ಮೃಣಾಲ್ ಠಾಕೂರ್ ಡಯಟ್ ಸೀಕ್ರೆಟ್ ಗೊತ್ತಾದ್ರೆ ನಾಳೆಯಿಂದ ಅದನ್ನೇ ಫಾಲೋ ಮಾಡ್ತೀರಾ..! : ಎಲ್ಲಾ ನಾಯಕಿಯರು ಸುಂದರವಾಗಿರಲು ಕಾರಣ ಅವರ ಆಹಾರಕ್ರಮ. ಹಾಗಾಗಿಯೇ ಯಾರಾದರೂ ನಾಯಕಿಯ ತಮ್ಮ ಡಯಟ್‌ ಪ್ಲ್ಯಾನ್‌ ಬಗ್ಗೆ ಹೇಳಿದರೆ ಅಭಿಮಾನಿಗಳು ಕುತೂಹಲದಿಂದ ಕೇಳುತ್ತಾರೆ. ಇತ್ತೀಚೆಗೆ, ಮೃಣಾಲ್ ಠಾಕೂರ್ ತನ್ನ ಆರೋಗ್ಯ ಗುಟ್ಟನ್ನ ರಟ್ಟು ಮಾಡಿದ್ದಾರೆ.. :ಸೌತ್‌ ಸಿನಿ ಪ್ರೇಕ್ಷಕರ ಮನಸೂರೆಗೊಂಡ ನಟಿ ಮೃಣಾಲ್ ಠಾಕೂರ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ.. ಸೀತಾರಾಮಂ ಸಿನಿಮಾದ ಮೂಲಕ ಈಗಾಗಲೇ ಎಲ್ಲಾ ವರ್ಗದ ಚಲನಚಿತ್ರ ಪ್ರೇಮಿಗಳ ಮನಗೆದ್ದ ಚೆಲುವೆ ಈಕೆ. ಈ ಸಿನಿಮಾದಿಂದ ಟಾಲಿವುಡ್‌ನಲ್ಲಿ ಸಖತ್‌ ಕ್ರೇಜ್‌ ಗಿಟ್ಟಿಸಿಕೊಂಡರು. ಆರಂಭದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಮತ್ತು ಸೀರಿಯಲ್ ಆರ್ಟಿಸ್ಟ್ ಆಗಿ ಕೆರಿಯರ್ ಆರಂಭಿಸಿದ ಸುಂದರಿ ಈಗ ನಾಯಕಿಯಾಗಿ ಸದ್ದು ಮಾಡುತ್ತಿದ್ದಾರೆ. ಮೃಣಾಲ್ ಠಾಕೂರ್ ಅವರ ಡಯಟ್ ಸೀಕ್ರೆಟ್ ತಿಳಿದರೆ ನೀವು ಅದನ್ನು ಅನುಸರಿಸುವುದೆ ಬಿಡುವುದಿಲ್ಲ. ಬನ್ನಿ ನಟಿಯ ಆಹಾರದ ರಹಸ್ಯವೇನು ಎಂದು ನೋಡೋಣ? ಇತ್ತೀಚೆಗೆ ಮೃಣಾಲ್ ಠಾಕೂರ್ ತಾವು ತಮ್ಮ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಸ್ಮೂಥಿ ಕುಡಿಯುತ್ತಾರೆ ಅಂತ ಹೇಳಿದ್ದಾರೆ.. ಹಾಗಿದ್ರೆ, ಆ ಸ್ಮೂಥಿ ಯಾವುದು..? ಅದನ್ನ ಮಾಡುವುದು ಹೇಗೆ? ಅದಕ್ಕೆ ಬೇಕಾದ ಪದಾರ್ಥಗಳೇನು? ಬನ್ನಿ ನೋಡೋಣ.. ಇದನ್ನೂ ಓದಿ: ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಳ್ಳಿ.. ಅದರಲ್ಲಿ ಎರಡು ಚಮಚ ಓಟ್ಸ್, ಒಂದು ಕಪ್ ಹಾಲು ಅಥವಾ ಮೊಸರು, ಸ್ವಲ್ಪ ಬ್ಲೂಬೆರ್ರಿ, ಸ್ಟ್ರಾಬೆರಿ, ಸ್ವಲ್ಪ ಬಾದಾಮಿ, ಒಂದು ಅಥವಾ ಎರಡು ಖರ್ಜೂರ ಹಾಕಿ.. ಇವೆಲ್ಲವನ್ನೂ ಮೃದುವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.. ಅಷ್ಟೇ ಆರೋಗ್ಯಕರ ಸ್ಮೂಥಿ ಸಿದ್ಧವಾಗಿದೆ.. ಮೃಣಾಲ್ ಠಾಕೂರ್ ಅವರು ಪ್ರತಿದಿನ ಈ ಸ್ಮೂಥಿಯನ್ನು ಕುಡಿಯುತ್ತಾರಂತೆ... ಹುಡುಗಿಯರೇ ಇನ್ನು ಏನ್ ಕಾಯ್ತೀರಿ.. ನೀವೂ ಮೃಣಾಲ್ ಟ್ಯಾಗೋರ್ ಅವರಂತೆ ಸುಂದರವಾಗಿ, ಯಂಗ್ ಆಗಿ ಕಾಣಬೇಕೆಂದರೆ ಈ ಆರೋಗ್ಯಕರ ಸ್ಮೂಥಿ ಟ್ರೈ ಮಾಡಿ ನೋಡಿ... ಹಾಗೆ ಈ ನ್ಯೂಸ್‌ ನಿಮ್ಮ ಗೆಳತಿಯರ ಜೊತೆ ಹಂಚಿಕೊಳ್ಳಿ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...