ಬಾಳೆಹಣ್ಣಿನ ಸಿಪ್ಪೆಯನ್ನು ಈ ರೀತಿ ಮುಖಕ್ಕೆ ಹಚ್ಚಿದರೆ ಮೊಡವೆ ಕಲೆ ತೊಲಗಿ, ಹೊಳೆಯುವ ಚರ್ಮ ನಿಮ್ಮದಾಗುವುದು! : ನಿಮ್ಮ ಮುಖದ ಮೇಲಿನ ಮೊಡವೆ ಕಲೆಗಳಿದ್ದರೆ ಬಾಳೆಹಣ್ಣಿನ ಸಿಪ್ಪೆಯಿಂದ ಪರಿಹಾರ ಪಡೆಯಬಹುದು. :ನಿಮ್ಮ ಮುಖದ ಮೇಲಿನ ಮೊಡವೆ ಕಲೆಗಳಿದ್ದರೆ ಬಾಳೆಹಣ್ಣಿನ ಸಿಪ್ಪೆಯಿಂದ ಪರಿಹಾರ ಪಡೆಯಬಹುದು. ಇದರಿಂದ ನಿಮ್ಮ ಚರ್ಮವು ಹೊಳೆಯುತ್ತದೆ. ಬಾಳೆಹಣ್ಣಿನ ಸಿಪ್ಪೆಗಳು ಕಣ್ಣುಗಳ ಕೆಳಗೆ ಡಾರ್ಕ್‌ ಸರ್ಕಲ್‌ಗಳು ಮತ್ತು ಸುಕ್ಕುಗಳ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಸಹ ಪರಿಣಾಮಕಾರಿ ಆಗಿವೆ. ಮೊದಲು ನಿಮ್ಮ ಮುಖವನ್ನು ತೊಳೆಯಿರಿ. ನಂತರ ನಿಧಾನವಾಗಿ ಒರೆಸಿ ಸ್ವಚ್ಛಗೊಳಿಸಿ. ಈಗ ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣುಗಳ ಕೆಳಗೆ ನಿಧಾನವಾಗಿ ಉಜ್ಜಿ, ಸುಮಾರು 10 ನಿಮಿಷಗಳ ಕಾಲ ಇರಿಸಿ ನಂತರ ತೊಳೆಯಿರಿ. ಇದನ್ನೂ ಓದಿ: ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ಮಾಡಲು, ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಜೇನುತುಪ್ಪ, ಮೊಸರು ಮತ್ತು 2 ಬಾಳೆಹಣ್ಣಿನ ತುಂಡುಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಈಗ ಈ ಫೇಸ್ ಮಾಸ್ಕ್ ಮುಖಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಇರಿಸಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಗೆ ವಿಟಮಿನ್ ಬಿ6, ವಿಟಮಿನ್ ಬಿ12, ಸತು ಮತ್ತು ಅನೇಕ ಆ್ಯಂಟಿ ಆಕ್ಸಿಡೆಂಟ್ ಗಳು ದೊರೆಯುತ್ತದೆ, ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದನ್ನೂ ಓದಿ: ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...