ರಾಜ್ಯದೆಲ್ಲೆಡೆ ಡೆಂಗ್ಯೂ ಹೆಚ್ಚಳ: ಶಿಕ್ಷಣ ಇಲಾಖೆಯಿಂದ ಶಾಲೆಗಳಿಗೆ 10 ಅಂಶಗಳ ಮಾರ್ಗಸೂಚಿ ಬಿಡುಗಡೆ : ಶಾಲೆಗಳಿಗೆ 10 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿರುವ ಶಿಕ್ಷಣ ಇಲಾಖೆ ಆಯುಕ್ತರು, ರಾಜ್ಯದ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಈ ಆದೇಶವನ್ನು ಪಾಲನೆ ಮಾಡುವಂತೆ ಸೂಚಿಸಿದ್ದಾರೆ. - :ರಾಜ್ಯಾದ್ಯಂತ ಡೆಂಗ್ಯೂ ಜ್ವರದ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ 22,000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈವರೆಗೂ ಡೆಂಘೀ ಜ್ವರಕ್ಕೆ 10 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಒಂದು ವರ್ಷದೊಳಗಿನ ಸುಮಾರು 400ಕ್ಕೂ ಹೆಚ್ಚು ಮಕ್ಕಳಲ್ಲಿ ಡೆಂಗ್ಯೂ ಜ್ವರ ಕಂಡು ಬಂದಿದೆ. ಶಾಲೆಗಳಿಗೆ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ( )ದಿನೇ ದಿನೇ ತಾರಕಕ್ಕೇರುತ್ತಿರುವ ಹಿನ್ನಲೆಯಲ್ಲಿ, ವರದಿಗಳ ಬೆನ್ನಲ್ಲೇ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಶಾಲೆಗಳಿಗೆ 10 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಶಾಲೆಗಳಿಗೆ 10 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿರುವ ಶಿಕ್ಷಣ ಇಲಾಖೆ ಆಯುಕ್ತರು, ರಾಜ್ಯದ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಈ ಆದೇಶವನ್ನು ಪಾಲನೆ ಮಾಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ- ಶಾಲೆಗಳಿಗೆ 10 ಅಂಶಗಳ ಮಾರ್ಗಸೂಚಿ ಈ ಕೆಳಕಂಡಂತಿದೆ:-1. ವಿದ್ಯಾರ್ಥಿಗಳು (ಫುಲ್ ಸ್ಲೀವ್ಡ್ ಟಾಪ್ಸ್/ಶರ್ಟ್ಸ್ & ಪ್ಯಾಂಟ್/ಲೆಗ್ಗಿಂಗ್ಸ್) ಧರಿಸುವುದು ಕಡ್ಡಾಯ. 2. ಶಾಲೆಗೆ ಬರುವ ಮುನ್ನ ಸೊಳ್ಳೆ ನಿವಾರಕ ( ) ಗಳನ್ನು ಕೈ-ಕಾಲುಗಳಿಗೆ ಹಚ್ಚಿಕೊಳ್ಳುವುದು. 3.( ) ಕ್ರಮಗಳ ಕುರಿತ ' & '' ಶಾಲೆಯ / ಶಾಲಾ ಕೊಠಡಿಯ ನೋಟಿಸ್‌ ಬೋರ್ಡ್‌ ಗಳಲ್ಲಿ ಪ್ರದರ್ಶಿಸುವುದು 4. ಶುದ್ಧ ನೀರಿನ ಸಂಗ್ರಹಣಾ ಪರಿಕರಗಳನ್ನು ಭದ್ರವಾಗಿ ಮುಚ್ಚುವುದು ಹಾಗೂ ಕಡ್ಡಾಯವಾಗಿ ವಾರಕ್ಕೊಮ್ಮೆ ಉಜ್ಜಿ ತೊಳೆದು ಸ್ವಚ್ಛಗೊಳಿಸಿ. ನಂತರ ನೀರನ್ನು ತುಂಬಿಸುವುದು. 5. ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಕಡ್ಡಾಯವಾಗಿ ಶೀಘ್ರ ವಿಲೇವಾರಿ ಮಾಡುವುದು. ಇದನ್ನೂ ಓದಿ- 6. ಶಾಲಾ ಆವರಣದ ಕಟ್ಟಡಗಳ ಟೆರಸ್‌ನ ಮೇಲೆ ಬೀಳುವ ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸುವುದು. 7. ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಮಾಹಿತಿಯನ್ನು ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಪ್ರಚುರಪಡಿಸುವುದು. 8. ಪೋಷಕರ ಸಭೆಗಳಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಅರಿವು ಮೂಡಿಸುವುದರೊಂದಿಗೆ ಪೋಷಕರ ವಾಟ್ಸಾಪ್ ಗ್ರೂಪ್ ಗಳಲ್ಲಿ ಮಾಹಿತಿ ಹಂಚಿಕೊಳ್ಳುವುದು. 9. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಎಸ್.ಡಿ.ಎಂ.ಸಿ ಸಹಕಾರದೊಂದಿಗೆ ಸೊಳ್ಳೆ ನಿರೋಧಕ ( ) ಗಳನ್ನು ವಿದ್ಯಾರ್ಥಿಗಳಿಗೆ ಆದ್ಯತೆಯ ಮೇಲೆ ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು. 10. ಶಾಲೆಯ ಅಕ್ಕ-ಪಕ್ಕದಲ್ಲಿರುವ ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ವಸ್ತುಗಳು ಸಂಗ್ರಹವಾಗದಂತೆ ಕ್ರಮವಹಿಸುವುದು. ಅಗತ್ಯವಿದ್ದಲ್ಲಿ ಪಂಚಾಯಿತಿ ವತಿಯಿಂದ ಅಗತ್ಯ ಸಹಕಾರ ಪಡೆಯುವುದು.ಇಷ್ಟು ಅಂಶಗಳನ್ನು ‌ಕಡ್ಡಾಯವಾಗಿ ಪಾಲಿಸುವಂತೆ ಶಿಕ್ಷಣ ‌ಇಲಾಖೆ ಎಲ್ಲಾ ಶಾಲೆಗಳಿಗೂ ಮಾರ್ಗಸೂಚಿ ಪ್ರಕಟಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...