ಟೆಸ್ಟ್ ಮಾಡಿಸುವ ಅಗತ್ಯವೇ ಇಲ್ಲ, ನಿಮ್ಮ ಕೈ ಮತ್ತು ಕಾಲುಗಳಲ್ಲಿ ಹೀಗಾಗುತ್ತಿದ್ದರೆ ಬ್ಲಡ್ ಶುಗರ್ ಹೆಚ್ಚಾಗಿರುವುದು ಗ್ಯಾರಂಟಿ ! ಮಧುಮೇಹ ಬಾಧಿಸುವ ಆರಂಭಿಕ ಹಂತದಲ್ಲಿಯೇ ಕೈ ಮತ್ತು ಕಾಲುಗಳಲ್ಲಿ ಈ ರೀತಿ ಲಕ್ಷಣಗಳು ಕಾಣಿಸುತ್ತವೆ. ನಾವು ಅವುಗಳನ್ನು ಗುರುತಿಸಿಕೊಳ್ಳಬೇಕು ಅಷ್ಟೇ. ಬೆಂಗಳೂರು :ಮಧುಮೇಹ ಎನ್ನುವುದು ಹಾಗೆ ಬಂದು ಹೀಗೆ ವಾಸಿಯಾಗುವ ಕಾಯಿಲೆ ಅಲ್ಲ. ಅದು ದೀರ್ಘಕಾಲದ ಕಾಯಿಲೆ.ಒಮ್ಮೆ ವಕ್ಕರಿಸಿತು ಎಂದರೆ ಜೀವನ ಪೂರ್ತಿ ಕಾಡುತ್ತದೆ.ಈ ರೋಗದಲ್ಲಿ,ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗದೇ ಹೋದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗುತ್ತಾ ಹೋಗುತ್ತದೆ.ಮಧುಮೇಹ ಹೆಚ್ಚಾದ ಹಾಗೆ ಹೃದಯ,ಕಿಡ್ನಿ,ಕಣ್ಣು,ಶ್ವಾಸಕೋಶ ಸೇರಿದಂತೆ ದೇಹದ ಹಲವು ಅಂಗಗಳು ಹಾನಿಗೊಳಗಾಗುವ ಅಪಾಯ ಕೂಡಾ ಇರುತ್ತದೆ.ಮಧುಮೇಹ ಆರಂಭವಾದಾಗಲೇ ಕಡಿವಾಣ ಹಾಕಿದರೆ ಆಗಬಹುದಾದ ದೊಡ್ಡ ದೊಡ್ಡ ಸಮಸ್ಯೆಗಳನ್ನೂ ತಡೆಯಬಹುದು.ಹಾಗಾದರೆ ಮಧುಮೇಹದ ಲಕ್ಷಣಗಳನ್ನು ಗುರುತಿಸುವುದು ಹೇಗೆ? ಕೈ ಮತ್ತು ಕಾಲುಗಳಲ್ಲಿ ಕಾಣ ಸಿಗುವ ಮಧುಮೇಹದ ಲಕ್ಷಣವನ್ನು ನೀವು ಮೊದಲೇ ಗುರುತಿಸಿಕೊಂಡರೆ ಎದುರಾಗಬಹುದಾದ ಅಪಾಯವನ್ನು ತಪ್ಪಿಸಬಹುದು. ಕೈಯಲ್ಲಿ ಮಧುಮೇಹದ ಲಕ್ಷಣಗಳು :೧.ಕೈಗಳಬದಲಾವಣೆಯಾಗುತ್ತದೆ. ಕೈಗಳ ಚರ್ಮವು ಹಳದಿ, ಕೆಂಪು ಅಥವಾ ಕಂದು ಬಣ್ಣಕ್ಕೆ ತಿರುಗುತ್ತದೆ.೨. ಕೈಗಳ ಚರ್ಮವು ತುಂಬಾ ದಪ್ಪ ಮತ್ತು ಒರಟಾಗಲು ಶುರುವಾಗುತ್ತದೆ.೩.ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಕೈಗಳಲ್ಲಿ ಗುಳ್ಳೆಗಳು ಏಳುತ್ತವೆ.೪. ಯಾವುದೇ ಕಾರಣವಿಲ್ಲದೆ ಕೈಯಲ್ಲಿ ಸೋಂಕು ಸಂಭವಿಸಲು ಪ್ರಾರಂಭಿಸುತ್ತದೆ.೫. ಸೋಂಕಿನಿಂದಾಗಿ ಕೈಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ.೬. ವಿನಾ ಕಾರಣ ಕೈಗಳಲ್ಲಿ ಅತಿಯಾದ ಬೆವರು ಬರುತ್ತದೆ.೭. ಮಧುಮೇಹವಿದ್ದಾಗ ಕೈಯಲ್ಲಿ ನೋವು, ಊತ ಮತ್ತು ಉರಿ ಕಾಣಿಸಿಕೊಳ್ಳುತ್ತದೆ. ಇದನ್ನೂ ಓದಿ : ಕಾಲುಗಳಲ್ಲಿ ಮಧುಮೇಹದ ಲಕ್ಷಣಗಳು :೧.ಪಾದಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ.೨.ಮಧುಮೇಹ ರೋಗಿಗಳಿಗೆ ಪದೇ ಪದೇ ಪಾದಗಳಲ್ಲಿ ಜುಮ್ಮೆನಿಸುವ ಅನುಭವವಾಗುತ್ತದೆ. ಕಾಲು ಮರಗಟ್ಟಿದಂತೆ ಆಗುತ್ತದೆ.೩.ಕಾಲುಗಳ ಚರ್ಮದಲ್ಲಿ ಶುಷ್ಕತೆ ಮತ್ತು ತುರಿಕೆ ಕಾಣಿಸಿಕೊಳ್ಳಬಹುದು.೪. ಮಧುಮೇಹದಿಂದಾಗಿ, ಕಾಲುಗಳಲ್ಲಿ ತೀವ್ರವಾದ ನೋವು ಮತ್ತು ಸೆಳೆತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.೫.ಪಾದಗಳು ಅಥವಾ ಮಣಿ ಗಂಟಿನಲ್ಲಿ ಊತ ಕಾಣಿಸಿಕೊಳ್ಳಬಹುದು.೬. ಮಧುಮೇಹದಿಂದಾಗಿ,ಕಾಲುಗಳ ಚರ್ಮದಲ್ಲಿ ಬಿರುಕುಗಳು ಕಾಣಿಸಿಕೊಳ್ಳಬಹುದು. ನಿಮ್ಮ ಕೈ ಮತ್ತು ಕಾಲುಗಳಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ಮತ್ತೆ ಯಾವುದಕ್ಕೂ ಕಾಯುವ ಅಗತ್ಯವಿಲ್ಲ. ಕೂಡಲೇ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕು. ಯಾಕೆಂದರೆ ಸರಿಯಾದ ಸಮಯದಲ್ಲಿ ಮಧುಮೇಹದ ಲಕ್ಷಣಗಳನ್ನು ಗುರುತಿಸುವ ಮೂಲಕ,ಗಂಭೀರ ಪರಿಣಾಮಗಳಿಗೆ ತುತ್ತಾಗುವುದನ್ನು ತಪ್ಪಿಸಬಹುದು. ಇದನ್ನೂ ಓದಿ : (ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...