ಕೇವಲ 10 ದಿನ ಕುಡಿದರೆ ಸಾಕು ಯೂರಿಕ್ ಆಸಿಡ್ ಅನ್ನು ದೇಹದಿಂದ ಸಂಪೂರ್ಣವಾಗಿ ಹೊರ ಹಾಕುತ್ತದೆ ಈ ಜ್ಯೂಸ್ ! : ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು ದಾಳಿಂಬೆ ರಸವನ್ನು ಕುಡಿಯಬಹುದು.ಈ ಕೆಂಪು ಬಣ್ಣದ ಜ್ಯೂಸ್ ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡುತ್ತದೆ. :ರಕ್ತದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಅದನ್ನು ಗೌಟ್ ಎಂದು ಕರೆಯಲಾಗುತ್ತದೆ.ಇದು ಕೀಲುಗಳಲ್ಲಿ ಯೂರಿಕ್ ಆಸಿಡ್ ಹರಳುಗಳು ರೂಪುಗೊಳ್ಳಲು ಪ್ರಾರಂಭಿಸುವ ಸ್ಥಿತಿಯಾಗಿದೆ.ಅಂತಹ ಪರಿಸ್ಥಿತಿಯಲ್ಲಿ, ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ.ರಕ್ತದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಕಿಡ್ನಿಯಲ್ಲಿ ಕಲ್ಲುಗಳಾಗುವ ಸಂಭವವಿರುತ್ತದೆ.ಇದು ಮುಖ್ಯವಾಗಿ ಪ್ಯೂರಿನ್‌ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ. ರಕ್ತದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬೇಕಾದರೆ ಪ್ಯೂರಿನ್ ಭರಿತ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು. ಅನ್ನು ನಿಯಂತ್ರಿಸಲು ದಾಳಿಂಬೆ ರಸವನ್ನು ಕುಡಿಯಬಹುದು.ಈ ಕೆಂಪು ಬಣ್ಣದ ಜ್ಯೂಸ್ ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ : ದಾಳಿಂಬೆ ಜ್ಯೂಸ್ ಪ್ರಯೋಜನ :ದಾಳಿಂಬೆ ರಸವು ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಸಿಟ್ರಿಕ್ ಮತ್ತು ಮಾಲಿಕ್ ಆಮ್ಲ ಹೇರಳವಾಗಿ ಕಂಡು ಬರುತ್ತದೆ.ಈ ಅಂಶವು ರಕ್ತದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.ಇದುಎದುರಿಸುವ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.ಕೀಲು ನೋವು ಅತಿಯಾಗಿ ಬಾಧಿಸುತ್ತಿದ್ದರೆ ಈ ರಸವನ್ನು ಸೇವಿಸಬಹುದು.ಇದಲ್ಲದೆ ದಾಳಿಂಬೆ ರಸವು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುತ್ತದೆ. ದಾಳಿಂಬೆ ರಸ ತಯಾರಿಸಲು ಬೇಕಾಗಿರುವ ಪದಾರ್ಥ :ಸಿಪ್ಪೆ ಸುಲಿದ ದಾಳಿಂಬೆ - 1 ರಿಂದ 2 ಕಪ್ಬ್ಲಾಕ್ ಸಾಲ್ಟ್ - ರುಚಿಗೆ ತಕ್ಕಂತೆ ಇದನ್ನೂ ಓದಿ : ತಯಾರಿಸುವ ವಿಧಾನ :ದಾಳಿಂಬೆ ಕಾಳುಗಳನ್ನು ಮಿಕಿಸ್ಯಲ್ಲಿ ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪ ಬ್ಲಾಕ್ ಸಾಲ್ಟ್ ಸೇರಿಸಿ.ನಿಮಗಿಷ್ಟ ಎಂದಾದರೆ ಪುದೀನ ಎಲೆಗಳನ್ನು ಕೂಡ ಸೇರಿಸಬಹುದು. ಈಗ ಫಿಲ್ಟರ್ ಮಾಡದೇ ಹಾಗೆಯೇ ಕುಡಿಯಿರಿ.ಇದು ಸಾಕಷ್ಟು ಪ್ರಯೋಜನಕಾರಿಯಾಗಬಹುದು. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...