ಮಾನ್ಸೂನ್‌ನಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಪ್ಪಿಸುವುದು ಹೇಗೆ? : ರಾಜ್ಯದಲ್ಲಿ ಇದುವರೆಗೂ 17228 ಡೆಂಘೀ ಪ್ರಕರಣಗಳು ವರದಿಯಾಗಿವೆ. ಸಿಲಿಕಾನ್ ಸಿಟಿ ಬೆಂಗಳೂರು ಒಂದರೆಯಲ್ಲೇ ಡೆಂಘೀ ಪ್ರಕರಣಗಳ ಸಂಖ್ಯೆ ಏಳು ಸಾವಿರದ ಗಡಿ ದಾಟಿದೆ. :ಮಾನ್ಸೂನ್‌ನಲ್ಲಿ ಶೀತ, ನೆಗಡಿ, ಜ್ವರದ ಜೊತೆಗೆ ಸೊಳ್ಳೆಗಳಿಂದಲೂ ಡೆಂಗ್ಯೂ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ರಾಜ್ಯದೆಲ್ಲೆಡೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ 17228 ಡೆಂಘೀ ಪ್ರಕರಣಗಳು ವರದಿಯಾಗಿವೆ. ಸಿಲಿಕಾನ್ ಸಿಟಿ ಬೆಂಗಳೂರು ಒಂದರೆಯಲ್ಲೇ ಡೆಂಘೀ ಪ್ರಕರಣಗಳ ಸಂಖ್ಯೆ ಏಳು ಸಾವಿರದ ಗಡಿ ದಾಟಿದೆ. ಹಾಗಾಗಿ, ಭಾರೀ ಮಳೆಯ ನಡುವೆ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಪ್ಪಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ನಿರ್ವಹಿಸುವುದು ಬಹಳ ಮುಖ್ಯ. ಸೊಳ್ಳೆಗಳನ್ನು ತಪ್ಪಿಸಲು, ಮೊದಲನೆಯದಾಗಿ, ಮನೆಯೊಳಗೆ ಅಥವಾ ಅದರ ಸುತ್ತಲೂ ನೀರು ನಿಲ್ಲುವುದಂತೆ ನಿಗಾವಹಿಸಬೇಕು. ಇದಲ್ಲದೆ, ನಿತ್ಯ ಮಲಗುವಾಗ() ಪರದೆಗಳನ್ನು ಬಳಸುವುದು ಅವಶ್ಯಕ. ಮನೆಯಿಂದ ಹೊರಹೋಗುವಾಗ ಮನೆಯಿಂದ ಹೊರಡುವಾಗ ಫುಲ್ ಸ್ಲೀವ್ ಶರ್ಟ್ ಮತ್ತು ಫುಲ್ ಪ್ಯಾಂಟ್ ಧರಿಸಿ. ಅರಣ್ಯ ಮತ್ತು ಪೊದೆ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ. ಇದನ್ನೂ ಓದಿ- ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್!() ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕಿನ ಅಪಾಯವೂ ಹೆಚ್ಚಿರುತ್ತದೆ. ಆದ್ದರಿಂದ, ಸೋಂಕನ್ನು ನೀವೇ ತಪ್ಪಿಸಲು ಮತ್ತು ಇತರರನ್ನು ರಕ್ಷಿಸಲು ಕೆಲವು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. * ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು, ತಿನ್ನುವ ಮೊದಲು ಕೈಗಳನ್ನು ಚೆನ್ನಾಗಿ ಶುಚಿಗೊಳಿಸುವುದು, ಉಗುರುಬೆಚ್ಚಗಿನ ಮತ್ತು ಬೇಯಿಸಿದ ನೀರನ್ನು ಕುಡಿಯುವುದು ಇವುಗಳಲ್ಲಿ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳು ಸೇರಿವೆ. ಇದನ್ನೂ ಓದಿ- * ಸೋಂಕಿತ ಅಥವಾ ಪೀಡಿತ ಜನರಿಂದ ಅಂತರ ಕಾಯ್ದುಕೊಳ್ಳುವುದು, ಹೊರಗಿನಿಂದ ಮನೆಗೆ ಬಂದ ನಂತರ ನಿಮ್ಮ ಕೈ ಮತ್ತು ಪಾದಗಳನ್ನು ತೊಳೆಯುವುದು, ಮನೆಯಲ್ಲಿ ಗಾಳಿಯನ್ನು ಕಾಪಾಡಿಕೊಳ್ಳುವುದು ಮತ್ತು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯುವುದು ನಿಮ್ಮ ದಿನಚರಿಯಲ್ಲಿ ಒಳಗೊಂಡಿರಬೇಕು. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...