ಗರ್ಲ್ಸ್‌ ಮದುವೆ ಪ್ಲ್ಯಾನ್‌ ಮಾಡಿದ್ದೀರಾ..? ಹಾಗಿದ್ರೆ ಗ್ಲೋಯಿಂಗ್‌ ಸ್ಕಿನ್‌ಗಾಗಿ ಇಂದಿನಿಂದಲೇ ಈ ಜ್ಯೂಸ್‌ ಕುಡಿಯಿರಿ.. : ನೀವು ಶೀಘ್ರದಲ್ಲೇ ಮದುವೆಯಾಗಲಿದ್ದೀರಾ.. ಹೊಳೆಯುವ ತ್ವಚೆ ಪಡೆಯಲು ರಾಸಾಯನಿಕ ಪ್ರಾಡಕ್ಟ್‌ಗಳ ಮೊರೆ ಹೋಗುವುದನ್ನ ಬಿಟ್ಟು ಬಿಡಿ.. ಇಂದಿನಿಂದಲೇ ಮನೆಯಲ್ಲಿ ಈ ಕೆಳಗೆ ನೀಡಿರುವ ಜ್ಯೂಸ್‌ ತಯಾರಿಸಿಕೊಂಡು ಕುಡಿಯಿರಿ.. ಆಮೇಲೆ ಅದರ ಪವಾಡ ನೋಡಿ... :ಡಿಟಾಕ್ಸ್ ಪಾನೀಯಗಳು ಪೌಷ್ಟಿಕಾಂಶದ ಉತ್ತಮ ಮೂಲ. ಇವುಗಳನ್ನು ನಿಮ್ಮ ದೈನಂದಿನ ದಿನಚರಿಗೆ, ವಿಶೇಷವಾಗಿ ಮದುವೆಯಾಗುವ ವಧು ತನ್ನ ಸೌಂದರ್ಯ ಇಮ್ಮಡಿಯಾಗಿ ಇವುಗಳನ್ನು ಸೇವಿಸಬಹುದು. ಡಿಟಾಕ್ಸ್ ಪಾನೀಯವು ವಿಶೇಷವಾಗಿ ವಧುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅಲ್ಲದೆ, ನೈಸರ್ಗಿಕ ಕಾಂತಿಯುತ ತ್ವಚೆ ನೀಡುತ್ತವೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ, ಪಾಲಿಫಿನಾಲ್ ಮತ್ತು ಸಿಟ್ರಿಕ್ ಆಸಿಡ್ ಸಮೃದ್ಧವಾಗಿದೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮತ್ತೊಂದೆಡೆ, ಶುಂಠಿ ಒಂದು ಬೇರುಕಾಂಡವಾಗಿದ್ದು, ಇದನ್ನು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಇದನ್ನೂ ಓದಿ: ಅಲ್ಲದೆ, ನಿಂಬೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚರ್ಮಕ್ಕೆ ಹೊಳಪು ನೀಡಲು ಸಹಾಯ ಮಾಡುತ್ತದೆ. ಶುಂಠಿ ಜೀರ್ಣಕ್ರಿಯೆಗೆ ಉತ್ತಮ. ನಿಂಬೆ ಶುಂಠಿಯಿಂದ ಮಾಡಿದ ಈ ಪಾನೀಯ ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು. ಹಾಗಿದ್ರೆ ಈ ಜ್ಯೂಸ್‌ ಮಾಡುವ ವಿಧಾನ ಹೇಗೆ..? ಬನ್ನಿ ತಿಳಿಯೋಣ.. ಅಗತ್ಯವಿರುವ ಸಾಮಗ್ರಿಗಳು: 1 ಲೀಟರ್ ನೀರು1 ನಿಂಬೆ1 ಸಣ್ಣ ತಾಜಾ ಶುಂಠಿ ತುಂಡು1 ಸೌತೆಕಾಯಿಪುದೀನ ಎಲೆಗಳುಒಂದು ಪಿಂಚ್ ಸಮುದ್ರ ಉಪ್ಪು ಮಾಡುವ ವಿಧಾನ:ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ 1 ಲೀಟರ್ ನೀರನ್ನು ಸುರಿಯಿರಿ. ಅದಕ್ಕೆ ಕತ್ತರಿಸಿದ ನಿಂಬೆ, ಶುಂಠಿ ಮತ್ತು ಸೌತೆಕಾಯಿಯನ್ನು ಸೇರಿಸಿ. ನಂತರ ತಾಜಾ ಪುದೀನ ಎಲೆಗಳನ್ನು ಹಾಕಿ.. ಒಂದು ಪಿಂಚ್ ಸಮುದ್ರದ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಕನಿಷ್ಠ 4 ಗಂಟೆಗಳ ಕಾಲ ಹಾಗೇ ಬಿಟ್ಟು, ನಂತರ ಅದನ್ನು ಲೋಟಕ್ಕೆ ಸುರಿದು ಕುಡಿಯಿರಿ. ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ಬರೆಯಲು ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...