ಮಧುಮೇಹ ಇದ್ದವರಿಗೂ ಸಂಜೀವಿನಿ ಆಲುಗಡ್ಡೆ!ಸೊಂಟದ ಸುತ್ತಲಿನ ಬೊಜ್ಜು ಕರಗಿಸಲು ಕೂಡಾ ಸೂಪರ್ ಫುಡ್! ನೆನಪಿರಲಿ ಹೀಗೆ ಸೇವಿಸಿದರೆ ಮಾತ್ರ ಆಲುಗಡ್ಡೆಯನ್ನು ಮಧುಮೇಹ ಇರುವವರು ಸೇವಿಸಬಾರದು ಎಂದು ಹೇಳುತ್ತಾರೆ. ಆದ್ರೆ ಇದು ನಿಜ ಅಲ್ಲ, ಆಲುಗಡ್ಡೆಯನ್ನು ಸರಿಯಾದ ವಿಧಾನದಲ್ಲಿ ಸೇವಿಸಿದರೆ ಮಧುಮೇಹ ರೋಗಿಗಳ ಪಾಲಿಗೆ ಕೂಡಾ ಇದು ಸಂಜೀವಿನಿಯಾಗಿ ಕೆಲಸ ಮಾಡಬಲ್ಲದು. ಬೆಂಗಳೂರು :ಆಲೂಗಡ್ಡೆ ಬಹುತೇಕ ಎಲ್ಲಾ ಮನೆಗಳಲ್ಲಿ ಬಳಸುವ ತರಕಾರಿಯಾಗಿದೆ.ಈ ತರಕಾರಿಯು ವೆಜ್‌ನಿಂದ ನಾನ್ ವೆಜ್‌ವರೆಗೆ,ಬೆಳಗಿನ ಉಪಾಹಾರದಿಂದ ಹಿಡಿದು ಮಧ್ಯಾಹ್ನದ ಊಟ ಮತ್ತು ತಿಂಡಿಗಳವರೆಗೆ ಎಲ್ಲಾ ರೀತಿಯ ಭಕ್ಷ್ಯಗಳಿಗೆ ಹೊಂದಿಕೊಳ್ಳುತ್ತದೆ.ಆದರೆ ಮಧುಮೇಹ ರೋಗಿಗಳು ಆಲೂಗಡ್ಡೆ ತಿನ್ನಬಾರದು ಎನ್ನುವ ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ.ಆಲೂಗಡ್ಡೆ ತಿಂದರೆ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ. ಹಾಗಾಗಿ ಮಧುಮೇಹ ರೋಗಿಗಳು ಆಲೂಗಡ್ಡೆ ಸೇವಿಸುವ ಮೊದಲು ಬಹಳ ಯೋಚನೆ ಮಾಡುತ್ತಾರೆ. ಆದರೆ ನಿಜ ಸಂಗತಿ ಏನೆಂದರೆ,ಸರಿಯಾಗಿ ಬೇಯಿಸಿ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಮಧುಮೇಹ ರೋಗಿಗಳಿಗೆ ಸೂಪರ್‌ಫುಡ್ ಆಗಬಹುದು ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ. ಇದನ್ನೂ ಓದಿ : ತಜ್ಞರು ಏನು ಹೇಳುತ್ತಾರೆ :ಅಮೆರಿಕದ ಲಾಸ್ ವೇಗಾಸ್‌ನ ನೆವಾಡಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ನೇಡಾ ಅಖಾವನ್ ನೇತೃತ್ವದ ಅಧ್ಯಯನವು, ಆಲೂಗಡ್ಡೆಯನ್ನು ಕರಿದು ಅಥವಾ ನೀರಿನಲ್ಲಿ ಬೇಯಿಸಿ ತಿನ್ನುವ ಬದಲು ಸ್ವಲ್ಪ ಎಣ್ಣೆ ಹಾಕಿ ಹಾಗೆಯೇ ಹುರಿದು ತಿನ್ನುವುದುಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿದೆ. ಆಲೂಗಡ್ಡೆ ಮಧುಮೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? :ಅಧ್ಯಯನ ವರದಿಯ ಪ್ರಕಾರ,ಆಲೂಗೆಡ್ಡೆಯನ್ನು ದಿನನಿತ್ಯ ಸೇವಿಸುವವರ ಫಾಸ್ಟಿಂಗ್ ಬ್ಲಡ್ ಶುಗರ್ ಇಳಿಯುತ್ತದೆ. ಇದಲ್ಲದೆ, ಆಲೂಗಡ್ಡೆ ಹೃದಯದ ಆರೋಗ್ಯ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನೂ ಓದಿ : ತೂಕ ಕಡಿಮೆ ಮಾಡಲು ಸಹಕಾರಿ :ಆಲೂಗಡ್ಡೆಯಲ್ಲಿ ಪೊಟ್ಯಾಸಿಯಮ್ ಕಂಡುಬರುತ್ತದೆ.ಇದನ್ನು ತಿನ್ನುವುದರಿಂದ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಆಹಾರದಲ್ಲಿ ಆಲೂಗಡ್ಡೆಯನ್ನು ಸೇರಿಸಬಹುದು.ಆಲೂಗಡ್ಡೆಯನ್ನು ಹುರಿದು ಸರಿಯಾಗಿ ಬೇಯಿಸಿದರೆ ಅದು ಸೂಪರ್‌ಫುಡ್ ಎನ್ನುವುದರಲ್ಲಿ ಅನುಮಾನವೇ ಬೇಡ. ಇದು ಸೊಂಟದ ಸುತ್ತಲಿನ ಬೊಜ್ಜನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...