ಎಸ್‌ಬಿ‌ಐನ ಈ ನಾಲ್ಕು ಸ್ಪೆಷಲ್ ಎಫ್‌ಡಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ ಹೆಚ್ಚು ಬಡ್ಡಿ! : ನೀವು ಪ್ರತಿ ಬ್ಯಾಂಕ್‌ನಲ್ಲಿ ಎಫ್‌ಡಿ ಆಯ್ಕೆಗಳನ್ನು ಕಾಣಬಹುದು. ವಿವಿಧ ಅವಧಿಗಳಿಗೆ ಅನುಗುಣವಾಗಿ ಬಡ್ಡಿದರಗಳು ಸಹ ವಿಭಿನ್ನವಾಗಿವೆ. ಅದೇ ಸಮಯದಲ್ಲಿ, ಕೆಲವು ವಿಶೇಷ ಎಫ್‌ಡಿ ಯೋಜನೆಗಳು ಸಹ ಅನೇಕ ಬ್ಯಾಂಕ್‌ಗಳಲ್ಲಿ ಲಭ್ಯವಿವೆ. :ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡುವ ವಿಚಾರಕ್ಕೆ ಬಂದರೆ ಎಫ್‌ಡಿ ಬಹುತೇಕ ಜನರ ಪ್ರಥಮ ಆಯ್ಕೆಯಾಗಿರುತ್ತದೆ. ಎಫ್‌ಡಿಯಲ್ಲಿ ಹೂಡಿಕೆ ಮಾಡುವುದರಿಂದ ಹಣ ಸುರಕ್ಷಿತವಾಗಿರುವುದರ ಜೊತೆಗೆ ಹೂಡಿಕೆ ಮೇಲೆ ಬಡ್ಡಿಯನ್ನು ಕೂಡ ಪಡೆಯಬಹುದು. ವಿವಿಧ ಅವಧಿಗಳಿಗೆ ಅನುಗುಣವಾಗಿ ಬಡ್ಡಿದರ ಲಭ್ಯವಿರುತ್ತದೆ. ಪ್ರತಿ ಬ್ಯಾಂಕ್‌ನಲ್ಲಿ ಎಫ್‌ಡಿ ಆಯ್ಕೆಗಳನ್ನು ಕಾಣಬಹುದು. ವಿವಿಧ ಅವಧಿಗಳಿಗೆ ಅನುಗುಣವಾಗಿ ಬಡ್ಡಿದರಗಳು ಸಹ ವಿಭಿನ್ನವಾಗಿವೆ. ಅದೇ ಸಮಯದಲ್ಲಿ, ಕೆಲವು ವಿಶೇಷ ಎಫ್‌ಡಿ ಯೋಜನೆಗಳು ಸಹ ಅನೇಕ ಬ್ಯಾಂಕ್‌ಗಳಲ್ಲಿ ಲಭ್ಯವಿವೆ. ಭಾರತದ ಅತಿದೊಡ್ಡ ಸರ್ಕಾರಿ ವಲಯದ( ) ತನ್ನ ಗ್ರಾಹಕರಿಗಾಗಿ ಕೆಲವು ವಿಶೇಷ ಎಫ್‌ಡಿ ಯೋಜನೆಗಳನ್ನು ಆರಂಭಿಸಿದೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚು ಬಡ್ಡಿ ಪ್ರಯೋಜನವನ್ನು ಪಡೆಯಬಹುದು. ಎಸ್‌ಬಿ‌ಐನ ಅಂತಹ ನಾಲ್ಕು ಪ್ರಮುಖ ಎಫ್‌ಡಿ ಯೋಜನೆಗಳ ಬಗ್ಗೆ ತಿಳಿಯೋಣ... * ಅಮೃತ್ ವೃಷ್ಟಿ ( ):ಎಸ್‌ಬಿಐನ ಅಮೃತ್ ವೃಷ್ಟಿ ( ) ಯೋಜನೆಯು 444 ದಿನಗಳವರೆಗಿನ ಯೋಜನೆಯಾಗಿದೆ.. ಈ ಯೋಜನೆಯಲ್ಲಿ ಎಫ್‌ಡಿ ಇಡುವುದರಿಂದ ಸಾಮಾನ್ಯ ಜನರಿಗೆ 7.25% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. ಆದರೆ, ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತಿದೆ. ಅರ್ಥಾತ್ ಹಿರಿಯ ನಾಗರಿಕರಿಗೆ 7.75% ಬಡ್ಡಿ ಸೌಲಭ್ಯ ಸಿಗಲಿದೆ. ಇದನ್ನೂ ಓದಿ- * ಅಮೃತ ಕಲಶ ಯೋಜನೆ ( ):ಯ ( ) 400 ದಿನಗಳವರೆಗಿನ ಯೋಜನೆಯಾಗಿದೆ. . ಈ ಎಫ್‌ಡಿಯಲ್ಲಿ ಸಾಮಾನ್ಯ ಜನರಿಗೆ 7.10% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದ್ದರೆ, ಹಿರಿಯ ನಾಗರಿಕರು 7.60% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದಾರೆ. ನೀವು 30 ಸೆಪ್ಟೆಂಬರ್ 2024 ರವರೆಗೆ ಇದರಲ್ಲಿ ಹೂಡಿಕೆ ಮಾಡಬಹುದು. * ವಿ ಕೇರ್ ಸ್ಕೀಮ್ ( ):ಎಸ್‌ಬಿ‌ಐನ ವಿ ಕೇರ್ ಸ್ಕೀಮ್ ( )ನಲ್ಲಿಯೂ ಹೆಚ್ಚಿನ ಬಡ್ಡಿ ಸೌಲಭ್ಯ ಲಭ್ಯವಿದೆ. ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳ ಮೇಲೆ ಹೆಚ್ಚುವರಿ ಬಡ್ಡಿಯನ್ನು ನೀಡುವ ಮೂಲಕ ಅವರ ಆದಾಯವನ್ನು ಸುರಕ್ಷಿತಗೊಳಿಸುವುದು ಎಸ್‌ಬಿಐನ ಈ ವಿಶೇಷ ಯೋಜನೆಯ ಉದ್ದೇಶವಾಗಿದೆ. ಇದರಲ್ಲಿ 5 ವರ್ಷ ಮತ್ತು 10 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಪ್ರಸ್ತುತ, ಹಿರಿಯ ನಾಗರೀಕರು ಎಸ್‌ಬಿಐನ ವಿಕೇರ್ ಯೋಜನೆಯಲ್ಲಿ ಶೇಕಡಾ 7.50 ರಷ್ಟು ಬಡ್ಡಿಯನ್ನು ಪಡೆಯುತ್ತಿದ್ದಾರೆ. ಇದನ್ನೂ ಓದಿ- * ಸರ್ವೋತ್ತಮ ಎಫ್‌ಡಿ ( ):ನೀವು 1 ವರ್ಷ ಅಥವಾ 2 ವರ್ಷಗಳ ಕಾಲ ಎಫ್‌ಡಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಸರ್ವೋತ್ತಮ ಎಫ್‌ಡಿ ಅತ್ಯುತ್ತಮ ಹೂಡಿಕೆ ಯೋಜನೆಯಾಗಿದೆ. ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಠೇವಣಿಗಳ ಮೇಲೆ ಉತ್ತಮ ಬಡ್ಡಿಯನ್ನು ಪಡೆಯಲು ಇದು ಉತ್ತಮ ಯೋಜನೆಯಾಗಿದೆ. ಸರ್ವೋತ್ತಮ ಎಫ್‌ಡಿಯಲ್ಲಿ 1 ಕೋಟಿಗಿಂತ ಹೆಚ್ಚು ಮತ್ತು 2 ಕೋಟಿಗಿಂತ ಕಡಿಮೆ ಮೊತ್ತವನ್ನು ಠೇವಣಿ ಇಡಬಹುದು. ಇದರಲ್ಲಿ ಜನಸಾಮಾನ್ಯರಿಗೆ ಒಂದು ವರ್ಷದ ಎಫ್‌ಡಿ ಮೇಲೆ 7.10% ಮತ್ತು ಎರಡು ವರ್ಷಗಳ ಅವಧಿಯ ಎಫ್‌ಡಿಯಲ್ಲಿ 7.40% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಆದರೆ ಹಿರಿಯ ನಾಗರಿಕರು 1 ವರ್ಷದ ಎಫ್‌ಡಿಯಲ್ಲಿ 7.60% ಮತ್ತು 2 ವರ್ಷದ ಠೇವಣಿಯಲ್ಲಿ 7.90% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...