ಬೆಳಗಿನ ಉಪಹಾರ, ಮಧ್ಯಾಹ್ನ, ರಾತ್ರಿಯ ಭೋಜನ ಈ ಸಮಯಕ್ಕೆ ತಿಂದರಷ್ಟೇ ಪ್ರಯೋಜನ !ಇಲ್ಲವಾದರೆ ಹೊಟ್ಟೆ ಮಾತ್ರ ತುಂಬುವುದು ! : ಆರೋಗ್ಯ ತಜ್ಞರ ಪ್ರಕಾರ, ಸರಿಯಾದ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ, ದೇಹವು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯುವುದಿಲ್ಲ. ಬೆಂಗಳೂರು :ಆರೋಗ್ಯವಾಗಿರಲು ಆರೋಗ್ಯಕರ ಆಹಾರ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.ಆರೋಗ್ಯಕರ ಆಹಾರ ಸೇವನೆ ಮಾತ್ರವಲ್ಲ ಅದನ್ನು ಸರಿಯಾದ ಸಮಯಕ್ಕೆ ತಿನ್ನುವುದು ಕೂಡಾ ಅಷ್ಟೇ ಮುಖ್ಯ. ಆರೋಗ್ಯಕರವಾಗಿರಲು ಮತ್ತು ದೇಹದ ಫಿಟ್ ನೆಸ್ ಕಾಪಾಡಿಕೊಳ್ಳಲು ದಿನದ ಮೂರು ಹೊತ್ತು ಆಹಾರ ಸೇವನೆ ಬಹಳ ಮುಖ್ಯ.ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಭೋಜನ. ಆದರೆ ಇಂದಿನ ಬಿಡುವಿಲ್ಲದ ಜೀವನದಲ್ಲಿ ಹೆಚ್ಚಿನವರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದಿಲ್ಲ.ಈ ಕಾರಣದಿಂದಾಗಿ, ಅನೇಕ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ.ಆರೋಗ್ಯ ತಜ್ಞರ ಪ್ರಕಾರ,ಸರಿಯಾದ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ,ದೇಹವು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯುವುದಿಲ್ಲ. ಯಾವಾಗ ಉಪಹಾರ ಸೇವಿಸಬೇಕು? :ದಿನದ ಪ್ರಮುಖ ಆಹಾರವಾಗಿದೆ.ಬೆಳಗಿನ ಉಪಾಹಾರವನ್ನು ಎದ್ದ 3 ಗಂಟೆಗಳ ಒಳಗೆ ತೆಗೆದುಕೊಳ್ಳಬೇಕು.ಅಂದರೆ ಬೆಳಿಗ್ಗೆ 7 ರಿಂದ 9ಗಂಟೆಯ ಒಳಗೆ ಬೆಳಗ್ಗಿನ ಉಪಹಾರವನ್ನು ಸೇವಿಸಬೇಕು. ಬೆಳಿಗ್ಗೆ ಎದ್ದ 3 ಗಂಟೆಯೊಳಗೆ ಏನನ್ನಾದರೂ ತಿನ್ನಲೇ ಬೇಕು.ಅಲ್ಲದೆ 10 ಗಂಟೆಯ ನಂತರ ಉಪಾಹಾರವನ್ನು ಸೇವಿಸಬಾರದು ಎಂಬುದನ್ನು ನೆನಪಿಡಿ. ಇದನ್ನೂ ಓದಿ : ಸರಿಯಾದ ಸಮಯಕ್ಕೆ ಉಪಹಾರ ಸೇವಿಸುವುದರಿಂದ ದಿನವಿಡೀ ಚೈತನ್ಯ :ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯಲು ಪ್ರಯತ್ನಿಸಿ.ನಂತರ, ಫ್ರೆಶ್ ಅಪ್ ಆಗಿ ಉಪಹಾರವನ್ನು ಸೇವಿಸಿ.ಬೆಳಗಿನ ಉಪಾಹಾರದಲ್ಲಿ ಪೋಹಾ,ಗಂಜಿ,ಓಟ್ಸ್,ರೊಟ್ಟಿ-ತರಕಾರಿಗಳು, ಹಣ್ಣುಗಳು,ಜ್ಯೂಸ್ ಮತ್ತು ಶೇಕ್ ಇತ್ಯಾದಿಗಳನ್ನು ಸೇವಿಸಬಹುದು.ಬೆಳಗಿನ ಉಪಾಹಾರದಲ್ಲಿ ಫೈಬರ್ ಮತ್ತು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಬೇಕು.ಇದು ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿಡಲು ಸಹಾಯ ಮಾಡುತ್ತದೆ. ಊಟಕ್ಕೆ ಸರಿಯಾದ ಸಮಯ ಯಾವುದು? :ಉಪಹಾರ ಮತ್ತು ಊಟದ ನಡುವೆ ಸುಮಾರು 4 ಗಂಟೆಗಳ ಅಂತರವಿರಬೇಕು.ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಊಟಕ್ಕೆ ಉತ್ತಮ ಸಮಯ. 4 ಗಂಟೆಯ ನಂತರ ಊಟ ಮಾಡಬಾರದು. ಇದನ್ನೂ ಓದಿ : ರಾತ್ರಿ ಭೋಜನಕ್ಕೆ ಸರಿಯಾದ ಸಮಯ :ಆರೋಗ್ಯವಾಗಿ ಮತ್ತು ಫಿಟ್ ಆಗಿ ಇರಬೇಕಾದರೆ ಸಂಜೆ 6 ರಿಂದ 8 ರ ನಡುವೆ ರಾತ್ರಿಯ ಊಟ ಮಾಡಿ ಮುಗಿಸಬೇಕು.ರಾತ್ರಿ 9 ಗಂಟೆಯ ನಂತರ ಆಹಾರವನ್ನು ಸೇವಿಸಬಾರದು.ರಾತ್ರಿಯ ಊಟವನ್ನು ಯಾವಾಗಲೂ ಮಲಗುವ ಸುಮಾರು 3 ಗಂಟೆಗಳ ಮೊದಲು ಮಾಡಬೇಕು.ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.ಹಾಗಾಗಿ ತಡವಾಗಿ ಭೋಜನ ಮಾಡಿದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಾತ್ರಿ ಲಘು ಭೋಜನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಸಮಯಕ್ಕೆ ಸರಿಯಾಗಿ ತಿನ್ನುವುದರಿಂದ ಆಗುವ ಪ್ರಯೋಜನಗಳು :ಪ್ರತಿದಿನ ನಿಗದಿತ ಸಮಯಕ್ಕೆ ಆಹಾರವನ್ನು ಸೇವಿಸಿದರೆ,ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.ಅನೇಕ ರೀತಿಯ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. (ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...