ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಸುಲಭವಾಗಿ ಕಂಟ್ರೋಲ್‍ಗೆ ಬರುತ್ತೆ ಶುಗರ್ ಲೆವೆಲ್ : ಪ್ರಸ್ತುತ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಸಮಸ್ಯೆ ಸಕ್ಕರೆ ಕಾಯಿಲೆ. ಆದರೆ, ನಿಮ್ಮ ಮನೆಯಲ್ಲಿರುವ ಒಂದು ಧಾನ್ಯದ ಸಹಾಯದಿಂದ ಈ ಕಾಯಿಲೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು. :ಒಮ್ಮೆ ಸಕ್ಕರೆ ಕಾಯಿಲೆ ಎಂದರೆ ಡಯಾಬಿಟಿಸ್ ಬಂತೆಂದರೆ ಜೀವಪೂರ್ತಿ ಈ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ವಾಸ್ತವವಾಗಿ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಅದು ಇತರ ಕಾಯಿಲೆಗಳ ಅಪಾಯವನ್ನೂ ಹೆಚ್ಚಿಸಬಹುದು. ಹಾಗಾಗಿ, ಶುಗರ್ ಲೆವೆಲ್ ( ) ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಅಗತ್ಯ. ನೀವು ನಿಮ್ಮ ಮನೆಯಲ್ಲಿರುವ ಸಣ್ಣ ಧಾನ್ಯದ ಸಹಾಯದಿಂದ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಹೌದು, ಪ್ರತಿ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ( )ಡಯಾಬಿಟಿಸ್ ಸಮಸ್ಯೆ ಇರುವವರಿಗೆ ದಿವ್ಯೌಷಧವಾಗಿದೆ. ಇದನ್ನು ಸರಿಯಾದ ವಿಧಾನದಲ್ಲಿ ಬಳಸುವುದರಿಂದ ಶುಗರ್ ಲೆವೆಲ್ ಎಂದಿಗೂ ಹೆಚ್ಚಾಗುವುದಿಲ್ಲ. ಹಾಗಿದ್ದರೆ, ಡಯಾಬಿಟಿಸ್ ನಿಯಂತ್ರಿಸಲು ಮೆಂತ್ಯ ಕಾಳುಗಳನ್ನು ಹೇಗೆ ಬಳಸಬೇಕು ಎಂದು ತಿಳಿಯಿರಿ. ಇದನ್ನೂ ಓದಿ- ಮೆಂತ್ಯ ಕಾಳುಗಳಲ್ಲಿರುವ ಪೋಷಕಾಂಶಗಳು ( ):ಮೆಂತ್ಯ ಕಾಳುಗಳಲ್ಲಿ ಕೋಲೀನ್, ಇನೋಸಿಟಾಲ್, ಬಯೋಟಿನ್, ವಿಟಮಿನ್ ಎ, ಬಿ, ಡಿ, ಜೀವಸತ್ವಗಳು, ಫೈಬರ್, ಕಬ್ಬಿಣಾಂಶದ ಜೊತೆಗೆ ಬಲವಾದ ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತದೆ. ಹಾಗಾಗಿ, ನಿತ್ಯ ಒಂದೇ ಒಂದು ಚಮಚದಷ್ಟು ಮೆಂತ್ಯ ಕಾಳುಗಳನ್ನು ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅದರಲ್ಲೂಇರುವವರಿಗೆ ಇದು ಯಾವುದೇ ವರದಾನಕ್ಕಿಂತಲೂ ಕಡಿಮೆಯಿಲ್ಲ. ಇದನ್ನೂ ಓದಿ- ಶುಗರ್ ಕಂಟ್ರೋಲ್ ಮಾಡಲು ಮೆಂತ್ಯಕಾಳುಗಳನ್ನು ಹೇಗೆ ಬಳಸಬೇಕು( ):ರಾತ್ರಿಯಲ್ಲಿ ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯೆ ಕಾಳನ್ನು ನೆನೆಸಿಟ್ಟು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ಮೆಂತ್ಯ ಕಾಲುಗಳಲ್ಲಿ ಕರಗುವ ನಾರಿನ ಅಂಶ ಹೇರಳವಾಗಿದೆ. ನಿತ್ಯ ಈ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಾಗಿ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿಡಲು ತುಂಬಾ ಪ್ರಯೋಜನಕಾರಿ ಆಗಿದೆ. ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...