ಕಿಡ್ನಿ ಸ್ಟೋನ್ ಮೂತ್ರದ ಮೂಲಕವೇ ಹೊರಹೋಗುವಂತೆ ಮಾಡುತ್ತೆ ಪೊದೆಗಳಲ್ಲಿ ಬೆಳೆಯುವ ಈ ಸೊಪ್ಪು! : ಸೊಪ್ಪುಗಳು ಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್-ಸಿನಿಂದ ಸಮೃದ್ಧವಾಗಿದೆ. ಹಸಿರು ತರಕಾರಿಗಳಿಂದ ಸಿಗುವ ಕ್ಯಾರೋಟಿನ್ ದೇಹದಲ್ಲಿ ವಿಟಮಿನ್-ಎ ಆಗಿ ಪರಿವರ್ತನೆಗೊಂಡು ಕುರುಡುತನವನ್ನು ತಡೆಯುತ್ತದೆ. :ಸೊಪ್ಪುಗಳು ಖನಿಜ ಮತ್ತು ಕಬ್ಬಿಣಾಂಶಗಳಲ್ಲಿ ಸಮೃದ್ಧವಾಗಿದೆ. ದೇಹದಲ್ಲಿ ಕಬ್ಬಿಣದ ಕೊರತೆಯಿಂದ, ರಕ್ತಹೀನತೆಯಿಂದ ಬಳಲುತ್ತಿರುವವರು ತಮ್ಮ ದೈನಂದಿನ ಆಹಾರದಲ್ಲಿ ಖಂಡಿತವಾಗಿಯೂ ಸೊಪ್ಪನ್ನು ಸೇರಿಸಿಕೊಳ್ಳಬೇಕು. ಇದರಿಂದ ರಕ್ತಹೀನತೆ ತಡೆದು ಉತ್ತಮ ಆರೋಗ್ಯ ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಇದನ್ನೂ ಓದಿ: ಇನ್ನುಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್-ಸಿನಿಂದ ಸಮೃದ್ಧವಾಗಿದೆ. ಹಸಿರು ತರಕಾರಿಗಳಿಂದ ಸಿಗುವ ಕ್ಯಾರೋಟಿನ್ ದೇಹದಲ್ಲಿ ವಿಟಮಿನ್-ಎ ಆಗಿ ಪರಿವರ್ತನೆಗೊಂಡು ಕುರುಡುತನವನ್ನು ತಡೆಯುತ್ತದೆ. ವಿಟಮಿನ್-ಸಿ ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳಿಗೆ ಅಗತ್ಯವಾದ ಪೋಷಕಾಂಶವಾಗಿದೆ. ಅಂದಹಾಗೆ ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ನೆಲಹಿಂಡಿ ಸೊಪ್ಪು ಕಾಣಸಿಗುತ್ತದೆ. ಇದನ್ನು ಗೊಂಗೂರ ಅಥವಾ ಪಿಂಡಿ ಸೊಪ್ಪು ಅಂತಲೂ ಕರೆಯುತ್ತಾರೆ. ಈ ನೆಲಹಿಂಡಿ ಸೊಪ್ಪು ಕಿಡ್ನಿಯಲ್ಲಿನ ಕಲ್ಲುಗಳನ್ನು ಕರಗಿಸುವ ಅದ್ಭುತ ಗುಣ ಹೊಂದಿದೆ. ನೆಲಹಿಂಡಿ ಸೊಪ್ಪು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಇದನ್ನು ಪುಡಿಮಾಡಿ ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕುದಿಸಿ. ಈ ನೀರನ್ನು ಅರ್ಧಕ್ಕೆ ಕುದಿಸಿದ ನಂತರ, ಸ್ಟವ್ ಆಫ್ ಮಾಡಿ. ಇದಕ್ಕೆ ಕೊಂಚ ಬೆಲ್ಲ ಸೇರಿಸಿ. ಈ ಮಿಶ್ರಣವನ್ನು ಪ್ರತಿದಿನ ಕುಡಿಯಿರಿ. ಈ ಮದ್ದು ಕುಡಿದ ನಂತರ ಒಂದು ಗಂಟೆ ಕಾಲ ಯಾವುದೇ ಆಹಾರ ತೆಗೆದುಕೊಳ್ಳಬಾರದು ಎನ್ನುತ್ತಾರೆ ತಜ್ಞರು. ಹೀಗೆ ಮಾಡಿದರೆ ಮೂತ್ರಕೋಶ ಮತ್ತು ಮೂತ್ರಪಿಂಡದಲ್ಲಿರುವ ಕಲ್ಲುಗಳು ಕರಗಿ ಮೂತ್ರದ ಮೂಲಕ ಹೋಗುತ್ತವೆ ಎಂದು ಹೇಳಲಾಗುತ್ತದೆ. ನೆಲಹಿಂಡಿ ಸೊಪ್ಪನ್ನು ಅನೇಕರು ಬೇಯಿಸಿ ತಿನ್ನುತ್ತಾರೆ. ಇದನ್ನು ಈರುಳ್ಳಿಯೊಂದಿಗೆ ಅಥವಾ ದಾಲ್‌’ನೊಂದಿಗೆ ಬೇಯಿಸಿದರೆ ತುಂಬಾ ರುಚಿಯಾಗಿರುತ್ತದೆ. ಉತ್ತಮ ಆರೋಗ್ಯ ಕೂಡ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...