ಖಾತೆದಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಸರ್ಕಾರ !ಗಭೀರವಾಗಿ ಪರಿಗಣಿಸುವಂತೆ ಸಲಹೆ ಖಾತೆದಾರರಿಗೆ ಸರ್ಕಾರ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ.ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸುವಂತೆಯೂ ಸೂಚನೆ ನೀಡಿದೆ. ಬೆಂಗಳೂರು :ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಕೋಟಿಗಟ್ಟಲೆ ಖಾತೆದಾರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ.ಈ ಸಂದೇಶದಿಂದ ದೂರವಿರುವಂತೆ ಎಸ್‌ಬಿಐ ಖಾತೆದಾರರಿಗೆ ಸರ್ಕಾರ ಸಲಹೆ ನೀಡಿದೆ.ಎಸ್‌ಬಿಐ ಖಾತೆದಾರರು ವಂಚನೆಯ ಬೆದರಿಕೆಯನ್ನು ಎದುರಿಸುತ್ತಿದ್ದಾರೆ.ಜನರ ಖಾತೆಗೆ ಕನ್ನ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ನಕಲಿ ಸಂದೇಶಗಳ ಮೂಲಕ ಖಾತೆಯಿಂದ ಹಣ ಡ್ರಾ ಆಗುತ್ತಿದೆ.ಈ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ. ಅಪಾಯದಲ್ಲಿದ್ದಾರೆ ಖಾತೆದಾರರು :ದೇಶದ ಅತಿದೊಡ್ಡಎಸ್‌ಬಿಐನ ಕೋಟಿಗಟ್ಟಲೆ ಖಾತೆದಾರರು ವಂಚನೆಯ ಭೀತಿ ಎದುರಿಸುತ್ತಿದ್ದಾರೆ.ಈ ಕುರಿತು ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸಿದೆ.ಎಸ್‌ಬಿಐ ಹೆಸರಿನಲ್ಲಿ ಬರುವ ನಕಲಿ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸರ್ಕಾರ ಹೊರಡಿಸಿರುವ ಸಲಹೆಯಲ್ಲಿ ಹೇಳಲಾಗಿದೆ.ಕಳೆದ ಕೆಲವು ದಿನಗಳಿಂದ, ಖಾತೆದಾರರನ್ನು ರಿವಾರ್ಡ್ ಪಾಯಿಂಟ್‌ಗಳ ಹೆಸರಿನಲ್ಲಿ ವಂಚಿಸಲಾಗುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಂಚನೆ ಸಂದೇಶದ ಮೂಲಕ ಇಮೇಲ್ ಮತ್ತು ಸಂದೇಶಗಳ ಮೂಲಕ ರಿವಾರ್ಡ್ ಪಾಯಿಂಟ್‌ಗಳ ಆಮಿಷವೊಡ್ಡಿ ಜನರನ್ನು ಸೈಬರ್ ವಂಚನೆಗೆ ಗುರಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನೂ ಓದಿ : SBIನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಈ ಸಂದೇಶದಿಂದ ದೂರವಿರಿ :ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ವೇಗವಾಗಿ ಹರಿದಾಡುತ್ತಿದೆ.ಇದರಲ್ಲಿರಿವಾರ್ಡ್ ಪಾಯಿಂಟ್ 9980 ರೂ ಎಂದು ಹೇಳಲಾಗಿದೆ.ಸಂದೇಶದಲ್ಲಿ,ಈ ರಿವಾರ್ಡ್ ಪಾಯಿಂಟ್ ಅನ್ನು ರಿಡೀಮ್ ಮಾಡಲು ಫೈಲ್ ಅನ್ನು ಡೌನ್‌ಲೋಡ್ ಮಾಡುವಂತೆ ಕೇಳಲಾಗುತ್ತದೆ.ಈ ಸಂದೇಶಗಳನ್ನು ಎಸ್‌ಎಂಎಸ್,ಇಮೇಲ್,ವಾಟ್ಸಾಪ್ ಮೂಲಕ ಜನರಿಗೆ ಕಳುಹಿಸಲಾಗುತ್ತಿದೆ.ಈ ಸಂದೇಶಗಳು ಸಂಪೂರ್ಣ ನಕಲಿ.ಈ ಸಂದೇಶವನ್ನು ಫ್ಯಾಕ್ಟ್ ಚೆಕ್ ನಲ್ಲಿ ನಕಲಿ ಎಂದು ಘೋಷಿಸಲಾಗಿದೆ.ಎಸ್‌ಬಿಐ ತನ್ನ ಗ್ರಾಹಕರಿಗೆ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಯಾವುದೇ ಲಿಂಕ್ ಅನ್ನು ಎಂದಿಗೂ ಕಳುಹಿಸುವುದಿಲ್ಲ ಎಂದು ಹೇಳಿದೆ. ಫೈಲ್ ಅನ್ನು ಡೌನ್‌ಲೋಡ್ ಮಾಡದಂತೆ ಜನರಿಗೆ ಬ್ಯಾಂಕ್ ಮತ್ತು ಸರ್ಕಾರವು ಸಲಹೆ ನೀಡಿದೆ.ಯಾವುದೇ ರೀತಿಯ ಬಹುಮಾನ ಇತ್ಯಾದಿಗಳಿಗಾಗಿ ಎಸ್‌ಬಿಐ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜನರಿಗೆ ಸಲಹೆ ನೀಡಲಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...