'ಗೃಹಲಕ್ಷ್ಮಿ ಯೋಜನೆ' ಹಣ ಜಮಾ ವಿಳಂಬದ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್! : ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣವಷ್ಟೇ ಜಮಾ ಮಾಡಲಾಗಿದೆ. ಜುಲೈ ತಿಂಗಳ ಹಣವನ್ನು ಜಮಾ ಮಾಡಿಲ್ಲ. ಅಲ್ಲದೇ ಆಗಸ್ಟ್ ತಿಂಗಳ ಹಣ ಸಹ ವರ್ಗಾವಣೆ ಮಾಡುವುದಿದೆ. ಗೃಹಲಕ್ಷ್ಮಿ ಯೋಜನೆಯ ಹಣ ವಿಳಂಬವಾಗುತ್ತಿರುವುದೇಕೆ? ಅನ್ನೋ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉತ್ತರ ನೀಡಿದ್ದಾರೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ 'ಗೃಹಲಕ್ಷ್ಮಿʼ ಯೋಜನೆಯು ಒಂದು. ಈ ಯೋಜನೆಯಡಿ ರಾಜ್ಯದ ಕೋಟ್ಯಂತರ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಹಣ ನೀಡಲಾಗುತ್ತಿದೆ. ಮನೆಯ ಯಜಮಾನಿಯ ಖಾತೆಗೆ ನೇರವಾಗಿ ಹಣ ತಲುಪಿಸಲಾಗುತ್ತಿದೆ. ಗೃಹಲಕ್ಷ್ಮಿ ಹಣ ಜಮಾ ವಿಳಂಬದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಹೌದು, ರಾಜ್ಯದ ಮಹಿಳೆಯರಿಗೆಯ ಜೂನ್ ತಿಂಗಳ ಹಣವಷ್ಟೇ ಜಮಾ ಮಾಡಲಾಗಿದೆ. ಜುಲೈ ತಿಂಗಳ ಹಣವನ್ನು ಜಮಾ ಮಾಡಿಲ್ಲ. ಅಲ್ಲದೇ ಆಗಸ್ಟ್ ತಿಂಗಳ ಹಣ ಸಹ ವರ್ಗಾವಣೆ ಮಾಡುವುದಿದೆ. ಗೃಹಲಕ್ಷ್ಮಿ ಯೋಜನೆಯ ಹಣ ವಿಳಂಬವಾಗುತ್ತಿರುವುದೇಕೆ? ಅನ್ನೋ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉತ್ತರ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಗಾಗಿ ಸುಮಾರು 2,400 ಕೋಟಿ ರೂ. ಖರ್ಚಾಗುತ್ತಿದೆ. ಮಂಡ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ವರ್ಗಾವಣೆಗೆ ಡಿಪಿಟಿಗೆ ಪುಷ್ ಮಾಡಲಾಗಿತ್ತು. ಆದರೇ ಮೂರು ದಿನಗಳು ಆದರೂ ಕೆಲವರಿಗೆ ಹಣ ವರ್ಗಾವಣೆಯಾಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೆಲವು ಜಿಲ್ಲೆಗಳ ಯಜಮಾನಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲಾಗಿದೆ. ಬಾಕಿ ಹಣ ಜಮಾ ಆಗದಂತ ಯಜಮಾನಿಯರ ಖಾತೆಗೆ ಇನ್ನೂ ನಾಲ್ಕೈದು ದಿನಗಳಲ್ಲಿ ಆಗಲಿದೆ. ಅವರಿಗೆ ಹಣ ಜಮಾ ಮಾಡುವುದಕ್ಕೆ ಬ್ಯಾಂಕ್‌ಗಳಿಗೆ ಕಳಿಸಲಾಗಿದೆ. ಈಗಾಗಲೇ ಜೂನ್ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಜುಲೈ ತಿಂಗಳ ಹಣ ಮಾತ್ರ ಕೆಲವರಿಗೆ ಬಾಕಿ ಇದೆ. ಆ ಹಣವನ್ನು ಇನ್ನೆರಡು ದಿನಗಳಲ್ಲಿ ಯಜಮಾನಿಯರ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೇ ಆಗಸ್ಟ್ ತಿಂಗಳ ಹಣವನ್ನು ಸಹ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ತಿಳಿಸಿದರು. ಆಗಲು ತಡವಾಗುತ್ತಿರುವುದಕ್ಕೆ ದೊಡ್ಡ ಮೊತ್ತದ ಹಣ ಆಗಿರುವುದೇ ಕಾರಣ. 2,400 ಕೋಟಿ ರೂ. ಮೊತ್ತದ ಹಣವನ್ನು ಒಟ್ಟಿಗೆ ಹಾಕಿದಾಗ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅದು ಹಂತ ಹಂತವಾಗಿ ಪ್ರತಿಯೊಬ್ಬರ ಖಾತೆಗೂ ಜಮಾ ಆಗುತ್ತದೆ. ಹಣ ದೊರೆಯದ ಮಹಿಳೆಯರ ಖಾತೆಗೆ ಇನ್ನೆರಡು ದಿನಗಳಲ್ಲಿ ಹಣ ಜಮಾ ಆಗಲಿದೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...