ರಾತ್ರಿ ಕಾಣಿಸುವ ಈ ಲಕ್ಷಣಗಳು ಹೇಳುತ್ತವೆ ಕಿಡ್ನಿ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ಎಂದು : ಕಿಡ್ನಿಯಲ್ಲಿ ಸಮಸ್ಯೆ ಉಂಟಾದಾಗ ದೇಹ ನಮಗೆ ಈ ಬಗ್ಗೆ ಸಣ್ಣ ಸುಳಿವು ನೀಡುತ್ತದೆ. ರಾತ್ರಿ ವೇಳೆಯಲ್ಲಿ ನಿಮ್ಮ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳಿಂದ ಕಿಡ್ನಿ ಆರೋಗ್ಯ ಕೆಟ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. :ಮೂತ್ರಪಿಂಡಗಳು ನಮ್ಮ ಹೊಟ್ಟೆಯೊಳಗೆ ಇರುವ ಒಂದು ಜೋಡಿ ಅಂಗಗಳಾಗಿವೆ. ಅದರ ಸಹಾಯದಿಂದ,ರಕ್ತದಲ್ಲಿನ ತ್ಯಾಜ್ಯ ವಸ್ತುಗಳು ಮತ್ತು ಹೆಚ್ಚುವರಿ ನೀರನ್ನು ದೇಹದಿಂದ ಹೊರ ಹಾಕಲಾಗುತ್ತದೆ.ಇದಲ್ಲದೆ ಮೂತ್ರಪಿಂಡಗಳು ದೇಹದಲ್ಲಿನ ರಾಸಾಯನಿಕಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.ಮೂತ್ರಪಿಂಡಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಮೂತ್ರಪಿಂಡಗಳು ಆರೋಗ್ಯಕರವಾಗಿಲ್ಲದಿದ್ದರೆ,ದೇಹದ ಅನೇಕ ಕಾರ್ಯಗಳು ಸ್ಥಗಿತಗೊಳ್ಳಬಹುದು.ಮೂತ್ರಪಿಂಡ ವೈಫಲ್ಯ ಸಂಭವಿಸುವ ಮೊದಲು,ನಮ್ಮ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ.ಈ ಚಿಹ್ನೆಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ಮುಖ ಊದಿಕೊಳ್ಳುವುದು :ಕಣ್ಣುರೆಪ್ಪೆಯ ಮೇಲೆ ಕಾಣಿಸಿಕೊಳ್ಳುವ ಊತಸೂಚಿಸುತ್ತದೆ. ಮೂತ್ರಪಿಂಡದ ವೈಫಲ್ಯದಿಂದಾಗಿ, ತ್ಯಾಜ್ಯ ಉತ್ಪನ್ನಗಳು ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ಮುಖದ ಮೇಲೆ ಊತ ಕಾಣಿಸಿಕೊಳ್ಳುತ್ತದೆ.ಮುಖದ ಮೇಲೆ ಊತ ಕಂಡುಬಂದರೆ ಒಮ್ಮೆ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು. ಇದನ್ನೂ ಓದಿ : ಕಾಲುಗಳಲ್ಲಿ ಊತ :ರಾತ್ರಿ ವೇಳೆ ನಿಮ್ಮ ಕಾಲುಗಳ ಸುತ್ತಲೂ ಊತ ಕಾಣಿಸಿಕೊಂಡರೆ ಅದು ಸಾಮಾನ್ಯ ಎಂದುಕೊಂಡು ನಿರ್ಲಕ್ಷಿಸಬೇಡಿ.ಇದು ಕಿಡ್ನಿ ಸಮಸ್ಯೆಯ ಸಂಕೇತವಾಗಿರಬಹುದು. ತುಂಬಾ ದಣಿವಾಗುವುದು :ಹಗಲಿನಲ್ಲಿ ನಾವು ಕೆಲಸದಲ್ಲಿ ಎಷ್ಟು ನಿರತರಾಗುತ್ತೇವೆ ಎಂದರೆ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕೂಡಾ ಗಮನಿಸುವುದಿಲ್ಲ. ಆದರೆ ರಾತ್ರಿ ವಿಶ್ರಾಂತಿ ಮಾಡುವಾಗಲೂ ಸುಸ್ಗುತ್ತಿದ್ದರೆ ಅದು ಅಪಾಯದ ಗಂಟೆ. ಸಾಕಷ್ಟು ವಿಶ್ರಾಂತಿ ತೆಗೆದುಕೊಂಡರೂ ಆಯಾಸ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಸ್ನಾಯು ಸೆಳೆತ :ರಾತ್ರಿಯಲ್ಲಿಮತ್ತು ಒತ್ತಿ ಹಿಡಿದಂತ ಅನುಭವವಾಗುವುದು ಮೂತ್ರಪಿಂಡದ ಹಾನಿಯನ್ನು ಸೂಚಿಸುತ್ತದೆ. ರಾತ್ರಿ ಇಂತಹ ರೋಗಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ತೋರದೆ ವೈದ್ಯರನ್ನು ಸಂಪರ್ಕಿಸಿ. ಇದನ್ನೂ ಓದಿ : ನಿದ್ದೆ ಬಾರದೆ ಇರುವುದು :ಕಿಡ್ನಿ ವೈಫಲ್ಯದಿಂದ ರಾತ್ರಿ ಮಲಗಲು ತುಂಬಾ ತೊಂದರೆಯಾಗುತ್ತದೆ. ವಿನಾ ಕಾರಣ ನಿದ್ದೆ ಬರುತ್ತಿಲ್ಲ ಎಂದಾದರೆ ತಜ್ಞರನ್ನು ಒಮ್ಮೆ ಸಂಪರ್ಕಿಸಿ. ಆದ್ದರಿಂದ ನಿಮ್ಮ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...