ಲಿವರ್ ಕಾಯಿಲೆಯನ್ನು ಗುಣಪಡಿಸುತ್ತದೆ ಕಾಫಿ ! ಆದರೆ ದಿನಕ್ಕೆ ಇಷ್ಟೇ ಲೋಟ ಕುಡಿದರೆ ಮಾತ್ರ ! ನಾವು ನಿತ್ಯ ಸೇವಿಸುವ ಕಾಫಿ ನಮ್ಮ ಲಿವರ್ ಆರೋಗ್ಯವನ್ನು ಬಹಳಷ್ಟು ಮಟ್ಟಿಗೆ ಉತ್ತಮವಾಗಿ ಇಡಬಲ್ಲದು. ಲಿವರ್ ಆರೋಗ್ಯ ಕಾಪಾಡಲು ಕಾಫಿಯನ್ನು ಹೀಗೆ ಸೇವಿಸಿದರೆ ಒಳ್ಳೆಯದು. ಬೆಂಗಳೂರು :ನಮ್ಮಲ್ಲಿ ಬಹಳಷ್ಟು ಮಂದಿಗೆ ಬೆಳಗ್ಗೆ ಒಂದು ಲೋಟ ಕಾಫಿ ಅಥವಾ ಚಹಾ ಇಲ್ಲದೆ ದಿನ ಆರಂಭವಾಗುವುದೇ ಇಲ್ಲ.ಅದರಲ್ಲಿಯೂ ಚಹಾಗಿಂತ ಕಾಫಿ ಕುಡಿಯುವವರ ಸಂಖ್ಯೆಯೇ ಹೆಚ್ಚು.ಕಾಫಿ ಮತ್ತು ಚಹಾ ಎರಡೂ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಹೊಂದಿವೆ.ನಾವಿಲ್ಲಿ ಕಾಫಿಯ ಪ್ರಮುಖ ಪ್ರಯೋಜನವನ್ನು ಹೇಳಲಿದ್ದೇವೆ. ಕಾಫಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಆದರೆ ಇದನ್ನು ಮಿತವಾಗಿ ಸೇವಿಸಬೇಕು.ನಮ್ಮ ಯಕೃತ್ತು ಆರೋಗ್ಯಕರವಾಗಿರುತ್ತದೆ ಎನ್ನುವ ಅಂಶ ಅನೇಕ ಅಧ್ಯಯನಗಳಿಂದ ಹೊರ ಬಂದಿದೆ. ಬೆಳಿಗ್ಗೆ ಕಾಫಿ ಕುಡಿಯುವುದರಿಂದ ಲಿವರ್ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.ಇದಲ್ಲದೆ, ಕಾಫಿ ಕುಡಿಯುವುದರಿಂದ ಅನೇಕ ಯಕೃತ್ತಿನ ಕಾಯಿಲೆಗಳು ಗುಣವಾಗುತ್ತವೆ ಎನ್ನುವುದನ್ನು ಕೂಡಾ ಅಧ್ಯಯನಗಳು ಎತ್ತಿ ತೋರಿಸಿವೆ. ಇದನ್ನೂ ಓದಿ : ಬ್ಲಾಕ್ ಕಾಫಿ :ಸರಿಯಾದ ಪ್ರಮಾಣದಲ್ಲಿ ಬ್ಲಾಕ್ ಕಾಫಿ ಅಂದರೆ ಹಾಲು ಬೆರೆಸದ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ವಿಶೇಷವಾಗಿ ಯಕೃತ್ತಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಬ್ಲಾಕ್ ಕಾಫಿ ಸಹಾಯ ಮಾಡುತ್ತದೆ.ಕಾಫಿ ಕುಡಿಯುವುದರಿಂದ ಫ್ಯಾಟಿ ಲಿವರ್ ಮತ್ತು ಲಿವರ್ ಸಿರೋಸಿಸ್ ನಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.ಆದ್ದರಿಂದ ಲಿವರ್ ಆರೋಗ್ಯವಾಗಿರಲು ಕಾಫಿಯನ್ನು ನಿಮ್ಮ ದೈನಂದಿನ ಆಹಾರದ ಭಾಗವನ್ನಾಗಿ ಮಾಡಿಕೊಳ್ಳುವುದು ಒಳ್ಳೆಯದು. ಕಾಫಿ ಕುಡಿಯುವುದರಿಂದ ಫ್ಯಾಟಿ ಲಿವರ್ ಕಾಯಿಲೆ ನಿವಾರಣೆಯಾಗುತ್ತದೆ ಎನ್ನುವುದು ಸಾಬೀತಾಗಿದೆ.ಕಾಫಿ ಕುಡಿಯುವುದರಿಂದ ಹೃದ್ರೋಗಗಳು, ನರರೋಗಗಳು ಮತ್ತು ಮಧುಮೇಹದಂತಹ ಸಮಸ್ಯೆಗಳ ಅಪಾಯ ಕೂಡಾ ಕಡಿಮೆಯಾಗುತ್ತವೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನಾವು ಸೇವಿಸುವ ಕಾಫಿಯ ಪ್ರಮಾಣ.ಲಿವರ್ ಆರೋಗ್ಯ ಕಾಪಾಡಲು ದಿನಕ್ಕೆ ಎಷ್ಟು ಕಾಫಿ ಕುಡಿಯುತ್ತೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಇದನ್ನೂ ಓದಿ : ದಿನಕ್ಕೆ ಎಷ್ಟು ಕಾಫಿ ಕುಡಿಯಬಹುದು? :ಯಕೃತ್ತಿಗೆ ತುಂಬಾ ಪ್ರಯೋಜನಕಾರಿ. ಇದನ್ನು ದಿನಕ್ಕೆ 2 ರಿಂದ 3 ಕಪ್ ಕುಡಿಯಬಹುದು.ಆದರೆ ಕಾಫಿ ಕುಡಿಯುವವರ ಆರೋಗ್ಯ ಮತ್ತು ವಿವಿಧ ದೈಹಿಕ ಸ್ಥಿತಿಗಳನ್ನು ಆಧರಿಸಿ ಈ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗಬಹುದು. ಯಕೃತ್ತಿಗೆ ಕಾಫಿ ಹೇಗೆ ಒಳ್ಳೆಯದು? :- ಕಾಫಿ ಸೇವನೆಯು ಯಕೃತ್ತನ್ನು ಆರೋಗ್ಯಕರವಾಗಿಡುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.- ನೀವು ದಿನಕ್ಕೆ 2 ಕಪ್ ಕಾಫಿ ಕುಡಿಯುತ್ತಿದ್ದರೆ,ಯಕೃತ್ತಿನ ಅನೇಕ ಕಾಯಿಲೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.- ಬ್ಲಾಕ್ ಕಾಫಿ ಲಿವರ್ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.- ಬ್ಲಾಕ್ ಕಾಫಿ ಕುಡಿಯುವುದರಿಂದ ದೀರ್ಘಕಾಲದ ಯಕೃತ್ತಿನ ಕಾಯಿಲೆಯ ಅಪಾಯವನ್ನು ಶೇಕಡಾ 71 ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಕಾಫಿ ಕುಡಿಯುವ ಇತರ ಪ್ರಯೋಜನಗಳೇನು? :- ಕಾಫಿ ಕುಡಿದರೆ ಟೆನ್ಶನ್ ನಿಂದಾಗುವ ತಲೆನೋವಿನಿಂದ ಪರಿಹಾರ ಸಿಗುತ್ತದೆ.- ಕಾಫಿ ನಮ್ಮ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.- ಕಾಫಿ ಕುಡಿಯುವುದರಿಂದ ಖಿನ್ನತೆಯ ಅಪಾಯವನ್ನು ಕಡಿಮೆ ಮಾಡಬಹುದು.- ಕಾಫಿ ನಮ್ಮ ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ.- ಮಧುಮೇಹಿಗಳಾಗಿದ್ದರೆ ಕಾಫಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.- ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಕಾಫಿ ಸಹಾಯ ಮಾಡುತ್ತದೆ.- ಆದರೆ, ಸಕ್ಕರೆ ಹಾಕದೆಯೇ ಕುಡಿಯಬೇಕು. ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಗೆ ಮೀಡಿಯಾ ಜವಾಬ್ದಾರರಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...