ಈ ಆಹಾರಗಳನ್ನು ತಪ್ಪಿಯೂ ಫ್ರಿಜ್ ನಲ್ಲಿಡಬಾರದು !ನಿಮ್ಮ ಫ್ರಿಜ್ ನ್ನೊಮ್ಮೆ ಚೆಕ್ ಮಾಡಿಕೊಳ್ಳಿ :ಎಲ್ಲ ವಸ್ತುಗಳನ್ನು ಫ್ರಿಜ್ ನಲ್ಲಿಟ್ಟರೆ ಕೆಡುವುದಿಲ್ಲ ಎಂದಲ್ಲ. ಕೆಲವು ವಸ್ತುಗಳನ್ನು ಫ್ರಿಜ್ ನಲ್ಲಿ ಇಟ್ಟರೆನೇ ಅದು ಹಾಳಾಗಿ ಬಿಡುತ್ತದೆ. :ದೀರ್ಘಕಾಲದವರೆಗೆ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿಡಲು ಅಥವಾ ಅವು ಹಾಳಾಗುವುದನ್ನು ತಡೆಯಲು ಅವುಗಳನ್ನು ಫ್ರಿಜ್ ನಲ್ಲಿ ಇಡಲಾಗುತ್ತದೆ.ಒಂದು ಕಾಲದಲ್ಲಿ ಬೇಯಿಸಿದ ಮತ್ತು ಹಸಿ ತರಕಾರಿಗಳನ್ನು ಸಂಗ್ರಹಿಸಲು ಬಳಸುತ್ತಿದ್ದ ಫ್ರಿಜ್‌ಗಳಲ್ಲಿ ಈಗ ಸಿಕ್ಕ ಅಸಿಕ್ಕ್ ವಸ್ತುಗಳನ್ನು ತಳ್ಳಿ ಇಡುತ್ತೇವೆ.ಅದರಲ್ಲಿ ಮಸಾಲೆಗಳಿಂದ ಹಿಡಿದು ಒಣ ಹಣ್ಣುಗಳು, ಬೀಜಗಳು, ಹಣ್ಣುಗಳು ಹೀಗೆ ಯಾವುದು ಕೈಗೆ ಸಿಗುತ್ತದೆಯೋ ಎಲ್ಲವನ್ನೂ ಇಡಲಾಗುತ್ತದೆ.ಆದರೆ ಕೆಲವೊಂದು ವಸ್ತುಗಳು ಫ್ರಿಜ್ ನಲ್ಲಿ ಇಟ್ಟರೆಯೇ ಹಾಳಾಗಿ ಬಿಡುತ್ತದೆ. ಫ್ರಿಜ್ ನಲ್ಲಿ ಇಡಬಾರದ ವಸ್ತುಗಳು :ಆಲೂಗಡ್ಡೆ :ಹೆಚ್ಚಿನ ಭಾರತೀಯ ಅಡುಗೆಮನೆಗಳಲ್ಲಿಯಾವಾಗಲೂ ಹೇರಳವಾಗಿ ಬಳಸಲಾಗುತ್ತದೆ.ಕೆಲವರು ಆಲುಗಡ್ಡೆಯನ್ನು ಕೂಡಾ ಫ್ರಿಜ್ ನಲ್ಲಿ ಇಡುತ್ತಾರೆ.ಆದರೆ ಆಲುಗಡ್ಡೆಯನ್ನು ಫ್ರಿಜ್ ನಲ್ಲಿ ಇಟ್ಟರೆ ಆಲೂಗೆಡ್ಡೆ ಪಿಷ್ಟವು ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತದೆ.ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದನ್ನೂ ಓದಿ : ಬೆಳ್ಳುಳ್ಳಿ :ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದು ಮೊಳಕೆಯೊಡೆಯುತ್ತದೆ. ಹೀಗಾದಾಗ ಅದರ ರುಚಿ ಬದಲಾಗುತ್ತದೆ. ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ರೆಫ್ರಿಜಿರೇಟರ್ ನಲ್ಲಿಟ್ಟರೆ ಅದರಲ್ಲಿರುವ ಔಷಧೀಯ ಗುಣಗಳು ಕಳೆದು ಹೋಗುತ್ತವೆ.ಆದ್ದರಿಂದ ಬೆಳ್ಳುಳ್ಳಿಯನ್ನು ಪ್ಲಾಸ್ಟಿಕ್ ಚೀಲಗಳ ಬದಲಿಗೆ ಕಾಗದ ಅಥವಾ ಬಟ್ಟೆಯ ಚೀಲಗಳಲ್ಲಿ ಇರಿಸಿ. ಇಡೀ ಮಸಾಲೆಗಳು :ಇಡೀ ಮಸಾಲೆಗಳನ್ನು ಸಹ ರೆಫ್ರಿಜರೇಟರ್ ನಲ್ಲಿ ಇಡುವಂತಿಲ್ಲ. ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವುಗಳ ರುಚಿ, ಪರಿಮಳ ಮತ್ತು ಗುಣಗಳ ಮೇಲೆ ಪರಿಣಾಮ ಬೀರುತ್ತದೆ.ರೆಫ್ರಿಜರೇಟರ್ ನಿಂದ ತೇವಾಂಶವನ್ನು ಹೀರಿಕೊಳ್ಳುತ್ತವೆ. ಇದರಿಂದಾಗಿ ಅವುಗಳ ನೈಸರ್ಗಿಕ ರುಚಿ ಹಾಳಾಗುತ್ತದೆ. ಇದನ್ನೂ ಓದಿ : ಒಣ ಹಣ್ಣುಗಳು :ಒಣ ಹಣ್ಣುಗಳಾದ ಗೋಡಂಬಿ, ಒಣದ್ರಾಕ್ಷಿ, ಬಾದಾಮಿ, ವಾಲ್‌ನಟ್ಸ್ ಗಳನ್ನು ರೆಫ್ರಿಜರೇಟರ್‌ನಲ್ಲಿ ಹೆಚ್ಚಿನ ಮನೆಗಳಲ್ಲಿ ಸಂಗ್ರಹಿಸಿಡಲಾಗುತ್ತದೆ.ಆದರೆ ಫ್ರಿಜ್‌ನ ಶೀತ ಉಷ್ಣತೆಯು ಅವುಗಳ ನೈಸರ್ಗಿಕ ಸಕ್ಕರೆ ಮತ್ತು ರುಚಿಯ ಮೇಲೆ ಪರಿಣಾಮ ಬೀರುತ್ತದೆ.ಇವುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದರ ತೇವಾಂಶವು ಹೆಚ್ಚಾಗುತ್ತದೆ. ಶಿಲೀಂಧ್ರದ ಅಪಾಯವನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲ, ಅವುಗಳ ನೈಸರ್ಗಿಕ ತೈಲವೂ ಕಡಿಮೆಯಾಗುತ್ತದೆ. ಕೇಸರಿ :ರೆಫ್ರಿಜರೇಟರ್ ನಲ್ಲಿ ಹೆಚ್ಚಿನ ಆರ್ದ್ರತೆ ಇರುತ್ತದೆ. ಇದು ಕೇಸರಿ ಎಳೆಗಳನ್ನು ಮೃದು ಮತ್ತು ಜಿಗುಟಾಗುವಂತೆ ಮಾಡಬಹುದು. ಕೆಲವೊಮ್ಮೆ ಕೇಸರಿ ಒಣಗಿಯೂ ಹೋಗಬಹುದು. ಈ ಎರಡೂ ಸಂದರ್ಭಗಳಲ್ಲಿ ಕೇಸರಿಯ ಸ್ವಾಭಾವಿಕ ರುಚಿ ಮತ್ತು ಪರಿಮಳ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ರೆಫ್ರಿಜರೇಟರ್ ಬೆಳಕಿನಿಂದ ಕೇಸರಿಯ ಬಣ್ಣವೂ ಮಂಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...