ಇಂತಹ ಆಹಾರಗಳ ಸೇವನೆಯಿಂದಲೂ ಹೆಚ್ಚಾಗುತ್ತೆ ಕ್ಯಾನ್ಸರ್ ಅಪಾಯ : ಬೇಕನ್, ಸಾಸೇಜ್‌ಗಳು, ಹಾಟ್ ಡಾಗ್‌ಗಳು ಮತ್ತು ಡೆಲಿ ಮಾಂಸಗಳನ್ನು, ವಿಶ್ವ ಆರೋಗ್ಯ ಸಂಸ್ಥೆ () ಕಾರ್ಸಿನೋಜೆನ್‌ ಗುಂಪು 1 ಎಂದು ವರ್ಗೀಕರಿಸಿದೆ. ಇವುಗಳ ಸೇವನೆಯಿಂದ ಕೊಲೊರೆಕ್ಟಲ್‌ ಕ್ಯಾನ್ಸರ್‌ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. :ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಅತ್ಯಂತ ಮಾರಕ ಕಾಯಿಲೆಯಾಗಿ ಹೊರಹೊಮ್ಮುತ್ತಿದೆ. ತಜ್ಞರ ಪ್ರಕಾರ, ಕೆಲವು ಆಹಾರ ಪದ್ಧತಿಗಳು ಸಹ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತವೆ. ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕೆಲವು ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಡಾ. ಹರೀಶ್ ಇ, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಲ್ಲ ಆಹಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. * ಸಂಸ್ಕರಿಸಿದ ಮಾಂಸ:ಬೇಕನ್, ಸಾಸೇಜ್‌ಗಳು, ಹಾಟ್ ಡಾಗ್‌ಗಳು ಮತ್ತು ಡೆಲಿ ಮಾಂಸಗಳನ್ನು,() ಕಾರ್ಸಿನೋಜೆನ್‌ ಗುಂಪು 1 ಎಂದು ವರ್ಗೀಕರಿಸಿದೆ. ಇವುಗಳ ಸೇವನೆಯಿಂದ ಕೊಲೊರೆಕ್ಟಲ್‌ ಕ್ಯಾನ್ಸರ್‌ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. * ಕೆಂಪು ಮಾಂಸ:ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮಾಂಸವನ್ನು (ಗೋಮಾಂಸ, ಹಂದಿಮಾಂಸ, ಕುರಿ ಮಾಂಸ) ಸೇವಿಸುವುದರಿಂದ, ಕೊಲೊರೆಕ್ಟಲ್, ಮೇದೋಜ್ಜೀರಕ ಗ್ರಂಥಿ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ- * ಮದ್ಯಪಾನ:ಬಾಯಿ, ಗಂಟಲು, ಅನ್ನನಾಳ, ಯಕೃತ್ತು, ಸ್ತನ ಮತ್ತು ಕೊಲೊನ್ ಕ್ಯಾನ್ಸರ್‌ ಗೆ ಕಾರಣವಾಗುತ್ತದೆ. * ಸಕ್ಕರೆ ಪಾನೀಯ ಮತ್ತು ಆಹಾರಗಳು:ಸಕ್ಕರೆಯಿಂದ ಮಾಡಿದ ಸಿಹಿಯಾದ ಪಾನೀಯ ಮತ್ತು ಆಹಾರಗಳ ಹೆಚ್ಚಿನ ಸೇವನೆ, ಸ್ಥೂಲಕಾಯವನ್ನುಂಟು ಮಾಡುತ್ತದೆ. ಅಲ್ಲದೆ ಸ್ತನ, ಯಕೃತ್ತು ಮತ್ತು ಕೊಲೊರೆಕ್ಟಲ್ ಸೇರಿದಂತೆ ಹಲವಾರು ರೀತಿಯ ಕ್ಯಾನ್ಸರ್‌ಗೂ ಕಾರಣವಾಗುವ ಸಾಧ್ಯತೆ ಇದೆ. * ಉಪ್ಪಿನಲ್ಲಿ ಸಂರಕ್ಷಿಸಿಟ್ಟ ಆಹಾರ:ಉಪ್ಪಿನ ಸಂಗ್ರಹಿಸಿಟ್ಟ ತರಕಾರಿ, ಉಪ್ಪಿನಕಾಯಿ, ಒಣ ಮೀನನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಹೊಟ್ಟೆಯ ಕ್ಯಾನ್ಸರ್ ಸಾಧ್ಯತೆ ಹೆಚ್ಚಿರುತ್ತದೆ. * ಸುಟ್ಟ, ಪ್ರೈ ಮಾಡಿದ ಮತ್ತು ಬೇಯಿಸಿದ (ತಂದೂರಿ) ಆಹಾರಗಳು:ಹೆಚ್ಚಿನ ಪ್ರಮಾಣದಲ್ಲಿ ಮಾಂಸವನ್ನು ಬೇಯಿಸುವುದು. ಉದಾಹರಣೆಗೆ ತಂದೂರಿ, ಗ್ರಿಲ್ಲಿಂಗ್ ಅಥವಾ ಪ್ರೈ ಮಾಡುವುದರಿಂದ ಪಾಲಿಸಿಕ್ಲಿಕ್‌ ಆರೊಮ್ಯಾಟಿಕ್‌ ಹೈಡ್ರೋಕಾರ್ಬನ್ ( ) ಮತ್ತು ಹೆಟೆರೋಸೈಕ್ಲಿಕ್‌ ಅಮೈನ್ಸ್‌ () ಎನ್ನುವ ಕಾರ್ಸಿನೋಜೆನಿಕ್‌ ಅಂಶಗಳನ್ನು ಉತ್ಪಾದಿಸುತ್ತವೆ. ಇದು ಕ್ಯಾನ್ಸರ್‌ ಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ- * ಹೆಚ್ಚು ಸಂಸ್ಕರಿಸಿದ ಆಹಾರಗಳು:ಸಂಸ್ಕರಿಸಿದ ಸಕ್ಕರೆ ಪದಾರ್ಥದ ಆಹಾರ ಸೇವನೆ ಮಾಡುವುದರಿಂದ ಬೊಜ್ಜು ಮತ್ತು ಕ್ಯಾನ್ಸರ್ ಸಾಧ್ಯತೆ ಹೆಚ್ಚಿದೆ. * ಟ್ರಾನ್ಸ್ ಫ್ಯಾಟ್ಸ್:ಕರಿದ ಪದಾರ್ಥ, ಬೇಕ್‌ ಮಾಡಿದ ಆಹಾರ ಮತ್ತು ಸಂಸ್ಕರಿಸಿದ ತಿಂಡಿಗಳಲ್ಲಿ ಕಂಡುಬರುವ ಟ್ರಾನ್ಸ್ ಫ್ಯಾಟ್ಸ್, ಉರಿಯೂತ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. *ಕೃತಕ ಸಿಹಿ:ಕೃತಕ ಸಿಹಿ ಪದಾರ್ಥಗಳ ಸೇವನೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಕೆಲವು ಅಧ್ಯಯನದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಇನ್ನೂ ನಿರ್ದಿಷ್ಟ ಸಾಕ್ಷಿಗಳು ಲಭ್ಯವಾಗಿಲ್ಲ. * ಕಲುಷಿತ ಆಹಾರಗಳು:ಅಫ್ಲಾಟಾಕ್ಸಿನ್‌ ಕೂಡಿದ ಆಹಾರಗಳು (ಸರಿಯಾಗಿ ಸಂಗ್ರಹಿಸದ ಧಾನ್ಯಗಳು ಮತ್ತು ಬೀಜಗಳ ಮೇಲೆ ಬೆಳೆಯುವ ಶಿಲೀಂಧ್ರ) ಅಥವಾ ಇತರ ಕಾರ್ಸಿನೋಜೆನ್ಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಹಣ್ಣು, ತರಕಾರಿ, ಧಾನ್ಯಗಳು ಮತ್ತು ನೇರ ಪ್ರೋಟೀನ್‌ಯುಕ್ತ ಸಮತೋಲಿತ ಆಹಾರ ಸೇವೆನೆಯಿಂದ ಹಾಗೂ ಈ ಮೇಲಿನ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದರಿಂದ ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದಾಗಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ವೈದ್ಯರ ಸಲಹೆಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...