ಉಗುರಿನ ಬಣ್ಣವೂ ತಿಳಿಸುತ್ತೆ ನಿಮ್ಮ ಆರೋಗ್ಯದ ಗುಟ್ಟು! ಕಣ್ಣಿನಲ್ಲಿ ಹಳದಿ ಬಣ್ಣವು ಕಾಮಾಲೆ ರೋಗವನ್ನು ಸೂಚಿಸುವಂತೆ, ಉಗುರಿನ ಬಣ್ಣವು ನಮ್ಮ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. : ಕೈ ಬೆರಳಿನ ಉಗುರುಗಳು ನಮ್ಮ ಆರೋಗ್ಯ ಸ್ಥಿತಿಯನ್ನು ಸಹ ಸಂಕೇತಿಸುತ್ತವೆ. ಉಗುರುಗಳಲ್ಲಿ ಕಂಡುಬರುವ ಕೆಲವು ಲಕ್ಷಣಗಳು ನಮ್ಮ ದೇಹದಲ್ಲಿ ಕೆಲ ರೋಗ ಲಕ್ಷಣಗಳ ಬಗ್ಗೆ ಎಚ್ಚರಿಕೆಯ ಗಂಟೆಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಉಗುರು ಯಾವ ಬಣ್ಣದಲ್ಲಿದ್ದರೆ ಇದು ಯಾವ ಅನಾರೋಗ್ಯದ ಸಂಕೇತವಾಗಿರುತ್ತದೆ ಎಂದು ತಿಳಿಯೋಣ... ಉಗುರುಗಳ ಮೇಲೆ ಕಂಡು ಬರುವ ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ:-ಬಲಹೀನ ಉಗುರುಗಳು:( ) ನಮ್ಮ ದೇಹದಲ್ಲಿ ವಿಟಮಿನ್ ಎ, ವಿಟಮಿನ್ ಸಿ ಕೊರತೆಯನ್ನು ಸೂಚಿಸುತ್ತದೆ. ಹಳದಿ ಉಗುರುಗಳು:ಹಳದಿ ಬಣ್ಣದ ಉಗುರುಗಳು ( ) ಮಧುಮೇಹ, ಥೈರಾಯ್ಡ್ ಹಾಗೂ ಫಂಗಸ್ ಲಕ್ಷಣಗಳನ್ನು ಸೂಚಿಸುತ್ತದೆ. ಇದನ್ನೂ ಓದಿ- ಉಗುರಿನ ಮೇಲೆ ಕಪ್ಪು ಗೆರೆ:ಉಗುರಿನ ಮೇಲೆ ಕಪ್ಪುಗೆರೆಗಳಿದ್ದರೆ ಅದು ರಕ್ತನಾಳಗಳು,ಹಾಗೂ ಚರ್ಮದ ಸಮಸ್ಯೆಯ ಸಂಕೇತವಾಗಿದೆ. ಉಗುರಿನ ಮೇಲೆ ಉದ್ದ ರೇಖೆಗಳು:ಉಗುರಿನ ಮೇಲೆ ಉದ್ದ ರೇಖೆಗಳು ಕಂಡು ಬಂದರೆ ಇದು ದೇಹದಲ್ಲಿ ಕಬ್ಬಿಣದ ಕೊರತೆ, ರಕ್ತ ಹೀನತೆಯ ಸಾಮಾನ್ಯ ಲಕ್ಷಣವಾಗಿದೆ. ಇದನ್ನೂ ಓದಿ- ಉಗುರಿನ ಮೇಲೆ ಅಡ್ಡರೇಖೆಗಳು:ದೇಹದಲ್ಲಿ ಜಿಂಕ್ ಕೊರತೆ, ಮೂತ್ರಪಿಂಡದ ತೊಂದರೆಯಂತಹ ಸಮಸ್ಯೆಗಳಿದ್ದರೆ ಉಗುರುಗಳ ಮೇಲೆ ಅದ್ದರೇಖೆಗಳು ಕಾಣಿಸಿಕೊಳ್ಳುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...