: ನಿಮ್ಮ ಈ ಅಭ್ಯಾಸಗಳೇ ಅಧಿಕ ರಕ್ತದೊತ್ತಡ ಸಮಸ್ಯೆಗೆ ಪ್ರಮುಖ ಕಾರಣಗಳು! : ಈ ವೇಗದ ಜೀವನಶೈಲಿಯಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಧಿಕ ರಕ್ತದೊತ್ತಡ ಸಮಸ್ಯೆ ಹಲವರನ್ನು ಬಾಧಿಸುತ್ತಿದೆ. ಇದಕ್ಕೆ ನಿಮ್ಮ ಜೀವನ ಶೈಲಿಯೂ ಪ್ರಮುಖ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ? :ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಿನ ಜನರನ್ನು ಬಾಧಿಸುತ್ತಿರುವ ಸಾಮಾನ್ಯ ಸಮಸ್ಯೆ. ರಕ್ತದೊತ್ತಡ ಹೆಚ್ಚಾಗಲು ನಾನಾ ಕಾರಣಗಳಿವೆ. ಆದರೆ, ಈ ಬಗ್ಗೆ ನಿಗಾವಹಿಸದಿದ್ದರೆ ಇದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ವಾಸ್ತವವಾಗಿ, ರಕ್ತದೊತ್ತಡ ( ) ಸಮಸ್ಯೆಗೆ ವೇಗದ ಜೀವನಶೈಲಿ ಒಂದು ಕಾರಣವಾದರೆ, ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ಮತ್ತೊಂದು ಪ್ರಮುಖ ಕಾರಣವಾಗಿದೆ. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ವಯಸ್ಸಿನ ಯುವಕ-ಯುವತಿಯರಲ್ಲೂ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೈ ಬಿಪಿ ಲಕ್ಷಣಗಳು ( ):( ) ಗುರುತಿಸಲು ಯಾವುದೇ ನಿರ್ದಿಷ್ಟ ಲಕ್ಷಣಗಳು ಇರುವುದಿಲ್ಲವಾದರೂ, ತಲೆನೋವು, ಅತಿಯಾದ ಉದ್ವೇಗ, ಎದೆನೋವು ಅಥವಾ ಎದೆ ಭಾರ, ಉಸಿರಾಟದ ತೊಂದರೆ, ಹೆಚ್ಚು ಗಾಬರಿಗೊಳಗಾಗುವುದು, ಕೈ-ಕಾಲುಗಳಲ್ಲಿ ದೌರ್ಬಲ್ಯ ಇವೆಲ್ಲವೂ ಕೂಡ ಅದರ ಪ್ರಾರಂಭಿಕ ಲಕ್ಷಣಗಳು ಎಂತಲೇ ಹೇಳಲಾಗುತ್ತದೆ. ಇದನ್ನೂ ಓದಿ- ಹೈ ಬಿಪಿ ಸಮಸ್ಯೆಗೆ ಕಾರಣಗಳು ( ):ಮೊದಲೇ ಉಲ್ಲೇಖಿಸಿದಂತೆಗೆ ( ) ಬದಲಾದ ವೇಗದ ಜೀವನಶೈಲಿ ಪ್ರಮುಖ ಕಾರಣವಾಗಿದೆ. ಇದಲ್ಲದೆ, ಅನುವಂಶೀಯವಾಗಿಯೂ ಕೂಡ ಈ ಸಮಸ್ಯೆ ಉಂಟಾಗಬಹುದು. ಇದರ ಹೊರತಾಗಿ, ನಮ್ಮ ಕೆಲವು ಕೆಟ್ಟ ಅಭ್ಯಾಸಗಳಿಂದಲೂ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗುತ್ತದೆ. ಅಂತಹ ಕೆಲ ಕಾರಣಗಳೆಂದರೆ... * ತೂಕ ಹೆಚ್ಚಳ:ಬೊಜ್ಜು ಅಥವಾ ಅತಿಯಾದ ತೂಕ ಹೆಚ್ಚಳವಿರುವ ಜನರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಗಮನಾರ್ಹವಾಗಿ ಹೆಚ್ಚು ಎಂದು ಹಲವು ಸಂಶೋಧನೆಗಳಲ್ಲಿ ತಿಳಿದುಬಂದಿದೆ. * ದೈಹಿಕ ಚಟುವಟಿಕೆ ಇಲ್ಲದಿರುವುದು:ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ವಾಕ್, ವ್ಯಾಯಾಮ, ಯೋಗಾಭ್ಯಾಸಗಳಂತಹ ಯಾವುದೇ ದೈಹಿಕ ಚಟುವಟಿಕೆಗಳು ಇಲ್ಲದಿರುವುದು ಕೊಡೋಯ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸಬಹುದು. * ಅತಿಯಾದ ಉಪ್ಪು ಬಳಕೆ:ನಾವು ನಿತ್ಯ ಸೇವಿಸುವ ಆಹಾರದಲ್ಲಿ ಅತಿಯಾದ ಉಪ್ಪು ಬಳಕೆಯಿಂದಲೂ ಹೈಬಿಪಿ ಸಮಸ್ಯೆ ಉಲ್ಬಣಿಸಬಹುದು. ಇದನ್ನೂ ಓದಿ- * ಕಾಫಿ/ಟೀ ಸೇವನೆ:ನಿತ್ಯ ಒಂದೆರಡು ಕಪ್ ಗಿಂತ ಹೆಚ್ಚಿನ ಕಾಫಿ ಅಥವಾ ಟೀ ಸವಿಯುವ ಚಟ ಇರುವವರಲ್ಲಿಯೂ ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳಬಹುದು. * ಧೂಮಪಾನ, ಮದ್ಯಪಾನ:ಕೆಲವು ಸಂಶೋಧನೆಗಳ ಪ್ರಕಾರ, ಧೂಮಪಾನ, ಮದ್ಯಪಾನ ಮಾಡುವವರಲ್ಲಿಯೂ ಸಹ ಅಧಿಕ ರಕ್ತದೊತ್ತಡ ಸಮಸ್ಯೆಯ ಅಪಾಯ ಹೆಚ್ಚು ಎಂದು ತಿಳಿದುಬಂದಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...