ಬ್ಲಡ್ ಶುಗರ್ ನಿಯಂತ್ರಣದಲ್ಲಿಯೇ ಇರಬೇಕಾದರೆ ಬೆಳಿಗ್ಗೆ ಈ ಆಹಾರವನ್ನೇ ಸೇವಿಸಿ ! :ಮಧುಮೇಹಿಗಳು ತಮ್ಮ ಆಹಾರ ಪದ್ಧತಿಯ ಬಗ್ಗೆ ವಿಶೇಷ ಗಮನ ಹರಿಸಬೇಕು.ಈ ಕಾಯಿಲೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯಕ್ಕೆ ಅಪಾಯಕಾರಿ. :ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವೇ ಇಲ್ಲ. ಔಷಧಿಗಳು, ಸರಿಯಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳ ಮೂಲಕ ಇದನ್ನು ನಿಯಂತ್ರಿಸಬಹುದು ಅಷ್ಟೇ.ಮಧುಮೇಹ ಇದ್ದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವು ಅನಿಯಂತ್ರಿತವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ.ಇದು ದೇಹಕ್ಕೆ ಮಾರಕವಾಗಿ ಪರಿಣಮಿಸಬಹುದು. ಹೀಗಾಗಿ ಮಧುಮೇಹಿಗಳು ತಮ್ಮ ಆಹಾರ ಪದ್ಧತಿಯ ಬಗ್ಗೆ ವಿಶೇಷ ಗಮನ ಹರಿಸಬೇಕು.ಈ ಕಾಯಿಲೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯಕ್ಕೆ ಅಪಾಯಕಾರಿ. ಹೀಗಿರುವಾಗ ಮಧುಮೇಹ ರೋಗಿಗಳು ಯಾವ ಆಹಾರದ ಮೂಲಕ ತಮ್ಮ ದಿನವನ್ನು ಆರಂಭಿಸಬೇಕು ಎನ್ನುವ ಪ್ರಶ್ನೆ ಏಳುತ್ತದೆ. ಬೆಳಗಿನ ಉಪಾಹಾರ ಬಹಳ ಮುಖ್ಯ. ಮಧುಮೇಹ ರೋಗಿಗಳು ಬೆಳಗಿನ ಉಪಾಹಾರದಲ್ಲಿ ಏನನ್ನು ಸೇವಿಸುತ್ತಾರೆ ಎನ್ನುವುದು ಅವರ ಆರೋಗ್ಯವನ್ನೇ ನಿರ್ಧರಿಸುತ್ತದೆ. ಇದನ್ನೂ ಓದಿ : ಮಧುಮೇಹ ರೋಗಿಗಳು ಈ ಆಹಾರವನ್ನು ಬೆಳಗ್ಗೆ ಸೇವಿಸಬೇಕು :ಓಟ್ಸ್ :ಮಧುಮೇಹ ರೋಗಿಗಳಿಗೆ ಬೆಳಗಿನ ಉಪಾಹಾರಕ್ಕೆ ಓಟ್ಸ್ ಉತ್ತಮ ಆಯ್ಕೆಯಾಗಿದೆ.ಇವುಗಳಲ್ಲಿ ಫೈಬರ್ ಹೇರಳವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಹಠಾತ್ ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಮೊಟ್ಟೆ :ಮಧುಮೇಹಿಗಳು ಬೆಳಗಿನ ಉಪಾಹಾರದಲ್ಲಿ ಮೊಟ್ಟೆ ಸೇವಿಸಬಹುದು. ಇದು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದ್ದು, ಕಡಿಮೆ ಕಾರ್ಬೋಹೈಡ್ರೇಟ್ ಅನ್ನು ಹೊಂದಿರುತ್ತದೆ.ಇದರ ಸೇವನೆಯುನಿಯಂತ್ರಿಸಲು ಸಹಾಯ ಮಾಡುತ್ತದೆ.ಬೆಳಗಿನ ಉಪಾಹಾರಕ್ಕಾಗಿ 1-2 ಬೇಯಿಸಿದ ಮೊಟ್ಟೆಗಳನ್ನು ಅಥವಾ ಮೊಟ್ಟೆಯ ಆಮ್ಲೆಟ್ ಅನ್ನು ತಿನ್ನಬಹುದು. ಇದನ್ನೂ ಓದಿ : ಮೊಳಕೆ ಕಾಳು :ಬೆಳಗಿನ ಉಪಾಹಾರದಲ್ಲಿ ಮೊಇಳಕೆ ಕಾಳು ತಿನ್ನುವುದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಇದಕ್ಕಾಗಿ, ಮೊಳಕೆಯೊಡೆದ ಹೆಸರುಕಾಳಿಗೆ ಕತ್ತರಿಸಿದ ತರಕಾರಿಗಳು, ನಿಂಬೆ ರಸ ಮತ್ತು ಉಪ್ಪು ಬೆರೆಸಿ ತಿನ್ನಬಹುದು. ಇದರ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಉಪ್ಪಿಟ್ಟು :ಉಪ್ಪಿಟ್ಟು ಮಧುಮೇಹ ರೋಗಿಗಳಿಗೆ ಆರೋಗ್ಯಕರ ಮತ್ತು ಟೇಸ್ಟಿ ಉಪಹಾರ ಆಯ್ಕೆಯಾಗಿದೆ.ಇದು ರಕ್ತದಲ್ಲಿನ ಸಕ್ಕರೆಯಲ್ಲಿ ಹಠಾತ್ ಏರಿಕೆ ಉಂಟುಮಾಡುವುದಿಲ್ಲ.ಇದನ್ನು ತಯಾರಿಸುವುದು ಕೂಡಾ ತುಂಬಾ ಸುಲಭ. ಮೊಸರು :ಮಧುಮೇಹ ರೋಗಿಗಳು ಬೆಳಗಿನ ಉಪಾಹಾರಕ್ಕಾಗಿ ಮೊಸರನ್ನು ಸೇವಿಸಬಹುದು.ಫೈಬರ್ ಮತ್ತು ಪ್ರೋಟೀನ್ ಇದರಲ್ಲಿ ಹೇರಳವಾಗಿ ಇರುತ್ತದೆ.ಇದಲ್ಲದೆ,ಇದು ಪ್ರೊಬಯಾಟಿಕ್‌ಗಳ ಉತ್ತಮ ಮೂಲವಾಗಿದ್ದು, ಕಡಿಮೆ ಸಕ್ಕರೆಯನ್ನು ಹೊಂದಿರುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಎನ್ನುವ ಭಯ ಇರುವುದಿಲ್ಲ. (ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...