ವ್ಯಾಯಾಮ ಇಲ್ಲ.. ರನ್ನಿಂಗ್‌ ಮಾಡಲೇ ಇಲ್ಲ.. 21 ದಿನದಲ್ಲಿ ಮಾಧವನ್‌ ಸ್ಲಿಮ್ ಆಗಿದ್ದು ಹೇಗೆ? ಅದ್ಭುತ ಡಯಟ್ ಟಿಪ್ಸ್‌.. . : ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ಮತ್ತು ನಟನಾಗಿ ಗುರುತಿಸಿಕೊಂಡಿರುವ ಖ್ಯಾತ ನಟ ಮಾಧವನ್ ಇತ್ತೀಚೆಗೆ ತಮ್ಮ ಡಯಟ್‌ ಕುರಿತು ಮಾತನಾಡಿದ್ದಾರೆ... ಇದನ್ನು ಕೇಳಿದ ಅವರ ಅಭಿಮಾನಿಗಳು ತಾವು ಸಹ ಅದನ್ನೇ ಪಾಲಿಸಲು ಮುಂದಾಗಿದ್ದಾರೆ... ಅಷ್ಟಕ್ಕೂ ನಟ ಹೇಳಿದ್ದೇನು..? ಬನ್ನಿ ನೋಡೋಣ.. : :ಮಾಧವನ್ 1998 ರಲ್ಲಿ ಶಾಂತಿ ಶಾಂತಿ ಶಾಂತಿ ಎಂಬ ಕನ್ನಡ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಈ ನಟ ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಕೆಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಪ್ರತಿಭಾವಂತ ಸಿನಿನಟರಲ್ಲಿ ಮಾಧವನ್ ಕೂಡ ಒಬ್ಬರು. ಇವರ ಅಭಿನಯದ ಸಾಕಷ್ಟು ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ.. ಕನ್ನಡ ಸಿನಿಮಾ ಶಾಂತಿ ಶಾಂತಿ ಶಾಂತಿ ನಂತರ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾದ ನಟ, ಸಾಕಷ್ಟು ಮೆಗಾ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ.. ಇದನ್ನೂ ಓದಿ: 28 ವರ್ಷಗಳಿಂದ ಕಲಾ ಕ್ಷೇತ್ರದಲ್ಲಿ ಪ್ರಯಾಣಿಸುತ್ತಿರುವ ನಟ ಮಾಧವನ್ ಅವರು ಹಿಂದಿ, ತೆಲುಗು, ಇಂಗ್ಲಿಷ್ ಮತ್ತು ಮಲಯಾಳಂ ಮುಂತಾದ ಬಹು ಭಾಷೆಗಳಲ್ಲಿ ನಿರಂತರವಾಗಿ ನಟಿಸುತ್ತಿದ್ದಾರೆ. ಕಾಲಕಾಲಕ್ಕೆ ಕೆಲವು ಸಿನಿಮಾಗಳನ್ನೂ ನಿರ್ದೇಶಿಸುತ್ತಾರೆ. ಇದೀಗ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿರುವ ಮಾಧವನ್ ಅವರು ತಮ್ಮ ಫಿಟ್‌ನೆಸ್‌ ಕುರಿತು ಮಾತನಾಡಿದ್ದಾರೆ.. ರಾಕೆಟ್ರಿ ಚಿತ್ರದ ನಂತರ ಹೇಗೆ ತಾವು ತೂಕವನ್ನು ಕಳೆದುಕೊಂಡರು ಎಂಬ ವಿಚಾರವನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ.. ಅಷ್ಟಕ್ಕೂ ನಟನ ರೂಪಾಂತರದ ಗುಟ್ಟೇನು... ಬನ್ನಿ ನೋಡೋಣ.. ಇದನ್ನೂ ಓದಿ: ಮಾಧವನ್‌ ತಾವು ಸೇವಿಸುವ ಆಹಾರವನ್ನು ಕನಿಷ್ಠ 45 ರಿಂದ 60 ಬಾರಿ ಜಗಿತ್ತಾರಂತೆ.. ಅಲ್ಲದೆ, ಸಂಜೆ 6:45 ರಾತ್ರಿ ಊಟವನ್ನು ಮಾಡಿ ಮುಗಿಸುತ್ತಾರಂತೆ. ರಾತ್ರಿ ಮಲಗುವ ಕನಿಷ್ಠ ಒಂದೂವರೆ ಗಂಟೆ ಮೊದಲು ಸೆಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ದೂರವಿಡಿ, ಮಧ್ಯಾಹ್ನ ಸಾಕಷ್ಟು ಹಸಿರು ತರಕಾರಿಗಳನ್ನು ತಿನ್ನಿ, ಇದು ದೇಹವನ್ನು ಬದಲಾಯಿಸುತ್ತದೆ ಎಂದು ನಟ ಹೇಳಿಕೊಂಡಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...