ಈ ಸಸ್ಯ ಎಲ್ಲಿ ಕಂಡರೂ ಬಿಡಬೇಡಿ ! ಇದರ ಎಲೆಯಲ್ಲಿದೆ ಅಮೃತದ ಗುಣ ! ಈ ರೋಗಗಳಿಗೆ ಇದೇ ಎಲೆ ಮದ್ದು ಕೆಲವೊಂದು ರೋಗಗಳಪರಿಹಾರಕ್ಕೆ ಪ್ರಕೃತಿಯಲ್ಲಿಯೇ ಚಿಕಿತ್ಸೆ ಸಿಗುತ್ತದೆ. ನಾವಿಲ್ಲಿ ಅಂತದ್ದೇ ಒಂದು ಸಂಜೀವಿನಿಯ ರೀತಿ ಕೆಲಸ ಮಾಡುವ ಸೊಪ್ಪಿನ ಬಗ್ಗೆ ಹೇಳುತ್ತಿದ್ದೇವೆ. ಬೆಂಗಳೂರು :ನುಗ್ಗೆಕಾಯಿ ಅಥವಾ ಡ್ರಮ್ ಸ್ಟಿಕ್ ಇದು ಮಾಂತ್ರಿಕ ಮರ ಎಂದರೆ ತಪ್ಪಲ್ಲ. ಭಾರತದಲ್ಲಿ ಶತಮಾನಗಳಿಂದಲೂ ಆಯುರ್ವೇದದಲ್ಲಿ ಇದನ್ನು ಬಳಸಲಾಗುತ್ತಿದೆ. ಇದರ ಹೂವು, ಬೀಜ, ಹಣ್ಣು ಮತ್ತು ಬೇರು ಎಲ್ಲವೂ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಮಾತ್ರವಲ್ಲ ಇವೆಲ್ಲದರಲ್ಲಿಯೂ ಔಷಧೀಯ ಗುಣಗಳು ಅಡಗಿವೆ. ವರದಿಯ ಪ್ರಕಾರ,(, ಮತ್ತು ), ಖನಿಜಗಳು (ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣ) ಮತ್ತು ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಂತೆ ಪೋಷಕಾಂಶಗಳ ಆಗರವಾಗಿದೆ. ಕ್ವೆರ್ಸೆಟಿನ್, ಕ್ಲೋರೊಜೆನಿಕ್ ಆಮ್ಲ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಉತ್ಕರ್ಷಣ ನಿರೋಧಕಗಳಿಂದ ಈ ಸೊಪ್ಪು ತುಂಬಿದೆ. ಇದನ್ನು ಸೇವಿಸುವುದರಿಂದ ನಮ್ಮ ಆಯುಷ್ಯ ವೃದ್ದಿಯಾಗುತ್ತದೆ. ಯಾಕೆಂದರೆ ಜೀವಿತಾವಧಿಯನ್ನು ಕಡಿಮೆ ಮಾಡುವ 6 ರೋಗಗಳನ್ನು ಈ ಸೊಪ್ಪು ದೂರ ಇಡುತ್ತದೆ. ಇದನ್ನೂ ಓದಿ : ಫ್ಯಾಟಿ ಲಿವರ್ :ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ವರದಿಯ ಪ್ರಕಾರ, ನುಗ್ಗೆ ಸೊಪ್ಪು ಸೇವಿಸುವ ಮೂಲಕ ಫ್ಯಾಟಿ ಲಿವರ್ ಸಮಸ್ಯೆಯನ್ನು ತಪ್ಪಿಸಬಹುದು. ಇದರಲ್ಲಿರುವ ಪೋಷಕಾಂಶಗಳು ಯಕೃತ್ತಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹಾನಿಯಾಗದಂತೆ ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ರಕ್ತದೊತ್ತಡ :ನುಗ್ಗೆ ಸೊಪ್ಪಿನಲ್ಲಿ ಕಂಡುಬರುವ ಕ್ವೆರ್ಸೆಟಿನ್ ಎಂಬ ಉತ್ಕರ್ಷಣ ನಿರೋಧಕವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದರ ಸೊಪ್ಪು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಇದು ಅಪಧಮನಿಗಳಲ್ಲಿ ರಕ್ತ ಪರಿಚಲನೆಯನ್ನು ಸುಲಭಗೊಳಿಸುತ್ತದೆ. ಇದನ್ನೂ ಓದಿ : ಮಧುಮೇಹ :ನಂತಹ ವಸ್ತುವನ್ನು ಹೊಂದಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಇದಲ್ಲದೆ,ಇದರಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಮಧುಮೇಹ ಬಾರದಂತೆ ತಡೆಯಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ :ನುಗ್ಗೆ ಸೊಪ್ಪು ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ. ಮಲಬದ್ಧತೆ :ನುಗ್ಗೆ ಸೊಪ್ಪಿನಲ್ಲಿ ಕಂಡುಬರುವ ನಾರಿನಂಶವು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯಿಂದ ಪರಿಹಾರವನ್ನು ಒದಗಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಬೊಜ್ಜು :ನಿಗ್ಗೆ ಸೊಪ್ಪಿನಲ್ಲಿ ಫೈಬರ್ ಮತ್ತು ಪ್ರೋಟೀನ್ ಇದ್ದು ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಇದಲ್ಲದೆ, ನುಗ್ಗೆ ಸೊಪ್ಪಿನಲ್ಲಿ ಕಂಡುಬರುವ ಕ್ಲೋರೊಫಿಲ್ ತೂಕವನ್ನು ಕಡಿಮೆ ಮಾದುವಲ್ಲಿ ಕೂಡಾ ಸಹಾಯ ಮಾಡುತ್ತದೆ. (ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...