ನಾರ್ಮಲ್ ನಂತೆಯೇ ಕಾಣಿಸಬಹುದು, ಆದರೆ ಇದು ಹಾರ್ಟ್ ನಲ್ಲಿ ಬ್ಲೋಕೆಜ್ ಇರುವ ಲಕ್ಷಣ ಹೃದಯಾಘಾತ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹುವಾಗಿ ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಕಿರಿಯ ವಯಸ್ಸಿನಲ್ಲಿಯೇ ಅದೆಷ್ಟೂ ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೃದಯಾಘಾತಕ್ಕೆ ಮುಖ್ಯ ಕಾರಣ ಹಾರ್ಟ್ ಬ್ಲಾಕೆಜ್. ಬೆಂಗಳೂರು :ಹಾರ್ಟ್ ಬ್ಲಾಕೇಜ್ ಆದಾಗ ಹೃದಯಾಘಾತದ ಅಪಾಯ ಜಾಸ್ತಿ. ಈ ಹಾರ್ಟ್ ಬ್ಲಾಕ್ ಎನ್ನುವುದು ಮೂರೂ ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಲನೆಯ ಹಂತ ಅಪಾಯಕಾರಿಯಲ್ಲ, ಆದ್ರೆ ಮೂರನೇ ಹಂತ ಪ್ರಾಣ ತೆಗೆಯುವ ಹಂತ. ಹಾಗಾಗಿ ಹಾರ್ಟ್ ಬ್ಲಾಕ್ ಸಂಕೇತವನ್ನು ನಾವು ಗುರುತಿಸಿಕೊಳ್ಳಬೇಕು.ಹೃದಯದ ಅಪ್ಪರ್ ಚೇಂಬರ್ ನಿಂದ ವಿದ್ಯುತ್ ಸಂಕೇತಗಳು ಹೃದಯದ ಕೆಳಗಿನ ಚೇಂಬರ್ ಗೆ ಸರಿಯಾಗಿ ತಲುಪದಿದ್ದಾಗ ಹಾರ್ಟ್ ಬ್ಲಾಕ್ ಆಗುತ್ತದೆ. ಹಾರ್ಟ್ ಬ್ಲಾಕೇಜ್ ಲಕ್ಷಣಗಳನ್ನು ನಾವು ನಿರ್ಲಕ್ಷಿಸಿದರೆ ನಂತರ ಹೃದಯಾಘಾತದ ಅಪಾಯವನ್ನು ಎದುರಿಸಬೇಕಾಗುತ್ತದೆ. ಉಸಿರಾಟದ ಸಮಸ್ಯೆ :ಕೆಲವರಿಗೆ ಪದೇ ಪದೇಕಾಣಿಸಿಕೊಳ್ಳುತ್ತದೆ.ಉಸಿರು ತೆಗೆದುಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಇದು ಸಾಮಾನ್ಯ ಸಮಸ್ಯೆ ಅಂದುಕೊಂಡು ಸುಮ್ಮನಾಗುವ ಬದಲು ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಇದನ್ನೂ ಓದಿ : ಮೂರ್ಛೆ ಹೋಗುವುದು :ಪದೇ ಪದೇ ಮೂರ್ಛೆ ಹೋಗುತ್ತಿದ್ದರೆ, ಅದು ಹೃದಯದಲ್ಲಿ ಬ್ಲೋಕೆಜ್ ಇರುವ ಸಂಕೇತವಾಗಿರಬಹುದು.ಹೃದಯಾಘಾತವಾದಾಗಲೂ ಈ ಸಂಕೇತ ಕಂಡು ಬರುತ್ತದೆ.ಇದರೊಂದಿಗೆ,ನಿಮ್ಮ ಹೃದಯ ಬಡಿತಡ ವೇಗ ವಿಪರೀತ ಹೆಚ್ಚಾಗುತ್ತದೆ.ಈ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಎದೆ ನೋವು :ಇದ್ದರೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನವರು ಈ ಲಕ್ಷಣವನ್ನು ಗ್ಯಾಸ್ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ.ಆದರೆ, ಈ ಸಮಸ್ಯೆ ದೀರ್ಘಕಾಲದವರೆಗೆ ಕಾಡುತ್ತಿದ್ದರೆ ಸ್ಥಿತಿ ಗಂಭೀರವಾಗಬಹುದು. ಇದನ್ನೂ ಓದಿ : ತಲೆಸುತ್ತುವುದು :ತಲೆ ಸುತ್ತುವುದು ಹೃದಯದ ಬ್ಲೋಕೆಜ್ ನ ಸಂಕೇತವಾಗಿರಬಹುದು. ಯಾವುದೇ ಕಾರಣವಿಲ್ಲದೆ ಆಗಾಗ ತಲೆಸುತ್ತುತ್ತಿದ್ದರೆ ಅದು ಹೃದಯದ ಬ್ಲೋಕೆಜ್ ನಿಂದಲೇ ಆಗಿರುತ್ತದೆ. ವಾಕರಿಕೆ :ಯಾವುದೇ ಕಾರಣವಿಲ್ಲದೆ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುವುದು ಕೂಡಾ ಹೃದಯದ ಬ್ಲೋಕೆಜ್ ಅನ್ನು ಸೂಚಿಸುತ್ತದೆ. ಜನರು ಸಾಮಾನ್ಯವಾಗಿ ಇಂಥಹ ಚಿಹ್ನೆಗಳ ಬಗ್ಗೆ ನಿರ್ಲಕ್ಷ್ಯ ತೋರಿ ಬಿಡುತ್ತಾರೆ. (ಸೂಚನೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಧಾನಗಳು ಮತ್ತು ಸಲಹೆಗಳನ್ನು ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ವೈದ್ಯರನ್ನು ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...