ದೇಶದ ಅತ್ಯಂತ ಶ್ರೀಮಂತ ದಂಪತಿ ಮುಖೇಶ್ ಮತ್ತು ನೀತಾ ಅಂಬಾನಿ ಬಳಸುವುದು ಮಾತ್ರ ಈ ಫೋನ್ !ಇದೇ ಆಯ್ಕೆ ಯಾಕೆ ಗೊತ್ತಾ ? ವಿಶ್ವದ ಶ್ರೀಮಂತ್ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಬಳಸುವ ಫೋನ್ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ.ಅಂದ ಹಾಗೆ ಈ ದಂಪತಿ ಬಳಸುವುದು ಇದೇ ಫೋನ್ . ಬೆಂಗಳೂರು :ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮತ್ತು ದೇಶ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮತ್ತವರ ಕುಟುಂಬ ಸದಾ ಸುದ್ದಿಯಲ್ಲಿರುತ್ತದೆ. ಅವರು ಏನೂ ಮಾಡಿದರೂ ಸುದ್ದಿಯಾಗುತ್ತದೆ.ಇತ್ತೀಚಿಗಷ್ಟೇ ಪುತ್ರನ ಮದುವೆಯ ಕಾರಣದಿಂದ ಸುದ್ದಿಯಾಗಿದ್ದ ಕುಟುಂಬ ಈಗ ಅವರು ಬಳಸುವ ಫೋನ್ ವಿಚಾರವಾಗಿ ಚರ್ಚೆಯಲ್ಲಿದ್ದಾರೆ.ಅಂದ ಹಾಗೆ ಅಂಬಾನಿ ಮನೆ, ಅವರ ಕಾರುಗಳು, ಅವರ ಮನೆಯ ನೌಕರರು ಹೀಗೆ ಪ್ರತಿ ವಿಚಾರವನ್ನು ತಿಳಿದುಕೊಳ್ಳುವಲ್ಲಿ ಜನರು ಹೆಚ್ಚಿನ ಆಸಕ್ತಿ ತೋರುತ್ತಾರೆ. ಇದೀಗ ಅಂಬಾನಿ ದಂಪತಿ ಬಳಸುವ ಫೋನ್ ಯಾವುದು ಎನ್ನುವ ಕುತೂಹಲ ಜನರದ್ದು. ಮುಖೇಶ್ ಅಂಬಾನಿ ಕೈಯಲ್ಲಿ ಈ ಫೋನ್ :ಅವರು ತಮ್ಮ ಪತ್ನಿ ನೀತಾ ಅಂಬಾನಿಯೊಂದಿಗೆ ಭವ್ಯವಾದ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.ಇಲ್ಲಿ ಜನರ ಜನರ ಕಣ್ಣಿಗೆ ಬಿದ್ದದ್ದು ಮುಖೇಶ್ ಅಂಬಾನಿ ಕೈಯಲ್ಲಿ ಹಿಡಿದಿದ್ದ ಫೋನ್. ಹಾಗಿದ್ದರೆ ಮುಖೇಶ್ ಅಂಬಾನಿ ಕೈಯ್ಯಲ್ಲಿ ಇದ್ದ ಫೋನ್ ಯಾವುದು ಎನ್ನುವುದು ಪ್ರಶ್ನೆ. ಇದನ್ನೂ ಓದಿ : ಮುಖೇಶ್ ಅಂಬಾನಿ ಕೈಯಲ್ಲಿ ಆಪಲ್‌ನ ಇತ್ತೀಚಿನ ಐಫೋನ್ ಕಾಣಿಸಿಕೊಂಡಿದೆ. ಇದು ಸಾಮಾನ್ಯ ಫೋನ್ ಅಲ್ಲ, ಹೊಸ ಮತ್ತು ಅತ್ಯಂತ ದುಬಾರಿ 15 . ಇದು ಐಫೋನ್ 15 ಸರಣಿಯ ಅತ್ಯಂತ ದುಬಾರಿ ಮಾದರಿಯಾಗಿದೆ.ಈ ಫೋನ್ ನ 256 ಮಾದರಿಯ ಬೆಲೆ 1 ಲಕ್ಷದ 50 ಸಾವಿರ ಮತ್ತು 1 ಸ್ಟೋರೇಜ್ ರೂಪಾಂತರದ ಬೆಲೆ ಸುಮಾರು 2 ಲಕ್ಷ ರೂ. ನೀತಾ ಅಂಬಾನಿ ಬಳಿ ಯಾವ ಫೋನ್ ಇದೆ? :ಇಂಟರೆಸ್ಟಿಂಗ್ ವಿಷಯ ಏನೆಂದರೆ ಮುಕೇಶ್ ಅಂಬಾನಿ ಮಾತ್ರವಲ್ಲ ಅವರ ಪತ್ನಿ ನೀತಾ ಅಂಬಾನಿ ಬಳಿ ಕೂಡಾ ಇದೇ ಫೋನ್ ಇದೆ.ದೇಶದ ಇತರ ಅನೇಕ ಪ್ರಸಿದ್ಧ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ಸಹ ಈ ಫೋನ್ ಅನ್ನು ಬಳಸುತ್ತಾರೆ.ಫೋನ್ ಉತ್ತಮ ಕ್ಯಾಮೆರಾಗಳನ್ನು ಹೊಂದಿದೆ.ಇದಲ್ಲದೆ, ವಿನ್ಯಾಸದಿಂದ ವೈಶಿಷ್ಟ್ಯಗಳವರೆಗೆ,ಈ ಫೋನ್‌ನಲ್ಲಿ ಎಲ್ಲವೂ ಅತ್ಯಬ್ಧುತವಾಗಿದೆ. ಇದರ ಲುಕ್ ಕೂಡಾ ಸಾಕಷ್ಟು ಪ್ರೀಮಿಯಂ ಆಗಿದ್ದು, ಕಾರ್ಯಕ್ಷಮತೆ ಕೂಡ ಅದ್ಭುತವಾಗಿದೆ. ಪ್ರತಿಯೊಂದು ವಿಷಯದಲ್ಲೂ ಈ ಫೋನ್ ಇತರ ಫೋನ್‌ಗಳಿಗಿಂತ ಅಡ್ವಾನ್ಸ್ ಆಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...