ರಾತ್ರಿ ಉಳಿದ ಚಪಾತಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ.. ಅಥವಾ.. ಕೆಟ್ಟದ್ದಾ..? ತಿನ್ನುವ ಮುನ್ನ ತಿಳಿಯಿರಿ.. : ರಾತ್ರಿ ಚಪಾತಿ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ತೂಕ ಇಳಿಕೆಯ ಜೊತೆಗೆ ಜೀರ್ಣಾಂಗ ಕ್ರಿಯೆಯೂ ಸಹ ಆರೋಗ್ಯಕರವಾಗಿರುತ್ತದೆ. ಆದರೆ ರಾತ್ರಿ ಉಳಿದ ಚಪಾತಿಯನ್ನು ಕೆಲವರು ಬೆಳಗ್ಗೆ ತಿನ್ನುತ್ತಾರೆ... ಈ ರೀತಿ ಮಾಡಿದರೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾಗುತ್ತದೆಯೇ..? ಬನ್ನಿ ತಿಳಿಯೋಣ.. :ತೂಕ ನಷ್ಟ ಮಾಡಿಕೊಳ್ಳುವ ದೃಷ್ಟಿಯಿಂದ ಹಲವು ಜನರು ರಾತ್ರಿ ವೇಳೆ ಚಪಾತಿ ತಿನ್ನುತ್ತಿದ್ದಾರೆ. ರಾತ್ರಿ ಚಪಾತಿ ತಿನ್ನುವುದು ಒಳ್ಳೆಯದು.. ಇದು ತೂಕ ಇಳಿಕೆಯ ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನೂ ಆರೋಗ್ಯಕರವಾಗಿರಿಸುತ್ತದೆ.. ಆದರೆ ರಾತ್ರಿ ಉಳಿದ ಚಪಾತಿ ಬೆಳ್ಳಿಗ್ಗೆ ತಿನ್ನುವುದು ಒಳ್ಳೆಯದಾ..? ಇಲ್ಲಿದೆ.. ಉತ್ತರ.. ಕೆಲವು ಜನರು ರಾತ್ರಿ ಉಳಿದ ಚಪಾತಿಗಳನ್ನು ಬೆಳಗ್ಗೆ ತಿನ್ನುತ್ತಾರೆ. ಈ ಚಪಾತಿಗಳನ್ನು ಬೆಳಿಗ್ಗೆ ತಿಂದರೆ ಏನಾದರೂ ಆರೋಗ್ಯ ಸಮಸ್ಯೆ ಎದುರಾಗುತ್ತದೆಯೇ..? ಎಂದು ಹಲವರು ಅನುಮಾನ ಪಡುತ್ತಾರೆ.. ಆದರೆ ವಾಸ್ತವವಾಗಿ ರಾತ್ರಿ ಉಳಿದ ಚಪಾತಿಗಳನ್ನು ಬೆಳಗ್ಗೆ ತಿನ್ನುವುದು ಹೆಚ್ಚು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು. ಇದನ್ನೂ ಓದಿ: ಪ್ರೇಶ್‌ ಚಪಾತಿಗಿಂತಲೂ ಬೆಳಗ್ಗೆ ತಿನ್ನುವ ರಾತ್ರಿ ಉಳಿದ ಚಪಾತಿಯಲ್ಲಿ ವಿಟಮಿನ್, ಮಿನರಲ್ಸ್ ಮತ್ತು ಫೈಬರ್ ನಂತಹ ಪೋಷಕಾಂಶಗಳು ಹೆಚ್ಚು. ಇವುಗಳನ್ನು ತಿಂದರೆ ಯಾವುದೇ ತೊಂದರೆಯಿಲ್ಲ.. ಖುಷಿಯಾಗಿ ತಿನ್ನಬಹುದು ಎನ್ನುತ್ತಾರೆ ತಜ್ಞರು. ರಾತ್ರಿ ಚಪಾತಿಗಳು ತುಂಬಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿರುತ್ತವೆ. ಇವುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ನಿಯಂತ್ರಣಕ್ಕೆ ಬರುತ್ತದೆ. ಮೊಸರಿನ ಜೊತೆ ತಿಂದರೆ ತುಂಬಾ ಒಳ್ಳೆಯದು. ಇದಲ್ಲದೆ, ಜೀರ್ಣಾಂಗ ವ್ಯವಸ್ಥೆ ಮತ್ತು ಕರುಳಿನ ಆರೋಗ್ಯವೂ ಸುಧಾರಿಸುತ್ತದೆ. ಇದನ್ನೂ ಓದಿ: ಉಳಿದ ಚಪಾತಿಗಳನ್ನು ಬೆಳಗ್ಗೆ ತಿನ್ನುವುದರಿಂದ ದಿನವಿಡೀ ಚೈತನ್ಯದಿಂದ ಇರುತ್ತೀರಿ. ಇದಲ್ಲದೇ ಹೃದಯದ ಆರೋಗ್ಯವೂ ಸುಧಾರಿಸುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ತೂಕವನ್ನು ನಷ್ಟಕ್ಕೆ ಸಹಾಯ ಮಾಡುತ್ತದೆ. ಗ್ಯಾಸ್ ಸಮಸ್ಯೆ, ಹೊಟ್ಟೆ ಉಬ್ಬರ ಮತ್ತು ನೋವಿನ ಸಮಸ್ಯೆಯೂ ಕಡಿಮೆಯಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...