: ಔಷಧೀಯ ಆಗರವಾಗಿರುವ ಎಳ್ಳಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ : ಅಭ್ಯಂಗ ಸ್ನಾನಕ್ಕೆ ಎಳ್ಳೆಣ್ಣೆ ಅತ್ಯುತ್ತಮ. ಪ್ರತಿದಿನ ಎಳ್ಳೆಣ್ಣೆಯನ್ನು ದೇಹಕ್ಕೆ ಮಾಲಿಶ್ ಮಾಡುವುದರಿಂದ ರಕ್ತ ಸಂಚಾರ ಸರಿಯಾಗಿ, ರಕ್ತವಿಕಾರ ಕಟಿಶೂಲೆ ವಾತ ದೂರವಾಗುತ್ತದೆ. ದೇಹ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ. :ಎಳ್ಳಿನ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಎಳ್ಳಿನ ಹೋಳಿಗೆ, ಎಳ್ಳಿನ ಉಂಡಿ, ಎಳ್ಳಿನ ಚಿಗಳಿ, ಸಂಕ್ರಾಂತಿ ಹಬ್ಬದಲ್ಲಿ ಕುಸರೆಳ್ಳು ಹೀಗೆ ಹಲವಾರು ರೀತಿಯಲ್ಲಿ ಬಳಸಲ್ಪಡುವ ಈ ಎಳ್ಳು ಔಷಧೀಯ ಗುಣಗಳ ಆಗರ. ಸ್ವಲ್ಪ ಕಹಿ, ಮಧುರ, ವಗರು ರುಚಿಗಳ ಸಮ್ಮಿಳಿತದಿಂದ ಕೂಡಿದ ಈ ಎಳ್ಳು ಕಫ ಪಿತ್ತ ನಾಶಕವಾಗಿದೆ. ಚರ್ಮಕ್ಕೆ ಕಾಂತಿ ಹಾಗೂ ದೇಹಕ್ಕೆ ಬಲ ನೀಡುತ್ತದೆ. ಕಪ್ಪು /ಬಿಳಿ/ಕಂದು ಹೀಗೆ ಮೂರು ಬಣ್ಣದ ಎಳ್ಳು ಸಿಗುತ್ತದೆ. . ದಲ್ಲಿ ಕಪ್ಪು ಎಳ್ಳನ್ನು ಶ್ರೇಷ್ಠ, ಬಿಳಿ ಎಳ್ಳನ್ನು ಮಧ್ಯಮ ಮತ್ತು ಕಂದು ಎಳ್ಳನ್ನು ತೃತೀಯ ಹೀಗೆ ವಿಂಗಡಿಸಲಾಗಿದೆ. ಎಳ್ಳು ಅತ್ಯಧಿಕ ಕ್ಯಾಲ್ಸಿಯಂ, ಐರನ್, ಮೆಗ್ನೀಷಿಯಂ, ಪೊಟ್ಯಾಷಿಯಂ, ವಿಟಮಿನ್ ಮತ್ತು ಫೈಬರ್ ಅಂಶಗಳಿಂದ ಸಮೃದ್ಧವಾಗಿದೆ. ಹಲವಾರು ಔಷಧೀಯ ಗುಣ ಹೊಂದಿರುವ ಎಳ್ಳು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಎಳ್ಳಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಎಳ್ಳಿನ ಅದ್ಭುತ ಆರೋಗ್ಯ ಪ್ರಯೋಜನಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...