ಈ ಆಹಾರಗಳೊಂದಿಗೆ ತಪ್ಪಿಯೂ ಸೇವಿಸಬಾರದು ನಿಂಬೆ ಹಣ್ಣು !ಹೊಟ್ಟೆ ಕೆಟ್ಟು ಸೇರಬೇಕಾದೀತು ಆಸ್ಪತ್ರೆ : ನಿಂಬೆ ಆಹಾರದ ರುಚಿ ಹೆಚ್ಚಿಸುತ್ತದೆ, ಮಾತ್ರವಲ್ಲ ಇದು ನಮ್ಮ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆದರೆ,ನಿಂಬೆಯನ್ನು ನಾವು ಯಾವ ಆಹಾರದ ಜೊತೆ ಸೇವಿಸುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. :ನಿಂಬೆ ಹುಳಿಯಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.ಇದನ್ನು ಬಹುತೇಕ ಆಹಾರಗಳಲ್ಲಿ ಬಳಸಲಾಗುತ್ತದೆ.ನಿಂಬೆ ರುಚಿಯ ಜೊತೆಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ನಿಂಬೆ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ,ಕೆಲವು ವಸ್ತುಗಳೊಂದಿಗೆ ನಿಂಬೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ.ಜೊತೆ ಕೆಲವು ಆಹಾರಗಳನ್ನು ಸೇವಿಸಬಾರದು.ಈ ಪದಾರ್ಥಗಳೊಂದಿಗೆ ನಿಂಬೆ ಸೇವಿಸಿದರೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಕೆಡಿಸುತ್ತದೆ.ಈ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನೂ ಓದಿ : ಹಾಲು :ನಿಂಬೆಯ ಆಮ್ಲೀಯ ಗುಣವು ಹಾಲಿನಲ್ಲಿರುವ ಪ್ರೋಟೀನ್‌ಗಳನ್ನು ಮೊಸರಿನಂತೆ ಹೆಪ್ಪುಗಟ್ಟಿಸುತ್ತದೆ.ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.ಅಲ್ಲದೆ,ಗ್ಯಾಸ್,ಅತಿಸಾರಕ್ಕೆ ಕಾರಣವಾಗಬಹುದು. ಮೀನು :ನಿಂಬೆ ರಸವು ಮೀನಿನಲ್ಲಿರುವ ಪ್ರೋಟೀನ್ ಗಳನ್ನೂ ಗಟ್ಟಿಗೊಳಿಸುತ್ತದೆ, ಹಾಗಾಗಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.ಇದಲ್ಲದೆ,ಇದು ಮೀನಿನ ನೈಸರ್ಗಿಕ ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಮೊಟ್ಟೆ :ಇರುತ್ತದೆ.ಇದು ನಿಂಬೆಯೊಂದಿಗೆ ಸಂಪರ್ಕಕ್ಕೆ ಬಂದಾಗ ಅದು ಗಟ್ಟಿಯಾಗುತ್ತದೆ.ಇದರಿಂದ ಜೀರ್ಣಕ್ರಿಯೆಯ ಸಮಸ್ಯೆ ಉಂಟಾಗುವುದು ಮಾತ್ರವಲ್ಲ,ಮೊಟ್ಟೆಯಿಂದ ದೇಹಕ್ಕೆ ಒದಗಬಹುದಾದ ಪೌಷ್ಟಿಕಾಂಶ ದೇಹಕ್ಕೆ ಸಿಗುವುದಿಲ್ಲ. ಇದನ್ನೂ ಓದಿ : ಮೊಸರು :ಮೊಸರಿನೊಂದಿಗೆ ನಿಂಬೆ ಸೇವನೆಯು ಹೊಟ್ಟೆಗೆ ಹಾನಿಕಾರಕವಾಗಿದೆ.ನಿಂಬೆಯ ಆಸಿಡ್ ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...