ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿಯಬಹುದೇ? ಸೇವಿಸಿದರೆ ಏನಾದರೂ ಸಮಸ್ಯೆಗಳಾಗುತ್ತಾ? : ಸಿಹಿ ಹಣ್ಣುಗಳು ಮತ್ತು ಇತರ ವಸ್ತುಗಳಿಂದ ದೂರವಿರಬೇಕು ಎಂದಿರುವಾಗ ಮಧುಮೇಹ ರೋಗಿಗಳು ಎಳನೀರನ್ನುಕುಡಿಯಬಹುದೇ? ಈ ಪ್ರಶ್ನೆ ಸಾಮಾನ್ಯವಾಗಿ ಮಧುಮೇಹಿಗಳಲ್ಲಿ ಕಾಡುತ್ತವೆ. ಈ ಹಿನ್ನೆಲೆಯಲ್ಲಿ ಕೆಲ ವರದಿಯ ಪ್ರಕಾರ ಯಾವುದು ಸೂಕ್ತ ಎಂಬುದನ್ನು ತಿಳಿಯೋಣ. :ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ಮಧುಮೇಹ ರೋಗಿಗಳಿಗೆ ಸಿಹಿ ಪದಾರ್ಥಗಳನ್ನು ಸೇವಿಸಬಾರದು ಎಂದು ಸಲಹೆ ನೀಡಲಾಗುತ್ತದೆ. ಆರೋಗ್ಯ ತಜ್ಞರು ಮತ್ತು ವೈದ್ಯರು ಮಧುಮೇಹ ರೋಗಿಗಳಿಗೆ ಅತಿಯಾದ ಸಿಹಿ ಹಣ್ಣುಗಳು, ತಂಪು ಪಾನೀಯಗಳು ಮತ್ತು ಪ್ಯಾಕೆಟ್ ಜ್ಯೂಸ್‌ʼಗಳನ್ನು ಸೇವಿಸಬೇಡಿ ಎಂದು ಸಲಹೆ ನೀಡುತ್ತಾರೆ. ಏಕೆಂದರೆ ಈ ಎಲ್ಲಾ ವಸ್ತುಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಮತ್ತು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಇದನ್ನೂ ಓದಿ: ಸಿಹಿ ಹಣ್ಣುಗಳು ಮತ್ತು ಇತರ ವಸ್ತುಗಳಿಂದ ದೂರವಿರಬೇಕು ಎಂದಿರುವಾಗ ಮಧುಮೇಹ ರೋಗಿಗಳು ಎಳನೀರನ್ನುಕುಡಿಯಬಹುದೇ? ಈ ಪ್ರಶ್ನೆ ಸಾಮಾನ್ಯವಾಗಿ ಮಧುಮೇಹಿಗಳಲ್ಲಿ ಕಾಡುತ್ತವೆ. ಈ ಹಿನ್ನೆಲೆಯಲ್ಲಿ ಕೆಲ ವರದಿಯ ಪ್ರಕಾರ ಯಾವುದು ಸೂಕ್ತ ಎಂಬುದನ್ನು ತಿಳಿಯೋಣ. ವೆಬ್‌ಎಂಡಿ ವರದಿಯ ಪ್ರಕಾರ, ಪೊಟ್ಯಾಸಿಯಮ್, ಸೋಡಿಯಂ, ಕ್ಯಾಲ್ಸಿಯಂ, ಪ್ರೊಟೀನ್, ಎಲೆಕ್ಟ್ರೋಲೈಟ್ ಮತ್ತು ವಿಟಮಿನ್ ಸಿ ನಂತಹ ಅನೇಕ ಪ್ರಮುಖ ಪೋಷಕಾಂಶಗಳು ಎಳನೀರಿನಲ್ಲಿ ಹೇರಳವಾಗಿ ಕಂಡುಬರುತ್ತವೆ. ವಿಶೇಷತೆಯೆಂದರೆ ಅದರಲ್ಲಿ ಶೂನ್ಯ ಕ್ಯಾಲೋರಿ ಅಂಶ ಇರುತ್ತದೆ. ರುಚಿ ಸಿಹಿಯಾಗಿದ್ದರೂ ಸಹ ಸಕ್ಕರೆ ಅಂಶ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಹೀಗಾಗಿ ಮಧುಮೇಹ ರೋಗಿಗಳು ಆರಾಮವಾಗಿ ಎಳನೀರನ್ನು ಕುಡಿಯಬಹುದು. ಇನ್ನು ಆರೋಗ್ಯ ತಜ್ಞರ ಪ್ರಕಾರ, ಎಳನೀರನ್ನು ನಿಯಮಿತವಾಗಿ ಕುಡಿಯುವುದು ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ನೀರಿನಲ್ಲಿ ಫ್ರಕ್ಟೋಸ್ ಕಂಡುಬರುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ ಫ್ರಕ್ಟೋಸ್‌ ಎಂಬುದು ನೈಸರ್ಗಿಕ ಸಕ್ಕರೆಗೆ ಸಮವಾಗಿರುತ್ತದೆ. ಇದು ನಿರ್ದಿಷ್ಟ ಪ್ರಮಾಣದಲ್ಲಿ ದೇಹಕ್ಕೆ ಹೋದರೆ, ಮಧುಮೇಹ ರೋಗಿಗಳಿಗೆ ಯಾವುದೇ ಹಾನಿ ಉಂಟುಮಾಡುವುದಿಲ್ಲ. ಎಳನೀರಿನ ಗ್ಲೈಸೆಮಿಕ್ ಸೂಚ್ಯಂಕವು ಕೇವಲ 3 ಆಗಿದೆ. ಇದು ಮಧುಮೇಹ ರೋಗಿಗಳಿಗೆ ಸೂಕ್ತವಾಗಿದೆ. ದಿನಕ್ಕೆ ಎಷ್ಟು ಎಳನೀರು ಕುಡಿದರೆ ಒಳ್ಳೆಯದು?ಆರೋಗ್ಯ ತಜ್ಞರ ಪ್ರಕಾರ, ಮಧುಮೇಹ ರೋಗಿಗಳು ಪ್ರತಿದಿನ ಕೇವಲ 1 ಲೋಟ ಅಂದರೆ 200 ಮಿಲಿ ಎಳನೀರನ್ನು ಕುಡಿಯಬೇಕು. ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದರಲ್ಲೀ ಬೆಳಿಗ್ಗೆ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುವ ಜನರು ಎಳನೀರನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಇನ್ನು ಎಳನೀರನ್ನು ಅತಿಯಾಗಿ ಸೇವಿಸಿದರೆ, ಅದು ಹೈಪರ್‌ ಕೆಲೆಮಿಯಾದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಎಳನೀರನ್ನು ಕುಡಿಯುವ ಇತರ ಪ್ರಯೋಜನಗಳು: ಇದನ್ನೂ ಓದಿ: (ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...