ. ತಿನ್ನಲು ತುಂಬಾ ರುಚಿಯಾಗಿರುತ್ತದೆ. ಬೆಳಗಿನ ಉಪಾಹಾರದಲ್ಲಿ ಈರುಳ್ಳಿ ದೋಸೆಯನ್ನು ಸೇವಿಸಬಹುದು. ಈರುಳ್ಳಿ ದೋಸೆ ಮಾಡುವ ವಿಧಾನ: ಮೊದಲು ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಸುಮಾರು 6 ಗಂಟೆಗಳ ಕಾಲ ನೆನೆಸಿಡಿ. ಅದರ ನಂತರ ನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟಿಗೆ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು 8-10 ಗಂಟೆಗಳ ಕಾಲ ಹುದುಗಿಸಲು ಬಿಡಿ. ಇದನ್ನೂ ಓದಿ: ಹಿಟ್ಟು ಸ್ವಲ್ಪ ಹುಳಿಬರಬೇಕು. ಈಗ ಇದಕ್ಕೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಸಣ್ಣದಾಗಿ ಕತ್ತರಿಸಿದ ಹಸಿ ಮೆಣಸಿನ ಕಾಯಿ ಹಾಕಿ. ನಿಮಗೆ ಬೇಕಾದಲ್ಲಿ ಇದಕ್ಕೆ ತುರಿದ ಕ್ಯಾರೆಟ್‌ ಅಥವಾ ಸಬ್ಬಸಿಗೆ ಸೊಪ್ಪು ಸೇರಿಸಬಹುದು. ಈಗ ಹಿಟ್ಟನ್ನು ಚೆನ್ನಾಗಿ ಕಲಿಸಿ, ದೋಸೆ ತವಾ ಬಿಸಿ ಮಾಡಿ. ಬಿಸಿಯಾದ ಹೆಂಚಿಗೆ ದೋಸೆ ಹೊಯ್ದು ಎರಡೂ ಬದಿಗಳು ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಚಟ್ನಿ ಮತ್ತು ಸಾಂಬಾರ್ ಜೊತೆ ಬಿಸಿಯಾಗಿ ಬಡಿಸಿ. ಈರುಳ್ಳಿ ದೋಸೆಯ ಪ್ರಯೋಜನಗಳು: ಅಕ್ಕಿ ಮತ್ತು ಉದ್ದಿನ ಬೇಳೆ ಎರಡೂ ಕಾರ್ಬೋಹೈಡ್ರೇಟ್‌ ಉತ್ತಮ ಮೂಲಗಳು. ಈರುಳ್ಳಿ ದೋಸೆಯು ಉತ್ತಮ ಶಕ್ತಿಯ ಮೂಲವಾಗಿದೆ. ಇದು ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಉತ್ತಮ ಮೂಲವಾಗಿದೆ. ಈರುಳ್ಳಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...