: ದೇಹಕ್ಕಷ್ಟೇ ಅಲ್ಲ ಮನಸ್ಸಿನ ಆರೋಗ್ಯಕ್ಕೂ ಲಾಭದಾಯಕ ಸೂರ್ಯ ನಮಸ್ಕಾರ : ಉತ್ತಮ ಆರೋಗ್ಯಕ್ಕೆ ಬೇರೆಲ್ಲದಕ್ಕಿಂತ ಸೂರ್ಯ ನಮಸ್ಕಾರ ಮಾಡುವಂತೆ ಸಲಹೆ ನೀಡಲಾಗುತ್ತದೆ. ಸೂರ್ಯ ನಮಸ್ಕಾರವು ದೇಹಕ್ಕೆ ಅತ್ಯುತ್ತಮ ತಾಲೀಮು. ಮಾತ್ರವಲ್ಲ, ಇದು ಮನಸ್ಸಿನ ಮೇಲೂ ಅಗಾಧವಾದ ಧನಾತ್ಮಕ ಪರಿಣಾಮ ಬೀರುತ್ತದೆ. :ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಸೂರ್ಯೋದಯದ ಸಮಯದಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. 12 ಶಕ್ತಿಯುತ ಯೋಗ ಭಂಗಿಗಳ ಅನುಕ್ರಮವೇ ಸೂರ್ಯ ನಮಸ್ಕಾರ. ಸೂರ್ಯ ಮಾಡುವುದರಿಂದ ದೇಹಕ್ಕಷ್ಟೇ ಅಲ್ಲ ಮನಸ್ಸಿನ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ. ದಲ್ಲಿ ( ) ಮಾಡುವ ಆಸನಗಳು ದೇಹ, ಉಸಿರು ಮತ್ತು ಮನಸ್ಸು ಎಲ್ಲವನ್ನೂ ಒಟ್ಟಿಗೆ ತರುವ ಮೂಲಕ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. ಸೂರ್ಯ ನಮಸ್ಕಾರದಿಂದ ಆರೋಗ್ಯಕ್ಕೆ ಸಿಗುವ ಐದು ಪ್ರಮುಖ ಪ್ರಯೋಜನಗಳು ಯಾವುವು ಎಂದು ನೋಡುವುದಾದರೆ... 1) ತೂಕ ನಷ್ಟ:ಸೂರ್ಯ ನಮಸ್ಕಾರದಲ್ಲಿ ಮಾಡಲಾಗುವ ಕೆಲವು ಭಂಗಿಗಳು ಕಿಬ್ಬೊಟ್ಟೆಯ ಸ್ನಾಯುಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಸುತ್ತಲೂ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಿ, ಆರೋಗ್ಯಕರವಾಗಿ( ) ಸಹಾಯಕವಾಗಿದೆ. ಇದನ್ನೂ ಓದಿ- 2) ಸ್ನಾಯು ಶಕ್ತಿ:ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಇದು ಸ್ನಾಯುಗಳು, ಕೀಲುಗಳು, ಅಸ್ಥಿರಜ್ಜು ಮತ್ತು ಅಸ್ಥಿಪಂಜರದ ವ್ಯವಸ್ಥೆಯನ್ನು ಬಳಪಡಿಸಲು ಹಾಗೂ ಬೆನ್ನುಮೂಳೆಯ ನಮ್ಯತೆಯನ್ನು ಸುಧಾರಿಸಲು ಪ್ರಯೋಜನಕಾರಿ ಆಗಿದೆ. 3) ಚರ್ಮದ ಆರೋಗ್ಯ:ಸೂರ್ಯ ನಮಸ್ಕಾರ ಮಾಡುವುದರಿಂದ ಇದು ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಈ ಮೂಲಕ ಮುಖದಲ್ಲಿ ನೈಸರ್ಗಿಕ ಹೊಳಪನ್ನು ತರುತ್ತದೆ. ಅಷ್ಟೇ ಅಲ್ಲ, ಚರ್ಮದ ಸುಕ್ಕುಗಳಾಗದಂತೆ ತಡೆಯುತ್ತದೆ. 4) ಋತುಚಕ್ರ:ಅನಿಯಮಿತ ಋತುಚಕ್ರ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ನಿತ್ಯ ಸೂರ್ಯ ನಮಸ್ಕಾರ ಮಾಡುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. ಇದನ್ನೂ ಓದಿ- 5) ಮಾನಸಿಕ ಆರೋಗ್ಯ:ಸೂರ್ಯ ನಮಸ್ಕಾರ ಮಾಡುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಇದರಿಂದ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...